ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವ ಚರ್ಚೆ ನಡೆಯುತ್ತಿದೆ, ಇನ್ನೂ ನಿರ್ಧಾರ ಮಾಡಿಲ್ಲ: ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವ ಚರ್ಚೆ ನಡೆಯುತ್ತಿದೆ, ಇನ್ನೂ ನಿರ್ಧಾರ ಮಾಡಿಲ್ಲ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 03, 2024 | 5:28 PM

ಕೆಪಿಸಿಸಿ ಅಧ್ಯಕ್ಷ ಅಹಿಂದ ವರ್ಗಕ್ಕೆ ಸೇರಿವರನ್ನ ಪರಿಗಣಿಸಲಾಗುತ್ತೋ ಅಥವಾ ಮುಂದುವರಿದ ಸಮುದಾಯವೊಂದರ ನಾಯಕನಿಗೆ ಪಟ್ಟ ನೀಡಲಾಗುತ್ತೋ ಅನ್ನೋದು ಮುಖ್ಯವಲ್ಲ, ಅಧ್ಯಕ್ಷನಾದವನಿಗೆ ಎಲ್ಲ ಸಮುದಾಯಗಳ ಮತ ಸೆಳೆಯುವ ಸಾಮರ್ಥ್ಯ ಇರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ: ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಚರ್ಚೆ ನಡೀತಾ ಇರೋದು ಸತ್ಯ, ಆದರೆ ಪಕ್ಷದ ವರಿಷ್ಠರು ಬದಲಾವಣೆ ಮಾಡುವ ಕುರಿತು ಹೇಳಿಕೆ ನೀಡಿಲ್ಲ, ಬಹಳಷ್ಟು ರಾಜ್ಯಗಳಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆಗಬೇಕಿರುವುದರಿಂದ ಅದು ನಡೆಯೋದು ಮಾತ್ರ ನಿಶ್ಚಿತ, ತನಗೆ ಜವಾಬ್ದಾರಿ ವಹಿಸುವ ನಿರ್ಧಾರವನ್ನು ಎಐಸಿಸಿ ಮಾಡಿದಾಗ ನೋಡೋಣ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ