‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

Fighter Vivek Death: ‘ಸೆಟ್​ನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳು ಇದ್ದವು. ಕ್ರೇನ್​ನವನು ಮಾಡಿದ ತಪ್ಪಿನಿಂದಾಗಿ ಹೀಗೆ ಆಯಿತು. ಇದನ್ನು ಯಾರೂ ಊಹಿಸಿರಲಿಲ್ಲ’ ಎಂದು ಅವಘಡದಲ್ಲಿ ಗಾಯಾಳು ಆಗಿರುವ ರಂಜಿತ್​ ಹೇಳಿದ್ದಾರೆ.

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ
ಫೈಟರ್​ ರಂಜಿತ್​
Follow us
| Updated By: ಮದನ್​ ಕುಮಾರ್​

Updated on: Aug 14, 2021 | 4:35 PM

‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಶೂಟಿಂಗ್​ ವೇಳೆ ಫೈಟರ್​ ವಿವೇಕ್​ (Fighter Vivek) ಸಾವನ್ನಪ್ಪಿದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಇಂಥ ಅಚಾತುರ್ಯಕ್ಕೆ ಕಾರಣ ಯಾರು ಎಂಬುದು ಜನರು ಪ್ರಶ್ನೆ. ಈ ದುರ್ಘಟನೆಯಲ್ಲಿ ಮೃತ ವಿವೇಕ್​ ಸ್ನೇಹಿತ ರಂಜಿತ್​ ಕೂಡ ಗಾಯಗೊಂಡಿದ್ದರು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಈಗ ಬಹುತೇಕ ಚೇತರಿಸಿಕೊಂಡಿರುವ ರಂಜಿತ್​ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಅಂದು ವಿವೇಕ್​ ಸಾವಿಗೆ ನಿಜಕ್ಕೂ ಕಾರಣ ಆಗಿದ್ದೇನು ಎಂಬುದನ್ನು ಅವರು ವಿವರಿಸಿದ್ದಾರೆ.

‘ಮಾಸ್ಟರ್​ ಕ್ಲೋಸ್​ಅಪ್​ ಶಾಟ್​ ತೆಗೆಯುತ್ತಿದ್ದರು. ನಾವು ಮಾನಿಟರ್​ ಮಾಡಿಕೊಳ್ಳುತ್ತಿದ್ವಿ. ವಿವೇಕ್ ರೋಪ್​ ಕೈಗೆ ಸುತ್ತಿಕೊಂಡಿದ್ದ. ಕೊಚ್ಚೆಯಲ್ಲಿ ಕ್ರೇನ್​ ಟೈರ್​ ಸಿಕ್ಕಿಕೊಂಡಿತ್ತು. ಅದಕ್ಕಾಗಿ ಗಾಡಿಯನ್ನು ಹಿಂದೆ-ಮುಂದೆ ಮಾಡುತ್ತಿದ್ದ. ಆಗ ಮರಕ್ಕೆ ಟಚ್​ ಆಯ್ತು. ಪಕ್ಕಕ್ಕೆ ಬಾ ಎಂದು ವಿವೇಕ್​ಗೆ ಹೇಳಿದೆ. ಸರಿ ಅಂತ ಅವನು ಸೈಡ್​ಗೆ ಬಂದ. ಗಾಡಿ ಮತ್ತೆ ಜರ್ಕ್​ ಹೊಡೆಯಿತು. ರೋಪ್​ ತೆಗೆಯೋಕೆ ಕೈ ಹಾಕುತ್ತಿದ್ದಂತೆಯೇ ವಿದ್ಯುತ್ ಲೈನ್​​ಗೆ ಕ್ರೇನ್​ ಟಚ್​ ಆಯಿತು. ​ನಾನು ಮತ್ತು ವಿವೇಕ್ ಇಬ್ಬರೂ ಕೆಳಗೆ ಬಿದ್ವಿ. ಅಷ್ಟು ಹೊತ್ತಿಗೆ ಅವರೆಲ್ಲರೂ ಬಂದು ಕಾರಲ್ಲಿ ಕೂರಿಸಿಕೊಂಡರು’ ಎಂದು ರಂಜಿತ್​ ಹೇಳಿದ್ದಾರೆ.

‘ಸೆಟ್​ನಲ್ಲಿ ಎಲ್ಲ ಮುಂಜಾಗ್ರತ ಕ್ರಮಗಳು ಇದ್ದವು. ಕ್ರೇನ್​ನವನು ಮಾಡಿದ ತಪ್ಪಿನಿಂದಾಗಿ ಹೀಗೆ ಆಯಿತು. ಇದನ್ನು ಯಾರೂ ಊಹಿಸಿರಲಿಲ್ಲ. ನಾಲ್ಕು ದಿನ ಶೂಟಿಂಗ್​ ಮಾಡಿದ್ವಿ. ಆಗಲೂ ಇದೇ ಕ್ರೇನ್​ ಆಪರೇಟರ್​ ಬಂದಿದ್ದ. ಆ ದಿನ ಪ್ಯಾಚ್​ ವರ್ಕ್​ ಮಾಡ್ತಾ ಇದ್ವಿ. ಮಳೆ ಬಂದಿತ್ತು. ಹಸಿ ನೆಲ್ಲದಲ್ಲಿ ಟೈರ್​ ಸಿಕ್ಕಿಕೊಂಡಿತು. ಅದೇ ನಮಗೆ ಮೈನಸ್​ ಪಾಯಿಂಟ್​ ಆಯಿತು. ಕ್ರೇನ್​ನವನು ಮಾಡಿದ ತಪ್ಪನಿಂದ ಇಡೀ ತಂಡಕ್ಕೆ ಕೆಟ್ಟ ಹೆಸರು’ ಎಂದು ರಂಜಿತ್​ ಹೇಳಿದ್ದಾರೆ.

‘ಹೈ-ಟೆನ್ಷನ್​ ವೈರ್ ತಾಗಿ ಈ ಅವಘಡ ಆಯಿತು ಎಂದು ಹೇಳಲಾಗುತ್ತಿದೆ. ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು. ಅದು ಹೈ-ಟೆನ್ಷನ್​ ವೈರ್​ ಅಲ್ಲ. ಒಂದು ವೇಳೆ ಹೈ-ಟೆನ್ಷನ್​ ವೈರ್ ಆಗಿದ್ದರೆ ನಾವೆಲ್ಲರೂ ಬೂದಿ ಆಗಿರಬೇಕಿತ್ತು. ತೋಟಕ್ಕೆ ಹಾಕಿದ್ದ ವಿದ್ಯುತ್​ ವೈರ್​ನಿಂದ ಈ ದುರ್ಘಟನೆ ಸಂಭವಿಸಿತು. ಇನ್​ಶ್ಯುರೆನ್ಸ್​ ಮಾಡಿಸಲು ಅಪ್ಲಿಕೇಷನ್​ ಪಡೆದುಕೊಂಡಿದ್ದರು. ಮಾಡಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್​ಶ್ಯುರೆನ್ಸ್​ ಇದ್ದಿದ್ದರೆ ವಿವೇಕ್​ ಕುಟುಂಬಕ್ಕೂ ಅನುಕೂಲ ಆಗಿರುತ್ತಿತ್ತು. ನನಗೂ ಸಹಾಯ ಆಗುತ್ತಿತ್ತು. ಆ ಬಗ್ಗೆ ಅಸೋಸಿಯೇಷನ್​ ಹಿರಿಯರು ಮಾತನಾಡಿದ ಮೇಲೆ ಗೊತ್ತಾಗುತ್ತದೆ’ ಎಂದಿದ್ದಾರೆ ರಂಜಿತ್​.

ಇದನ್ನೂ ಓದಿ:

ಫೈಟರ್​ ವಿವೇಕ್​ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು

ಪೊಲೀಸರ ಕೈಗೆ ಸಿಗದ ಗುರು ದೇಶಪಾಂಡೆ; ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರದ ಭರವಸೆ