AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್ ಮಾಡಿರುವ ಬೈಕ್​​ಗಳನ್ನು ಕಳುವು ಮಾಡೋದು ಆಂಧ್ರದ ಬೈಕ್ ಲಿಫ್ಟರ್​​ಗೆ ನೀರು ಕುಡಿದಷ್ಟೇ ಸುಲಭ!

ಲಾಕ್ ಮಾಡಿರುವ ಬೈಕ್​​ಗಳನ್ನು ಕಳುವು ಮಾಡೋದು ಆಂಧ್ರದ ಬೈಕ್ ಲಿಫ್ಟರ್​​ಗೆ ನೀರು ಕುಡಿದಷ್ಟೇ ಸುಲಭ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 28, 2025 | 2:09 PM

ಟಿವಿ9 ವರದಿಗಾರ ನೀಡುವ ಮಾಹಿತಿಯ ಪ್ರಕಾರ ಬಾಬುನಿಂದ ₹ 1.45 ಕೋಟಿ ಮೌಲ್ಯದ 100 ಕ್ಕೂ ಹೆಚ್ಚು ಬೈಕ್​ಗಳನ್ನು ಬರಾಮತ್ತು ಮಾಡಿಕೊಳ್ಳಲಾಗಿದೆ. ಈ ಕಳ್ಳನದೊಂದು ಫೆಟಿಶ್ ಮಾರಾಯ್ರೇ-ಏನು ಗೊತ್ತಾ? ದುಬಾರಿ ಬೆಲೆಯ ಬೈಕ್​ಗಳನ್ನು ಕದಿಯುವುದು! ಅವನಿಂದ ವಶಪಡಿಸಿಕೊಂಡಿರುವ ಬೈಕ್​ಗಳಲ್ಲಿ 20 ರಾಯಲ್ ಎನ್ಫೀಲ್ಡ್ ಮೇಕ್ ಆದರೆ 30ಕ್ಕಿಂತ ಹೆಚ್ಚು ಪಲ್ಸರ್ ಬೈಕ್​ಗಳು.

ಬೆಂಗಳೂರು, ಫೆ 28: ಗಮನವಿಟ್ಟು ನೋಡಿ, ಈತ ನಿಮ್ಮ ಏರಿಯಾದಲ್ಲೂ ಕಂಡಿರಬಹುದು. ಕೆಲಸವೊಂದನ್ನು ಕಷ್ಟಕರವಲ್ಲದಿದ್ದರೆ ನೀರು ಕುಡಿದಷ್ಟು ಸುಲಭ ಅನ್ನುತ್ತೇವೆ, ಆದರೆ ಇವನಿಗೆ ಲಾಕ್ ಮಾಡಿದ ಬೈಕ್​ಗಳನ್ನು ಕಳುವು ಮಾಡುವುದು ನೀರು ಕುಡಿಯುವುದಕ್ಕಿಂತಲೂ ಸುಲಭ! ಹೇಗೆ ಅಂತ ನೀವೇ ನೋಡಿ. ಅಂದಹಾಗೆ ಬೈಕ್ ಕದಿಯುವುದರಲ್ಲಿ ಮಹಾರಥನೆನಿಸಿಕೊಂಡಿರುವ ಇವನ ಹೆಸರು ಪ್ರಸಾದ್ ಬಾಬು, ಆಂಧ್ರಪ್ರದೇಶದ ಬಂಗಾರುಪಾಳ್ಯಂನವನು. ಕೆಅರ್ ಪುರಂ ಪೊಲೀಸರು ತಮ್ಮಲ್ಲಿ ದಾಖಲಾಗಿದ್ದ ದೂರುಗಳನ್ನು ಆಧರಿಸಿ ಪ್ರಸಾದ್ ಬಾಬು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೈಕ್ ಕಳ್ಳತನ ಆರೋಪಿ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಹುಬ್ಬಳ್ಳಿ ಪೊಲೀಸರ ಹಣದ ದಾಹ ಬಯಲು