ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್ಗೆ ನ್ಯಾಯ ಸಿಗುವವರೆಗೆ ಶೂಟಿಂಗ್ಗೆ ಬರಲ್ಲ’; ಅಜಯ್ ರಾವ್
‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಅಜಯ್ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿ. ಶಂಕರ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ (28) ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ಈ ಕುರಿತಂತೆ ಟಿವಿ9 ಕನ್ನಡಕ್ಕೆ ‘ಲವ್ ಯೂ ರಚ್ಚು’ ಚಿತ್ರದ ನಟ ಅಜಯ್ ಪ್ರತಿಕ್ರಿಯೆ ನೀಡಿದ್ದು, ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ ಎಂದಿದ್ದಾರೆ.
‘ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೇಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ. ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ. ಈ ದೃಶ್ಯದ ಚಿತ್ರೀಕರಣದಲ್ಲಿ ನಾನಿದ್ರೆ ಮಾಡುತ್ತಿರಲಿಲ್ಲ. ನಾನೇನಾದ್ರೂ ಹೇಳಲು ಹೋದ್ರೆ ಮೂಗು ತೂರಿಸ್ತಾರೆ ಅಂತಾರೆ. ನಾನು ನಿರ್ದೇಶಕರ ಬಳಿ ಮಾತನಾಡುವುದಕ್ಕೆ ಆಗಿಲ್ಲ. ಘಟನಾ ಸ್ಥಳದಿಂದ ನಾನು 200 ಮೀಟರ್ ದೂರ ಇದ್ದೆ. ಬಳಿಕ ನಮ್ಮ ಹುಡುಗರು ಬಂದು ಮಾಹಿತಿ ನೀಡಿದರು. ನನಗೂ ಕೂಡ ಸರಿಯಾದ ಮಾಹಿತಿ ಸಿಕ್ಕಿಲ್ಲ’ ಎಂದಿದ್ದಾರೆ ಅಜಯ್ ರಾವ್.
‘ಇದು ತುಂಬಾ ಬೇಸರವಾದ ವಿಷಯ. ವಿವೇಕ್ಗೆ ನ್ಯಾಯ ಸಿಗುವವರೆಗೂ ಶೂಟಿಂಗ್ಗೆ ಬರಲ್ಲ. ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೇನೆ. ನನಗೂ ಫೈಟರ್ ವಿವೇಕ್ಗೂ ಸಂಪರ್ಕ ಇರಲಿಲ್ಲ. ಪ್ಯಾಚ್ವರ್ಕ್ ಸೀನ್ಗಳನ್ನ ಶೂಟ್ ಮಾಡುತ್ತಿದ್ದೆವು. ಚಿತ್ರದ ಬಗ್ಗೆ ಜಾಸ್ತಿ ಕೇಳಿದರೆ ನಾವು ಕೆಟ್ಟವರಾಗಿಬಿಡುತ್ತೇವೆ’ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.
‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಅಜಯ್ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿ. ಶಂಕರ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗುರು ದೇಶಪಾಂಡೆ ಚಿತ್ರದ ನಿರ್ಮಾಪಕ. ಮಣಿಕಾಂತ್ ಕದ್ರಿ ಅವರು ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: Fighter Vivek Death: ರಚಿತಾ ರಾಮ್ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು; ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ
Published On - 3:38 pm, Mon, 9 August 21