Viral: ನಾನು ಹಣ ನೀಡಲ್ಲ ಅಷ್ಟೆ… ಬಸ್‌ ಟಿಕೆಟ್‌ ದರ ಪಾವತಿಸಲು ನಿರಾಕರಿಸಿದ ಮಹಿಳಾ ಪೊಲೀಸ್

ಪೊಲೀಸರು ತೋರುವ ದರ್ಪಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ರಾಜಸ್ಥಾನದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹರಿಯಾಣದ ಮಹಿಳಾ ಕಾನ್‌ಸ್ಟೇಬಲ್‌ ಟಿಕೆಟ್‌ ಹಣವನ್ನು ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್‌ ಲೇಡಿ ಕಾನ್‌ಸ್ಟೇಬಲ್‌ಗೆ ದಂಡ ವಿಧಿಸಿದ್ದು, ಈ ಘಟನೆ ಇದೀಗ ಎರಡೂ ರಾಜ್ಯಗಳ ನಡುವೆ ಚಲನ್‌ ವಾರ್‌ಗೆ ನಾಂದಿಯಾಗಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2024 | 11:19 AM

ಕೆಲ ಪೊಲೀಸರು ಟಿಕೆಟ್‌ ಹಣ ನೀಡದೆ ಬಸ್ಸಿನಲ್ಲಿ ಪ್ರಯಾಣಿಸುವುದನ್ನು ನೀವು ಕೂಡಾ ಗಮನಿಸಿರುತ್ತೀರಿ ಅಲ್ವಾ. ಹೀಗೆ ಕೆಲ ಅಧಿಕಾರಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಹಣ ಕೊಡದೆ ಹೋಗ್ತಾರೆ. ಬಸ್‌ ಕಂಡಕ್ಟರ್‌ಗಳೂ ಕೂಡಾ ಅಷ್ಟೇ ಪೊಲೀಸರಿಗೆ ಟಿಕೆಟ್‌ ನೀಡಲ್ಲ. ಆದ್ರೆ ಇದೀಗ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಬಸ್‌ ನಿರ್ವಾಹಕನೇ ಟಿಕೆಟ್‌ ಹಣ ಕೊಡಿ ಎಂದು ಬಾಯ್ಬಿಟ್ಟು ಕೇಳಿದರೂ ಲೇಡಿ ಕಾನ್‌ಸ್ಟೇಬಲ್‌ ಒಬ್ಬರು ಟಿಕೆಟ್‌ ದರ ನೀಡಲು ನಿರಾಕರಿಸಿದ್ದಾರೆ. ಹೌದು ನಾನು ಪೊಲೀಸ್‌ ನಾನ್ಯಾಕೆ ಹಣ ನೀಡ್ಬೇಕು ಎಂದು ಕಂಡಕ್ಟರ್‌ ಬಳಿ ದರ್ಪ ತೋರಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್‌ ಲೇಡಿ ಕಾನ್‌ಸ್ಟೇಬಲ್‌ಗೆ ದಂಡ ವಿಧಿಸಿದ್ದು, ಈ ಘಟನೆ ಇದೀಗ ಎರಡೂ ರಾಜ್ಯಗಳ ನಡುವೆ ಚಲನ್‌ ವಾರ್‌ಗೆ ನಾಂದಿಯಾಗಿದೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಹರಿಯಾಣದ ರೇವಾರಿಯ ಧುರುಹೇರಾ ಸುತ್ತಮುತ್ತಲಿನಲ್ಲಿ ನಡೆದಿದ್ದು ಎನ್ನಲಾಗುತ್ತಿದೆ. ಇಲ್ಲಿ ರಾಜಸ್ಥಾನ ರೋಡ್‌ವೇಸ್‌ ಬಸ್ಸಿನಲ್ಲಿ ಧರುಹೇರಾವರೆಗೆ ಪ್ರಯಾಣಿಸುತ್ತಿದ್ದ ಹರಿಯಾಣದ ಮಹಿಳಾ ಕಾನ್‌ಸ್ಟೇಬಲ್‌ 50 ರೂ. ಟಿಕೆಟ್‌ ಹಣವನ್ನು ನೀಡಲು ನಿರಾಕರಿಸಿದ್ದಾರೆ. ಕಂಡಕ್ಟರ್‌ ಪದೇ ಪದೇ ಟಿಕೆಟ್‌ ಹಣ ಕೇಳಿದರೂ ಇದಕ್ಕೆ ಪೊಲೀಸ್‌ ಒಲ್ಲೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್‌ ಲೇಡಿ ಕಾನ್‌ಸ್ಟೇಬಲ್‌ಗೆ ದಂಡ ವಿಧಿಸಿದ್ದಾರೆ. ಪೊಲೀಸ್‌ ಪೇದೆಗೆ ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಹರಿಯಾಣದ ಪೊಲೀಸರು ಪ್ರಮಾಣ ಪತ್ರ ಇಲ್ಲ, ಕಂಡಕ್ಟರ್‌, ಡ್ರೈವರ್‌ ಸರಿಯಾಗಿ ಸಮವಸ್ತ್ರ ಧರಿಸಿಲ್ಲ, ಟೈರ್‌ಗಳಲ್ಲಿ ಗಾಳಿಯಿಲ್ಲ ಎಂಬಿತ್ಯಾದಿ ಕಾರಣಗಳನ್ನು ಹುಡುಕಿ ಆ ರಾಜ್ಯದ ಮಾರ್ಗದಲ್ಲಿ ಚಲಿಸುವ ರಾಜಸ್ಥಾನದ 90 ಬಸ್‌ಗಳಿಗೆ ದಂಡ ವಿಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜಸ್ಥಾನದಲ್ಲೂ ಕೂಡಾ ಹರಿಯಾಣದ 26 ಬಸ್‌ಗಳಿಗೆ ದಂಡ ವಿಧಿಸಲಾಗಿದೆ. ಈ ಗಲಾಟೆ ರಾಜಸ್ಥಾನ ಮತ್ತು ಹರಿಯಾಣದಲ್ಲಿ ಭಾರೀ ಕೋಲಾಹಲವನ್ನು ಉಂಟು ಮಾಡಿದ್ದು, ಇದೀಗ ರಾಜಸ್ಥಾನದ ಸಾರಿಗೆ ಇಲಾಖೆಯ ಅಧಿಕಾರಿಗಳು ಹರಿಯಾಣದ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ತಿಳಿಗೊಳಿಸುವ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಂಡಕ್ಟರ್‌ ಟಿಕೆಟ್‌ ಹಣ ಕೊಡಿ ಎಂದು ಕೇಳಿದರೂ ಲೇಡಿ ಕಾನ್‌ಸ್ಟೇಬಲ್‌ ನಾನು ಟಿಕೆಟ್‌ ದರ ಪಾವತಿಸಲ್ಲ ಎಂದು ಹೇಳುವ ದೃಶ್ಯವನ್ನು ಕಾಣಬಹುದು. ನಾನು ಹರಿಯಾಣದ ಪೊಲೀಸ್‌ ನಾನ್ಯಾಕೆ ಹಣ ಕೊಡ್ಬೇಕು ಎಂದು ಬಸ್‌ ಕಂಡಕ್ಟರನ್ನೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೇಂಟ್‌ ವೀಲ್ಹ್‌ನಲ್ಲಿ ಕುಳಿತು ಲಿಪ್‌ ಲಾಕ್‌ ಮಾಡಿದ ಜೋಡಿ; ವೈರಲ್‌ ಆಯ್ತು ವಿಡಿಯೋ

ShoneeKapoor ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 15 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರನ್ನು ಸೇವೆಯಿಂದ ಮೊದಲು ವಜಾಗೊಳಿಸಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಂಡಕ್ಟರ್‌ ಟಿಕೆಟ್‌ ಹಣ ಕೇಳಿದ್ದು ಸರಿ, ಆದ್ರೆ ಆತನಿಗೆ ದಂಡ ವಿಧಿಸುವ ಅಧಿಕಾರ ಇಲ್ಲʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ