ಪುಸ್ತಕ ಮೇಳದಲ್ಲಿ ತಮ್ಮ ಮೇಲೆ ಬರೆದಿರುವ ಪುಸ್ತಕ ಕಂಡು ಸಂತೋಷಭರಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ
ನಮ್ಮ ವರದಿಗಾರ ನೀಡುವ ಮಾಹಿತಿಯ ಪ್ರಕಾರ ಸುಮಾರು 175 ಪ್ರಕಾಶನ ಸಂಸ್ಥೆಗಳಲ್ಲದೆ ಕರ್ನಾಟಕ ಪುಸ್ತಕ ಪ್ರಾಧಿಕಾರ ಸ್ಟಾಲ್ಗಳನ್ನು ಹಾಕಿವೆ. ಮಾರ್ಚ್ 3ರವರೆಗೆ ನಡೆಯಲಿರುವ ಮೇಳದಲ್ಲಿ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದಂತೆ. ವಿಧಾನ ಮಂಡಲದ ಬಜೆಟ್ ಅಧಿವೇಶನ ಮಾರ್ಚ್ 3ರಿಂದ ಆರಂಭವಾಗಲಿರುವುದರಿಂದ ಜನಪ್ರತಿನಿಧಿಗಳು ಸಹ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಬೆಂಗಳೂರು: ಮೊದಲ ಬಾರಿಗೆ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳವೊಂದನ್ನು (book exhibition) ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದರು. ವ್ಹೀಲ್ ಚೇರ್ ನಲ್ಲಿ ಪುಸ್ತಕ ಮೇಳಕ್ಕೆ ಆಗಮಿಸಿದ ಮುಖ್ಯಮಂತ್ರಿಯವರಿಗೆ ಅವರ ಬದುಕಿನ ಮೇಲೆ ಬರೆದಿರುವ ನಾವು ಕಂಡಂತೆ ಸಿದ್ದರಾಮಯ್ಯ ಹೆಸರಿನ ಪುಸ್ತಕವನ್ನು ತೋರಿಸಿದಾಗ ಬಹಳ ಸಂತೋಷಪಟ್ಟರು. ಲೇಖಕರನ್ನು ತತ್ವ ಸತ್ವದ ಸಂಗಮ ಅಂತ ಉಲ್ಲೇಖಿಸಲಾಗಿದೆ. 5-ದಿನ ನಡೆಯಲಿರುವ ಪುಸ್ತಕ ಮೇಳದಲ್ಲಿ ಕವಿಗೋಷ್ಠಿ, ಸಂವಾದ, ಪುಸ್ತಕ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯಗೆ ವಿಪರೀತವಾಗಿ ಕಾಡುತ್ತಿದೆ ಮಂಡಿನೋವು: ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ
Latest Videos

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ

18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
