Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಅಶೋಕ ಮತ್ತು ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಅಶೋಕ ಮತ್ತು ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2025 | 1:44 PM

ಸಿದ್ದರಾಮಯ್ಯ ಮುಂದಿನ ವಾರ ಕರ್ನಾಟಕದ ಬಜೆಟ್ ಮಂಡಿಸಲಿದ್ದು ಅದರ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಪ್ರಾಯಶ: ಬೆಂಗಳೂರು ಬಿಜೆಪಿ ಶಾಸಕ ಮತ್ತು ಸಂಸದರು ತಮ್ಮ ಕ್ಷೇತ್ರಗಳಿಗೆ ಅಗತ್ಯವಿರುವುದನ್ನು ಸಿಎಂ ಗಮನಕ್ಕೆ ತರಲು ಭೇಟಿಯಾಗಿರಬಹುದು. ನಿಯೋಗದಲ್ಲಿ ಸಂಸದರಾದ ಪಿಸಿ ಮೋಹನ್ ಮತ್ತ್ತು ತೇಜಸ್ವೀ ಸೂರ್ಯ ಸಹ ಇದ್ದರು.

ಬೆಂಗಳೂರು, ಫೆ 28: ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ಬೆಂಗಳೂರು ಬಿಜೆಪಿ ಸಂಸದರು ಮತ್ತು ಶಾಸಕರ ನಿಯೋಗವೊಂದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah)  ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಯಿತು. ಮಂಡಿನೋವಿನಿಂದ ಬಳಲುತ್ತ ತಮ್ಮ ಓಡಾಟವನ್ನು ವ್ಹೀಲ್ ಚೇರ್​​ಗೆ ಸೀಮಿತಗೊಳಿಸಿಕೊಂಡಿರುವ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಹಸನ್ಮುಖದೊಂದಿಗೆ ಬರಮಾಡಿಕೊಂಡರು. ವಿಜಯೇಂದ್ರ ಮುಖ್ಯಮಂತ್ರಿಯವರಿಗೆ ಶಾಲು ಹೊದೆಸಿ ಸನ್ಮಾನಿಸಿದರೆ, ಅಶೋಕ ಬೃಹತ್ ಗಾತ್ರದ ಬೋಕೆ ನೀಡಿದರು. ಸಿದ್ದರಾಮಯ್ಯನವರು ವಿಜಯೇಂದ್ರ ಬೆನ್ನುತಟ್ಟ ಆತ್ಮೀಯತೆ ಪ್ರದರ್ಶಿಸಿದರು. ಶಾಸಕರಾದ ರಾಮಮೂರ್ತಿ, ಭೈರತಿ ಬಸವರಾಜ, ಕೆ.ಗೋಪಾಲಯ್ಯ, ಎಂ ಕೃಷ್ಣಪ್ಪ, ಎಸ್ಆರ್ ವಿಶ್ವನಾಥ್, ಮುನಿರತ್ನ, ಉದಯ ಗರುಡಾಚಾರ್, ಎಸ್ ರಘು, ರವಿಸುಬ್ರಮಣ್ಯ ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ ಕೇಶವಪ್ರಸಾದ್ ಮೊದಲಾದವರ ಸಿಎಂರನ್ನು ಭೇಟಿಯಾದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕರ್ನಾಟಕದಲ್ಲಿ ಏಕನಾಥ ಶಿಂಧೆ ಎಪಿಸೋಡ್ ಮರುಕಳಿಸಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ: ಬಿ ಶ್ರೀರಾಮುಲು

Published on: Feb 28, 2025 01:05 PM