AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಚಿತಾ ರಾಮ್​ ಬಗ್ಗೆ ಕೆಟ್ಟ ಕಮೆಂಟ್​: ಫೈಟರ್​ ವಿವೇಕ್​ ಸಾವಿನ ಕುರಿತು ಮೌನ ಮುರಿದ ‘ಡಿಂಪಲ್​ ಕ್ವೀನ್​’

‘ಸತ್ಯವನ್ನು ಒಂದೇ ಒಂದು ಸಲ ಪುನರ್​ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್​ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಎನಿಸುತ್ತೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

ರಚಿತಾ ರಾಮ್​ ಬಗ್ಗೆ ಕೆಟ್ಟ ಕಮೆಂಟ್​: ಫೈಟರ್​ ವಿವೇಕ್​ ಸಾವಿನ ಕುರಿತು ಮೌನ ಮುರಿದ ‘ಡಿಂಪಲ್​ ಕ್ವೀನ್​’
ರಚಿತಾ ರಾಮ್​, ಫೈಟರ್​ ವಿವೇಕ್​
TV9 Web
| Edited By: |

Updated on: Aug 15, 2021 | 7:37 AM

Share

ಅಜಯ್​ ರಾವ್​ ಮತ್ತು ರಚಿತಾ ರಾಮ್​ (Rachita Ram) ಮುಖ್ಯಭೂಮಿಕೆ ನಿಭಾಯಿಸುತ್ತಿದ್ದ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ನಡೆಯಬಾರದ ಘಟನೆ ನಡೆದುಹೋಯ್ತು. ಕ್ರೇನ್​ಗೆ ವಿದ್ಯುತ್​ ತಂತಿ ತಗುಲಿ ಫೈಟರ್​ ವಿವೇಕ್​ (Fighter Vivek) ಸಾವನ್ನಪ್ಪಿದ್ದು ನಿಜಕ್ಕೂ ನೋವಿನ ಸಂಗತಿ. ಆ ದುರ್ಘಟನೆ ನಡೆದಾಗ ನಟಿ ರಚಿತಾ ರಾಮ್​ ಅವರು ಶೂಟಿಂಗ್​ ಸೆಟ್​ನಲ್ಲಿ ಇದ್ದರೋ ಇಲ್ಲವೋ ಎಂಬ ಬಗ್ಗೆ ಹಲವರಿಗೆ ಅನುಮಾನ ಇದೆ. ಆ ವಿಚಾರವನ್ನೇ ಇಟ್ಟುಕೊಂಡು ರಚಿತಾರನ್ನು ಟ್ರೋಲ್ ಮಾಡಲಾಗುತ್ತಿದೆ. ವಿವೇಕ್​ ಸಾವಿನ ಬಗ್ಗೆ ರಚಿತಾ ಮಾತನಾಡಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಚಿತಾ ರಾಮ್​ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಫೈಟರ್​ ವಿವೇಕ್ ಸಾವಿನ ಕುರಿತು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ರಚಿತಾ ರಾಮ್​ ಒಂದು ದೀರ್ಘವಾದ ಪೋಸ್ಟ್​ ಮಾಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತ ನಂಬಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಾನು ರಿಕ್ವೆಸ್ಟ್​ ಮಾಡ್ತೀನಿ. ಲವ್​ ಯೂ ರಚ್ಚು ಸಿನಿಮಾ ಸೆಟ್​ನಲ್ಲಿ ಒಂದು ನಡೆಯಬಾರದ ಘಟನೆ ನಡೆದಾಗಿನಿಂದ ಆ ಆಘಾತ ನನ್ನನ್ನು ಸೈಲೆಂಟ್​ ಆಗಿರುವಂತೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ತಪ್ಪಾಗಿ ಬಳಕೆ ಆಗ್ತಾ ಇದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ’ ಎಂದು ರಚಿತಾ ರಾಮ್​ ಬರೆದುಕೊಂಡಿದ್ದಾರೆ.

‘ದುರ್ಘಟನೆ ನಡೆದಾಗ ನಾನು ಸೆಟ್​ನಲ್ಲಿ ಇರಲಿಲ್ಲ. ಅದಂತೂ ಸತ್ಯ. ಆಗಸ್ಟ್​ 2ನೇ ತಾರೀಕಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್​ಗೋಸ್ಕರ ಮೈಸೂರಿನಲ್ಲಿದೆ. ಸತ್ಯವನ್ನು ಒಂದೇ ಒಂದು ಸಲ ಪುನರ್​ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್​ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಎನಿಸುತ್ತೆ’ ಎಂದು ರಚಿತಾ ಹೇಳಿದ್ದಾರೆ.

‘ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಅಂತ ನಾನು ಬೇಡಿಕೊಳ್ತೀನಿ. ನನ್ನ ಬೆಳೆಸಿರುವ ಜನರು ನನ್ನ ಮಾತುಗಳನ್ನು, ನನ್ನನ್ನು ನಂಬುತ್ತಾರೆ ಅಂತ ನಂಬಿದ್ದೇನೆ. ಆರೋಪಗಳು ಏನೇ ಇದ್ರೂ, ಸರಿ-ತಪ್ಪುಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತಾನೂ ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

‘ವಿವೇಕ್​ ಮೂಗಲ್ಲಿ ರಕ್ತ ಬಂದಾಗ ನಮಗೆ ಗಾಬರಿ ಆಯ್ತು; ಅಜಯ್​ ರಾವ್​ ಅಲ್ಲೇ ಇದ್ದರು’: ರಂಜಿತ್​ ನೇರ ಮಾತು

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್