ಎಟಿಎಂಗಳಲ್ಲಿ ಹಣ ತುಂಬುತ್ತಿದ್ದ ಔಟ್ಸೌರ್ಸಿಂಗ್ ಸಿಬ್ಬಂದಿಯೇ ದುಡ್ಡು ಕಳುವು ಮಾಡಿ ಸಿಕ್ಕಿಬಿದ್ದ!
ಪ್ರಾಯಶಃ ಇತ್ತೀಚಿಗೆ ಮದುವೆಯಾಗಿರುವ ದೇಸಾಯಿ ಕಳುವು ಮಾಡಿದ ಹಣದಿಂದ ಹೆಂಡತಿಗೆ ಎರಡು ಚಿನ್ನದ ಸರಗಳನ್ನು ಖರೀದಿಸಿದ್ದಾನೆ. ಅವನಿಂದ ₹ 7.3 ಲಕ್ಷ ಹಣವನ್ನು ರಿಕವರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಟಿನ್ ಹೇಳುತ್ತಾರೆ. ಚಿನ್ನ ಖರೀದಿಯಲ್ಲದೆ ದುಂದು ವೆಚ್ಚದ ಮೂಲಕವೂ ಅವನು ಹಣ ಖರ್ಚು ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ.
ಬೆಳಗಾವಿ: ಬ್ಯಾಂಕುಗಳ ಎಟಿಎಸ್ ಕಿಯಾಸ್ಕ್ಗಳಲ್ಲಿ ಹಣ ತುಂಬುವ ಕೆಲಸ ಮಾಡುವ ಔಟ್ಸೌರ್ಸಿಂಗ್ ಸಿಬ್ಬಂದಿಯೊಬ್ಬ ತಾನು ದುಡ್ಡು ಜಮಾ ಮಾಡಿದ ಹೆಚ್ಡಿಎಫ್ಸಿ ಬ್ಯಾಂಕಿನ ಎಟಿಎಂ ಒಂದರಿಂದ ₹ 8.65 ಲಕ್ಷ ಕಳುವು ಮಾಡಿ ಸಿಕ್ಕಿಬಿದ್ದಿದ್ದಾನೆ. ಕಳ್ಳ, ಕಳುವು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬೆಳಗಾವಿಯ ಪೊಲೀಸ್ ಕಮೀಶನರ್ ಅಡಾ ಮಾರ್ಟಿನ್ ಮಾರ್ಬನಿಯಾಂಗ್ ನೀಡಿದ್ದಾರೆ. ಕೇವಲ 23-ವರ್ಷ ವಯಸ್ಸಿನ ಕಳ್ಳ ಕೃಷ್ಣ ಸುರೇಶ್ ದೇಸಾಯಿ ನಗರದ ಜ್ಯೋತಿ ನಗರದ ನಿವಾಸಿ. ಇದಕ್ಕೆ ಮೊದಲು ದೇಸಾಯಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಅಂದರೆ ಅವನು ಹ್ಯಾಬಿಚುಯಲ್ ಅಫೆಂಡರ್ ಅಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
Latest Videos