ಮಂಗಳೂರಿನ ತಲಪಾಡಿಯಲ್ಲಿ ಮನೆ ಮೇಲೆ ತಡೆಗೋಡೆ ಕುಸಿತ; ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಭೇಟಿ
ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ಹಲವೆಡೆ ಭೂಕುಸಿತವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮೊಯ್ದಿನ್ ಎಂಬುವವರ ಮನೆಯ ಪಕ್ಕ ನಿರ್ಮಿಸಿದ್ದ ತಡೆಗೋಡೆ ಕುಸಿದು ತಡೆಗೋಡೆಯ ಕೆಳ ಭಾಗದಲ್ಲಿರುವ ಯಾಸೀನ್ ಬೇಗ್ ಅವರ ಮನೆ ಮೇಲೆ ಬಿದ್ದಿತ್ತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದಲ್ಲಿ ಮನೆ ಮೇಲೆ ಬೃಹತ್ ತಡೆಗೋಡೆ ಕುಸಿತವಾದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ ನೀಡಿದ್ದಾರೆ. ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ ಖಾದರ್ ಮನೆಯವರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ತಡೆಗೋಡೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. ಯಾಸೀನ್ ಬೇಗ್ ಎಂಬುವವರ ಮನೆಯ ಮೇಲೆ ಕುಸಿದು ಬಿದ್ದಿದ್ದ ತಡೆಗೋಡೆಯಿಂದ ಮನೆಗೆ ಹಾನಿಯಾಗಿದ್ದರೂ ಕುಟುಂಬ ಜೀವಾಪಾಯದಿಂದ ಪಾರಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮೊಯ್ದಿನ್ ಎಂಬುವವರ ಮನೆಯ ಪಕ್ಕ ನಿರ್ಮಿಸಿದ್ದ ತಡೆಗೋಡೆ ಕುಸಿದು ತಡೆಗೋಡೆಯ ಕೆಳ ಭಾಗದಲ್ಲಿರುವ ಯಾಸೀನ್ ಬೇಗ್ ಅವರ ಮನೆ ಮೇಲೆ ಬಿದ್ದಿತ್ತು. ಮನೆಯೊಳಗಿದ್ದ ಯಾಸೀನ್ ಬೇಗ್ ಹಾಗೂ ಅವರ 5 ಮಂದಿ ಕುಟುಂಬ ಸದಸ್ಯರು ಶಬ್ದ ಕೇಳಿ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ತಡೆಗೋಡೆ ಬಿದ್ದ ರಭಸಕ್ಕೆ ಮನೆಯು ಸದ್ಯ ಅಪಾಯ ಸ್ಥಿತಿಯಲ್ಲಿದೆ. ಅಪಾಯ ಇರುವ ಹಿನ್ನೆಲೆಯಲ್ಲಿ ಆ ಕುಟುಂಬವನ್ನು ಮನೆಯಿಂದ ಸ್ಥಳಾಂತರ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ