SDA ರುದ್ರಣ್ಣ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್​: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಕಾರಣ ಎಂದು ಮೆಸೇಜ್

ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದು ರಾಜಕೀಯವಾಗಿ ತಿರುಗುವ ಎಲ್ಲಾ ಸಾಧ್ಯತೆಗಳಿವೆ. ಯಾಕಂದ್ರೆ, ಸಾವಿಗೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಹೆಸರು ಉಲ್ಲೇಖ ಮಾಡಲಾಗಿದೆ. ಹೀಗಾಗಿ ಈ ಪ್ರಕರಣ ಗಂಭೀರವಾಗಿದೆ. ಹಾಗಾದ್ರೆ, ಸಾವಿಗೂ ಮುನ್ನ ರುದ್ರಣ್ಣ ಮೆಸೇಜ್​ನಲ್ಲಿ ಯಾರೆಲ್ಲಾ ಹೆಸರು ಉಲ್ಲೇಖಿಸಿದ್ದಾರೆ ಎನ್ನುವ ವಿವರ ಇಲ್ಲಿದೆ.

SDA ರುದ್ರಣ್ಣ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್​: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಕಾರಣ ಎಂದು ಮೆಸೇಜ್
ಎಸ್​​ಡಿಎ ರುದ್ರೇಶ್, ಲಕ್ಷ್ಮೀ ಹೆಬ್ಬಾಳ್ಕರ್​
Follow us
Sahadev Mane
| Updated By: ರಮೇಶ್ ಬಿ. ಜವಳಗೇರಾ

Updated on:Nov 05, 2024 | 3:36 PM

ಬೆಳಗಾವಿ , (ನವೆಂಬರ್ 05): ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ SDA ಅಂದ್ರೆ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ 35 ವರ್ಷದ ರುದ್ರಣ್ಣ ಯಡಣ್ಣನವರ್ SDA ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆಯಷ್ಟೇ (ನವೆಂಬರ್ 05) ಬೆಳಗಾವಿ ಕಚೇರಿಯಿಂದ ಸವದತ್ತಿಯ ತಹಶೀಲ್ದಾರ್ ಕಚೇರಿಗೆ ರುದ್ರಣ್ಣ ಅವರನ್ನ ಟ್ರಾನ್ಸಫರ್ ಮಾಡಿ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಅವರು ಆದೇಶ ಮಾಡಿದ್ದರು. ಆದ್ರೆ, ಇಂದು ಬೆಳಗಿನಿ ಜಾವ ತಹಶೀಲ್ದಾರ್ ಕಚೇರಿಗೆ ಬಂದಿದ್ದ ರುದ್ರಣ್ಣ, ತಹಶೀಲ್ದಾರ್ ಬಸರಾಜ್ ಕೊಠಡಿಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. SDA ರುದ್ರಣ್ಣ ಆತ್ಮಹತ್ಯೆ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ವರ್ಗಾವಣೆ ದಂಧೆಗೆ ರುದ್ರಣ್ಣ ಬಲಿಯಾದ್ನಾ ಎನ್ನುವ ಅನುಮಾನ ಹುಟ್ಟುವಂತೆ ಮಾಡಿದೆ. ಅದಕ್ಕೆ ಕಾರಣ ಖುದ್ದು ರುದ್ರಣ್ಣ ನಿನ್ನೆ ವಾಟ್ಸಾಪ್​ನಲ್ಲಿ ಮಾಡಿದ ಮೆಸೇಜ್.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಉಲ್ಲೇಖ

ಆಘಾತಕಾರಿ ವಿಚಾರ ಅಂದ್ರೆ, ನಿನ್ನೆ ತನ್ನ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ಅಂದ್ರೆ ಸಂಜೆ 7 ಗಂಟೆ 31 ನಿಮಿಷಕ್ಕೆ ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಹಾಗೂ ಸೋಮು ಇವರೇ ನೇರಕಾರಣ, ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮಸೇಜ್ ಹಾಕಿದ್ದ. ಅಲ್ಲದೇ ತನ್ನ ವರ್ಗಾವಣೆ ಆದೇಶ ಪ್ರತಿಯನ್ನೂ ವಾಟ್ಸಾಪ್ ಮಾಡಿದ್ದ. ಹಾಗೇನೆ 7 ಗಂಟೆ 35 ನಿಮಿಷಕ್ಕೆ ಅಶೋಕ್ ಕಬ್ಬಲಿಗೇರ್ ಕೂಡಾ ಕಾರಣ ಎಂದು ಮೆಸೇಜ್ ಮಾಡಿದ್ದ. ಇದಾದ್ಮೇಲೆ, ರಾತ್ರಿ ಮನೆಯಲ್ಲಿ ಪತ್ನಿ ತಾಯಿ ಜೊತೆಗೆ ಊಟಕ್ಕೆ ಕೂತಿದ್ದ. ಯಾರದ್ದೋ ಫೋನ್​ ಬಂತು ಅಂತಾ ಊಟವನ್ನ ಅರ್ಧಕ್ಕೆ ಬಿಟ್ಟು ಎದ್ದು ಹೋಗಿದ್ದನಂತೆ. ಹೀಗಂತಾ ಖುದ್ದು ರುದ್ರಣ್ಣ ಅವರ ತಾಯಿಯೇ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ತಹಶೀಲ್ದಾರ್​ ಕಚೇರಿಯಲ್ಲೇ ಎಸ್​ಡಿಎ ರುದ್ರಣ್ಣ ಆತ್ಮಹತ್ಯೆ

ಇಷ್ಟಾಗಿದೆ, ರಾತ್ರಿ ಮಲಗಿದ್ದ ರುದ್ರಣ್ಣ ಬೆಳಗಿನ ಜಾವವೇ ತಹಶೀಲ್ದಾರ್ ಕಚೇರಿಗೆ ಬಂದು ಸೂಸೈಡ್ ಮಾಡಿಕೊಂಡಿದ್ದಾರೆ. ಸದ್ಯ ರುದ್ರಣ್ಣ ವಾಟ್ಸಾಪ್ ಮಸೇಜ್​ನಲ್ಲಿ ಉಲ್ಲೇಖಿಸಿರು ಸೋಮು ಎನ್ನುವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ. ಹೀಗಾಗಿ ರುದ್ರಣ್ಣ ಸಾವಿನ ವಿಚಾರದಲ್ಲಿ ಸಾಕಷ್ಟು ಅನುಮಾನ ಮೂಡುವಂತೆ ಮಾಡಿವೆ.

ಸಿಎಂ ರಾಜೀನಾಮೆಗೆ ಅಶೋಕ್ ಆಗ್ರಹ

ಇನ್ನು ಈ ಬಗ್ಗೆ ವಿಪಕ್ಷ ನಾಯಕರ ಪ್ರತಿಕ್ರಿಯಿಸಿದ್ದು, ಡೆತ್​ನೋಟ್​ನಲ್ಲಿ ಸಚಿವೆ ಹೆಬ್ಬಾಳ್ಕರ್​​ ಪಿಎ ಸೋಮು ಹೆಸರು ಉಲ್ಲೇಖವಾಗಿದೆ. ಕಿರುಕುಳದಿಂದ ಆತ್ಮಹತ್ಯೆ ಅಂತಾ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್​​ ಸರ್ಕಾರದ ಕಿರುಕುಳದಿಂದ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನ‌ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಏನೇ ಆದರೂ ರುದ್ರಣ್ಣ ನಿನ್ನೆ ಸಂಜೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿದ್ರು. ಹೀಗಿದ್ರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋದು ಎದ್ದು ಕಾಣುತ್ತಿದೆ. ನಿನ್ನೆ ಸಂಜೆಯೇ ರುದ್ರಣ್ಣ ಅವರನ್ನ ಕರೆದು ಮಾತಾಡಿ ಸಮಸ್ಯೆ ಸರಿಪಡಿಸಬಹುದಿತ್ತು. ಆದ್ರೆ ತಹಶೀಲ್ದಾರ್ ಬಸವರಾಜ್ ಅದನ್ನ ಮಾಡಿಲ್ಲ. ಮೇಲಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಈತನಿಗೆ ಕಿರುಕುಳ ಕೊಟ್ಟಿದ್ದು ಯಾಕೆ. ಹೀಗೆಂದು ಅಧಿಕಾರಿಗಳ ನಡೆಯ ಮೇಲೆ‌ ಮೂಡಿದೆ ಸಾಕಷ್ಟು ಅನುಮಾನ ಮೂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:34 pm, Tue, 5 November 24

ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಧಾರವಾಡ: ಶಾಲಾ ಮಕ್ಕಳ ಮೇಲೆ ಕೋತಿ ದಾಳಿ
ಧಾರವಾಡ: ಶಾಲಾ ಮಕ್ಕಳ ಮೇಲೆ ಕೋತಿ ದಾಳಿ
ಮುಂದಿನ ಸಲ ದೆಹಲಿ ಬಂದಾಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸುತ್ತೇವೆ: ಶಾಸಕ
ಮುಂದಿನ ಸಲ ದೆಹಲಿ ಬಂದಾಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸುತ್ತೇವೆ: ಶಾಸಕ
'ಪೆಂಗಲ್' ಸೈಕ್ಲೋನ್ ಎಫೆಕ್ಟ್​​: ಬದಲಾದ ಅರಬ್ಬೀ ಸಮುದ್ರ ಬಣ್ಣ
'ಪೆಂಗಲ್' ಸೈಕ್ಲೋನ್ ಎಫೆಕ್ಟ್​​: ಬದಲಾದ ಅರಬ್ಬೀ ಸಮುದ್ರ ಬಣ್ಣ
ಯಡಿಯೂರಪ್ಪ ರಾಜ್ಯಾಧ್ಯಕ್ಷನಾದಾಗ ಕೇವಲ 45-ವರ್ಷ ವಯಸ್ಸು: ರೇಣುಕಾಚಾರ್ಯ
ಯಡಿಯೂರಪ್ಪ ರಾಜ್ಯಾಧ್ಯಕ್ಷನಾದಾಗ ಕೇವಲ 45-ವರ್ಷ ವಯಸ್ಸು: ರೇಣುಕಾಚಾರ್ಯ
ಶೋಕಾಸ್ ನೋಟೀಸ್: ಬಸನಗೌಡ ಯತ್ನಾಳ್ ಇಂದು ವರಿಷ್ಠರಿಗೆ ನೀಡುವರೇ ಉತ್ತರ?
ಶೋಕಾಸ್ ನೋಟೀಸ್: ಬಸನಗೌಡ ಯತ್ನಾಳ್ ಇಂದು ವರಿಷ್ಠರಿಗೆ ನೀಡುವರೇ ಉತ್ತರ?
ಸುರಿಯುವ ಮಳೆ ಮತ್ತು ಥರಗುಟ್ಟುವ ಚಳಿಯಿಂದ ವಯಸ್ಕರು ಕಂಗಾಲು
ಸುರಿಯುವ ಮಳೆ ಮತ್ತು ಥರಗುಟ್ಟುವ ಚಳಿಯಿಂದ ವಯಸ್ಕರು ಕಂಗಾಲು
ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್
ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್
ಚಾಮುಂಡಿ ಬೆಟ್ಟದಿಂದ ಏಕಾಏಕಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು
ಚಾಮುಂಡಿ ಬೆಟ್ಟದಿಂದ ಏಕಾಏಕಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು
ಫೆಂಗಲ್ ಚಂಡಮಾರುತದಿಂದಾಗಿ ನಾಳೆ ಸಾಯಂಕಾಲದವರೆಗೆ ಬೆಂಗಳೂರಲ್ಲಿ ಮಳೆ
ಫೆಂಗಲ್ ಚಂಡಮಾರುತದಿಂದಾಗಿ ನಾಳೆ ಸಾಯಂಕಾಲದವರೆಗೆ ಬೆಂಗಳೂರಲ್ಲಿ ಮಳೆ