‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?

‘ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಅಜಯ್​ ರಾವ್​ ಟೆಂಟ್​ನೊಳಗೆ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ಗಾಯಾಳು ರಂಜಿತ್​ ಹೇಳಿದ್ದಾರೆ.

‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?
ಅಜಯ್​ ರಾವ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 10, 2021 | 12:39 PM

‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಚಿತ್ರೀಕರಣದ ವೇಳೆ ಫೈಟರ್​ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಸೋಮವಾರ (ಆ.9) ಸಾಹಸ ಸನ್ನಿವೇಶದ ಶೂಟಿಂಗ್​ ಸಂದರ್ಭದಲ್ಲಿ ಫೈಟರ್​ ವಿವೇಕ್​ (Fighter Vivek) ಅವರು ವಿದ್ಯುತ್​ ತಗುಲಿ ಮೃತಪಟ್ಟರು. ಮತ್ತೋರ್ವ ಫೈಟರ್​ ರಂಜಿತ್​ ಅವರಿಗೂ ವಿದ್ಯುತ್​ ಶಾಕ್​ ತಗುಲಿದ್ದು, ಅವರಿಗೆ ರಾಜರಾಜೇಶ್ವರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಜಿತ್​ ಹೇಳಿಕೆ ನೀಡಿರುವ ವಿಡಿಯೋ ಲಭ್ಯವಾಗಿದೆ. ಈ ಅವಘಡಕ್ಕೆ ನಿಜಕ್ಕೂ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಘಟನೆ ನಡೆದಾಗ ಹೀರೋ ಅಜಯ್​ ರಾವ್​ (Ajay Rao) ಅವರು ಸ್ಥಳದಲ್ಲೇ ಇದ್ದರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂದು ರಂಜಿತ್​ ಆರೋಪಿಸಿದ್ದಾರೆ.

ವಿವೇಕ್​ ಮೃತಪಟ್ಟಿರುವ ಸುದ್ದಿ ಹೊರಬಿದ್ದ ಬಳಿಕ ಮಾಧ್ಯಮಗಳಿಗೆ ಅಜಯ್​ ರಾವ್​ ಹೇಳಿಕೆ ನೀಡಿದ್ದರು. ‘ನಾನು 200 ಮೀಟರ್​ ದೂರದಲ್ಲಿದ್ದೆ. ಹುಡುಗರ ಬಂದು ಹೇಳಿದಾಗ ವಿಷಯ ತಿಳಿಯಿತು’ ಎಂದು ಹೇಳಿದ್ದರು. ಆದರೆ ರಂಜಿತ್​ ಹೇಳಿರುವ ಪ್ರಕಾರ ಅಜಯ್​ ರಾವ್​ ಅವರು ಕೇವಲ 10-20 ಮೀಟರ್​ ಅಂತರದಲ್ಲೇ ಇದ್ದರು! ‘ಇದರಲ್ಲಿ ಫೈಟ್​ ಮಾಸ್ಟರ್​ ವಿನೋದ್​ ಅವರ ತಪ್ಪು ಇಲ್ಲ. ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಇರುವ ಟೆಂಟ್​ನೊಳಗೆ ಅಜಯ್​ ರಾವ್ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ರಂಜಿತ್​ ಹೇಳಿದ್ದಾರೆ.

ರಂಜಿತ್​ ಅವರ ಈ ಹೇಳಿಕೆ ಬಗ್ಗೆ ಅಜಯ್​ ರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಘಟನೆ ನಡೆದಾಗ ಹೀರೋಯಿಸಂ ತೋರಿಸೋಕೆ ಆಗಲ್ಲ. ಅಲ್ಲಿ ಆಗಲೇ ಜನರು ಗುಂಪು ಸೇರಿದ್ದರು. ಹುಡುಗರು ಬಂದು ಹೇಳುವವರೆಗೆ ನನಗೆ ಏನೂ ತಿಳಿದಿರಲಿಲ್ಲ. ನಾನು ಬರಬೇಕಿತ್ತು ಎಂದು ಭಾವುಕನಾಗಿ ರಂಜಿತ್​ ನಿರೀಕ್ಷಿಸಿದ್ದರಲ್ಲಿ ತಪ್ಪಿಲ್ಲ. ರಂಜಿತ್​ ಅವರನ್ನು ಭೇಟಿ ಮಾಡೋಕೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆದರೆ ಅಲ್ಲಿ ನಮ್ಮನ್ನು ಐಯುಸಿ ಒಳಗೆ ಬಿಡಲಿಲ್ಲ. ನಿನ್ನೆಯಿಂದಲೂ ನಾನು ಎಲ್ಲರಿಗೂ ಉತ್ತರ ನೀಡುತ್ತಿದ್ದೇನೆ. ಮೃತ ವಿವೇಕ್ ಅವರ​ ಚಿಕ್ಕಪ್ಪನ ಬಳಿಕ ನಾನು ಮಾತನಾಡಿದ್ದೇನೆ. ಅವರ ಜೊತೆಗೆ ನಾನಿದ್ದೇನೆ’ ಎಂದು ಅಜಯ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ:

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

ಫೈಟರ್​​ ಸಾವು ಪ್ರಕರಣ: ನಿರ್ಮಾಪಕ ಗುರು ದೇಶಪಾಂಡೆ ಪರಾರಿ; ಐವರ ವಿರುದ್ಧ ಎಫ್​ಐಆರ್​

(Fighter Vivek Death: Love You Racchu hero Ajay Rao reaction to Ranjith allegations)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ