ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ತಡವಾಗಿ ತಲುಪುತ್ತಿದೆ ಅಂದಾಗ ಲಕ್ಷ್ಮಿ ಹೆಬ್ಬಾಳ್ಕರ್ರಿಂದ ವಿತಂಡವಾದ!
ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಕೂಗು ಕೇಳಿಬರುತ್ತಿದೆ, ಕೆಲ ಮಂತ್ರಿಗಳು ಜವಾಬ್ದಾರಿ ಹೊತ್ತುಕೊಳ್ಳುವುದಕ್ಕೆ ತಯಾರಾಗಿದ್ದಾರಲ್ಲ ಅಂತ ಕೇಳಿದಾಗ ಸಚಿವೆ ಹೆಬ್ಬಾಳ್ಕರ್, ತನಗೆ ಸತ್ಯವಾಗಿಯೂ ಅದರ ಬಗ್ಗೆ ಏನೂ ಗೊತ್ತಿಲ್ಲ, ಇಲಾಖೆಯ ಕೆಲಸಗಳನ್ನು ನೋಡಿಕೊಳ್ಳಲು ಸಮಯ ಸಾಕಾಗುತ್ತಿಲ್ಲ, ಗೃಹಲಕ್ಷ್ಮಿಯೋಜನೆ ಹಣ ತಲುಪಲು ತಡವಾದರೆ ದಿನಕ್ಕೆ 500 ಕರೆಗಳು ಬರುತ್ತವೆ, ಉತ್ತರಿಸುವಷ್ಟರಲ್ಲಿ ದಿನವೇ ಕಳೆದು ಹೋಗುತ್ತದೆ ಎಂದರು.
ಬೆಂಗಳೂರು: ಗೃಹಲಕ್ಷ್ಮಿ ಫಲಾನುಭವಿಗಳಿಗೆ ರಾಜ್ಯಸರ್ಕಾರ ನೀಡುತ್ತಿರುವ ಮಾಸಿಕ ನೆರವು ಯಾಕೆ ನಿಗದಿತ ಸಮಯಕ್ಕೆ ಸಿಗುತ್ತಿಲ್ಲ, ಪ್ರತಿ ತಿಂಗಳು ಲೇಟಾಗಿತ್ತಿದೆ ಎಂದು ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತರ್ಕರಹಿತ ಪ್ರತಿಕ್ರಿಯೆ ನೀಡಿದರು. ಸರ್ಕಾರೀ ನೌಕರರಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಸಂಬಳ ಸಿಗಲ್ಲ, ಮಾಧ್ಯಮಗಳಲ್ಲಿ ತಿಂಗಳು ಮುಗಿಯುತ್ತಿದ್ದಂತೆಯೇ ಸಂಬಳ ಸಿಗುತ್ತದೆಯೇ ಅಂತ ಅವರು ಹೇಳುತ್ತಿರುವಾಗಲೇ ವರದಿಗಾರರು ನಮಗೆಲ್ಲ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಸಿಗುತ್ತದೆ ಅಂತ ಒಕ್ಕೊರಲಿನಿಂದ ಹೇಳಿದಾಗ ಸಚಿವೆ ತಬ್ಬಿಬ್ಬಾದರೂ ತಮ್ಮ ವಿತಂಡವಾದ ಮುಂದುವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SDA ರುದ್ರಣ್ಣ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಕಾರಣ ಎಂದು ಮೆಸೇಜ್
Latest Videos