AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದ್ದೂರಿ ಚಿತ್ರದ ನಂತರ ಒಂದಾಗುತ್ತಿರುವ ಎಪಿ.ಅರ್ಜುನ್, ಧ್ರುವ ಜೋಡಿ ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ರಿವೀಲ್ ಮಾಡಿದೆ.

Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್
ಮಾರ್ಟಿನ್ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Aug 15, 2021 | 11:36 AM

ಆಕ್ಷನ್ ಪ್ರಿನ್ಸ್ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ಧ್ರುವ ಸರ್ಜಾರ ನೂತನ ಚಿತ್ರದ ಟೈಟಲ್ ಲಾಂಚ್ ಆಗಿದೆ. ಮೋಷನ್ ಪೋಸ್ಟರ್ ಮುಖಾಂತರ ಟೈಟಲ್ ಹಾಗೂ ಧ್ರು ಸರ್ಜಾರ ಮೊದಲ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಚಿತ್ರಕ್ಕೆ ‘ಮಾರ್ಟಿನ್’ ಎಂದು ಹೆಸರಿಡಲಾಗಿದ್ದು, ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ಧ್ರುವ ಸರ್ಜಾ ತಮ್ಮ ಮೊದಲ ಚಿತ್ರ ಅದ್ದೂರಿಯ ನಂತರ ನಿರ್ದೇಶಕ ಎ.ಪಿ.ಅರ್ಜುನ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರ ತನ್ನ ಇತರ ಚಿತ್ರಗಳಿಗಿಂತ ಬಹಳ ಭಿನ್ನವಾಗಿರಲಿದ್ದು, ಕಾಲೇಜಿನ ಹಿನ್ನೆಲೆಯಲ್ಲಿ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿರಲಿದೆ ಎಂಬ ಸುಳಿವನ್ನು ಧ್ರುವ ಬಿಟ್ಟುಕೊಟ್ಟಿದ್ದಾರೆ.

ಮೋಷನ್ ಪೋಸ್ಟರ್​ನಲ್ಲೇನಿದೆ?

ಐದು ಭಾಷೆಗಳ ಟೈಟಲ್​ ಹೊಂದಿರುವ ಮೋಷನ್ ಪೋಸ್ಟರ್​ನಲ್ಲಿ ತಮ್ಮ ತೋಳಿನ ಮೇಲೆ ಇಂಡಿಯನ್ ಎಂದು ಬರೆದುಕೊಂಡಿರುವ ಧ್ರುವ ಅವರ ಚಿತ್ರವಿದೆ. ಪಕ್ಕಾ ಮಾಸ್ ಆಕ್ಷನ್ ಚಿತ್ರದ ಸುಳಿವನ್ನು ನೀಡುತ್ತಿರುವ ಈ ಪೋಸ್ಟರ್ ಚಿತ್ರದ ಅದ್ದೂರಿತನವನ್ನೂ ತೋರಿಸುತ್ತಿದೆ.

‘ಮಾರ್ಟಿನ್’ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಇಲ್ಲಿದೆ:

ಧ್ರುವ ಸರ್ಜಾ ಮಾಧ್ಯಮವೊಂದಕ್ಕೆ ತಿಳಿಸಿರುವ ಪ್ರಕಾರ, ಮಾರ್ಟಿನ್ ಚಿತ್ರ ಧ್ರುವ ಸರ್ಜಾರ ಇತರ ಚಿತ್ರಗಳಂತಲ್ಲ. ಇಲ್ಲಿ ಸಂಭಾಷಣೆ ಕಡಿಮೆ ಇರಲಿದ್ದು, ಇತರ ವಿಷಯಗಳಿಗೆ ಪ್ರಾಧಾನ್ಯತೆ ಇದೆ ಎಂದಿದ್ದಾರೆ. ಈ ಮೂಲಕ ಧ್ರುವ ಸರ್ಜಾ ತಮ್ಮ ಹಳೆಯ ಫಾರ್ಮುಲಾ ಬದಿಗಿಟ್ಟು, ಹೊಸ ಪ್ರಯೋಗಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಇಂದು ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಧ್ರುವ ಸರ್ಜಾಗೆ ಮತ್ತೊಂದು ಖುಷಿಯ ವಿಷಯವೆಂದರೆ ಅವರ ಮಾವ ಅರ್ಜುನ್ ಸರ್ಜಾ ಜನ್ಮದಿನ. ಹಾಗೆಯೇ ಇವತ್ತು ಹಿರಿಯಣ್ಣ ರಾಘವೇಂದ್ರ ರಾಜ್​ಕುಮಾರ್ ಜನ್ಮದಿನ ಕೂಡಾ. ಈ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಿರುವ ಪೋಸ್ಟರ್ ಅವರ ಪಾಲಿಗೆ ಸ್ಮರಣೀಯವಾಗಿದೆ ಎಂದು ಧ್ರುವ ಹೇಳಿಕೊಂಡಿದ್ದಾರೆ.

ಧ್ರುವ ಹಂಚಿಕೊಂಡ ಟ್ವೀಟ್: 

ಮಾರ್ಟಿನ್ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದು, ಮಣಿ ಶರ್ಮಾ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಲಿದ್ದಾರೆ. ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆದಿದ್ದು, ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಲಿದ್ದಾರೆ.

ಇದನ್ನೂ ಓದಿ:

ಸ್ವಾತಂತ್ರ್ಯ ಪೂರ್ವದ ಕತೆಗೆ ಒಂದಾಗಲಿದ್ದಾರೆ ಕುಮಾರಸ್ವಾಮಿ, ಎಸ್.ನಾರಾಯಣ್; ಹೀರೋ ಆಗಲಿದ್ದಾರಾ ಕಮಲ್ ಹಾಸನ್?

ಕೆಟ್ಟ ಭಾಷೆಯಲ್ಲಿ ಬಿಗ್​ ಬಾಸ್​ಗೆ ಬೈಯ್ಯುವ ಅರವಿಂದ್​-ದಿವ್ಯಾ ಫ್ಯಾನ್ಸ್​ಗೆ ಪರಮೇಶ್ವರ​ ಗುಂಡ್ಕಲ್​ ನೇರ ಪ್ರಶ್ನೆ