Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರುಗೋಲಿನೊಂದಿಗೆ ನಡೆದು ಬಂದು ಬೆಂಗಳೂರು ಅಂತಾರಾಷ್ಟೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ

ಊರುಗೋಲಿನೊಂದಿಗೆ ನಡೆದು ಬಂದು ಬೆಂಗಳೂರು ಅಂತಾರಾಷ್ಟೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 01, 2025 | 7:50 PM

ಅಮೇರಿಕದಲ್ಲಿ ಚಿಕಿತ್ಸೆ ಪಡೆದು ಮೊನ್ನೆಯಷ್ಟೇ ಬೆಂಗಳೂರುಗೆ ವಾಪಸ್ಸಾಗಿರುವ ಶಿವರಾಜ್ ಕುಮಾರ್ ಸಹ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಖ್ಯಾತ ನಟ ಕಿಶೋರ್ ಕುಮಾರ್ ಅವರನ್ನು ಚಿತ್ರೋತ್ಸವದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಮಾರ್ಚ್ 8ರವರೆಗೆ ನಡೆಯಲಿರುವ ಉತ್ಸವದಲ್ಲಿ 200ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಬೆಂಗಳೂರು, ಮಾರ್ಚ್ 01: ಮಂಡಿನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 16 ನೇ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವದ (Bengaluru International Film Festival) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಅವರೀಗ ವ್ಹೀಲ್ ಚೇರ್ ಬಳಸುವುದನ್ನು ಬಿಟ್ಟಿದ್ದಾರೆ ಅನಿಸುತ್ತದೆ. ದೃಶ್ಯಗಳಲ್ಲಿ ಕಾಣುವ ಹಾಗೆ ಸಿದ್ದರಅಮಯ್ಯ ಬಲಗೈಯಲ್ಲಿ ಊರುಗೋಲು ಹಿಡಿದು ಎಡಗೈಯಲ್ಲಿ ಹಿರಿಯ ನಟಿ ಮತ್ತು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀಯವರ ಕೈ ಹಿಡಿದು ನಿಧಾನಕ್ಕೆ ನಡೆದುಬಂದರು. 2006ರಲ್ಲಿ ಶುರುವಾದ ಬೆಂಗಳೂರು ಚಲನಚಿತ್ರೋತ್ಸವವು ಈ ವರ್ಷ 16ನೇ ಆವೃತ್ತಿಯನ್ನು ಕಾಣುತ್ತಿದೆ. ಸಿದ್ದರಾಮಯ್ಯ ಜೊತೆ ಇಂಧನ ಸಚಿವ ಕೆಜೆ ಜಾರ್ಜ್, ಚಲನ ಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ವಿಧಾನ ಪರಿಷತ್ ಸದಸ್ಯ ಕೆ ಗೋವಿಂದರಾಜು ಮತ್ತು ಬೇರೆಯವರನ್ನು ನೋಡಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಅಶೋಕ ಮತ್ತು ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ