ದೇವರ ದರ್ಶನಕ್ಕೆ ಪೊಲೀಸ್ ಎಂಬ ಕಾರಣಕ್ಕಾಗಿ ಸರತಿ ಸಾಲು ಬಿಟ್ಟು ಮುನ್ನುಗ್ಗಿದವನನ್ನು ಲೇಡಿ ಕಾನ್ಸ್ಟೇಬಲ್ ತಡೆದರು!
ತಮ್ಮ ಠಾಣೆಯ ಲೇಡಿ ಕಾನ್ಸ್ಟೇಬಲ್ರನ್ನು ಸಾರ್ವಜನಿಕವಾಗಿ ಬೈದಿದ್ದಕ್ಕೆ ಸಹಜವಾಗೇ ಇನ್ಸ್ಪೆಕ್ಟರ್ಗೆ ಕೋಪ ಬಂದಿದೆ. ಜೈರಾಮ್ ತಾನೂ ಇಲಾಖೆಯವನೇ ಅಂತ ವಿನಂತಿಸಿಕೊಂಡಿದ್ದರೆ ಪ್ರಾಯಶಃ ಕಾನ್ಸ್ಟೇಬಲ್ ಮತ್ತು ಇನ್ಸ್ಪೆಕ್ಟರ್ ಗುಡಿಯೊಳಗೆ ಹೋಗುವ ಅವಕಾಶ ಮಾಡಿಕೊಡುತ್ತಿದ್ದರೇನೋ? ಆದರೆ ಮಹಿಳಾ ಕಾನ್ಸ್ಟೇಬಲ್ ಮೇಲೆ ಜೋರು ಮಾಡಿದ ಹೆಡ್ ಕಾನ್ಸ್ಟೇಬಲ್ ಅದಕ್ಕೆ ಬೆಲೆ ತೆತ್ತಿದ್ದಾರೆ.
ಕಾರವಾರ, ಫೆ 27: ಜನಜಂಗುಳಿಯ ನಡುವೆ ಪೊಲೀಸರೇ ಕಾದಾಟಕ್ಕೆ ನಿಂತರೆ ಹೇಗೆ ಸ್ವಾಮಿ? ಉತ್ತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿರು ಮಹಾಬಲೇಶ್ವರ ದೇವಸ್ಥಾನಕ್ಕೆ (Mahabaleshwara temple) ಪೂಜೆಗೆಂದು ಪ್ರಾಯಶಃ ಪತ್ನಿ ಜೊತೆ ಬಂದಿದ್ದ ಭಟ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಜೈರಾಮ್ ಹೊಸ್ಕಟ್ಟಾ ಗುಡಿಯ ಒಳಗೆ ಹೋಗಲು ಉಳಿದವರಂತೆ ಸಾಲಲ್ಲಿ ಹೋಗೋದು ಬಿಟ್ಟು ಮುಂದೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಜನರನ್ನು ನಿಯಂತ್ರಿಸಲು ನಿಯೋಜನೆಯಲ್ಲಿದ್ದ ಒಬ್ಬ ಲೇಡಿ ಕಾನ್ಸ್ಟೇಬಲ್ ಸಾಲಲ್ಲಿ ಬನ್ನಿ ಅಂದಾಗ ಅವರ ಮೇಲೆ ಕೂಗಾಡಿದ್ದಾರೆ. ಕೂಡಲೇ ಲೇಡಿ ಕಾನ್ಸ್ಟೇಬಲ್ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರತರಾಗಿದ್ದ ಇನ್ಸ್ಪೆಕ್ಟರ್ ಖಾದರ್ ಪಾಷಾಗೆ ವಿಷಯ ತಿಳಿಸಿದ್ದಾರೆ. ಖಾದರ್ ಅಲ್ಲಿಗೆ ಬಂದು ಸಾಲಲ್ಲಿ ಬಂದರೆ ಮಾತ್ರ ಒಳಗೆ ಬಿಡೋದಾಗಿ ಖಡಾಖಂಡಿತವಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲು
Published on: Feb 27, 2025 07:56 PM
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
