Fighter Vivek Death: ಶೂಟಿಂಗ್ ವೇಳೆ ಫೈಟರ್​​ ಸಾವು; ಗಂಟೆಗಳೇ ಕಳೆದ್ರೂ ಆಸ್ಪತ್ರೆ ಬಳಿ ಬಾರದ ಚಿತ್ರತಂಡ

Love You Racchu: ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಮೋಹನ್ ಕುಮಾರ್​, ಬಿಡದಿ ಇನ್ಸ್​ಪೆಕ್ಟರ್​ ಪ್ರಕಾಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್​ ರಾಜ್​, ಸಾಹಸ ನಿರ್ದೇಶಕ ವಿನೋದ್​ ಮತ್ತು ಜೆಸಿಬಿ ಡ್ರೈವರ್​ ಒಬ್ಬರನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Fighter Vivek Death: ಶೂಟಿಂಗ್ ವೇಳೆ ಫೈಟರ್​​ ಸಾವು; ಗಂಟೆಗಳೇ ಕಳೆದ್ರೂ ಆಸ್ಪತ್ರೆ ಬಳಿ ಬಾರದ ಚಿತ್ರತಂಡ
ರಚಿತಾ ರಾಮ್​, ಅಜಯ್​ ರಾವ್​, ಗುರು ದೇಶಪಾಂಡೆ
Follow us
TV9 Web
| Updated By: ಮದನ್​ ಕುಮಾರ್​

Updated on: Aug 09, 2021 | 5:11 PM

ರಚಿತಾ ರಾಮ್​ (Rachita Ram) ಮತ್ತು ಅಜಯ್​ ರಾವ್​ (Ajay Rao) ನಟನೆಯ ‘ಲವ್​ ಯೂ ರಚ್ಚು’ (Love You Racchu) ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಫೈಟರ್​ ವಿವೇಕ್​ ನಿಧನರಾಗಿದ್ದಾರೆ. ವಿವೇಕ್​ ಸಾವಿನಿಂದ ಅವರ ಕುಟುಂಬಕ್ಕೆ ಆಘಾತ ಆಗಿದೆ. ಘಟನೆ ನಡೆದ ಕೂಡಲೇ ವಿವೇಕ್​ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಅಷ್ಟರಲ್ಲಾಗಲೇ ಅವರು ಕೊನೆಯುಸಿರು ಎಳೆದಿದ್ದರು ಎನ್ನಲಾಗಿದೆ. ಆಸ್ಪತ್ರೆ ಬಳಿ ವಿವೇಕ್​ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ದುರ್ಘಟನೆ ಸಂಭವಿಸಿ ಗಂಟೆಗಳೇ ಕಳೆದರೂ ಚಿತ್ರತಂಡದ ಯಾರೋಬ್ಬರೂ ಆಸ್ಪತ್ರೆಗೆ ಬಂದಿಲ್ಲ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

‘ಲವ್​​ ಯೂ ರಚ್ಚು’ ಚಿತ್ರದ ಶೂಟಿಂಗ್​ಗೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಚಿತ್ರೀಕರಣ ವೇಳೆ ರೋಪ್​ ಎಳೆಯುವಾಗ ದುರಂತ ನಡೆದಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ದುರ್ಘಟನೆಗೆ ಕಾರಣ ಆಗಿದೆ. ಫೈಟರ್​ ಸಾವು ಸಂಭವಿಸುತ್ತಿದ್ದಂತೆಯೇ ಇಡೀ ಚಿತ್ರತಂಡ ಆ ಸ್ಥಳದಿಂದ ಜಾಗ ಖಾಲಿ ಮಾಡಿದೆ. ದುರ್ಘಟನೆಯಲ್ಲಿ ರಂಜಿತ್​ ಎಂಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಅವರನ್ನು​ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಮೋಹನ್ ಕುಮಾರ್​, ಬಿಡದಿ ಇನ್ಸ್​ಪೆಕ್ಟರ್​ ಪ್ರಕಾಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ರಾಜ್​​, ಸಾಹಸ ನಿರ್ದೇಶಕ ವಿನೋದ್​ ಮತ್ತು ಜೆಸಿಬಿ ಡ್ರೈವರ್​ ಒಬ್ಬರನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ವಿವೇಕ್​ ನಿಧನಕ್ಕೆ ಅಸಲಿ ಕಾರಣ ಏನು ಮತ್ತು ಈ ದುರಂತಕ್ಕೆ ಹೊಣೆ ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ವಿವೇಕ್​ ಸಾವಿಗೆ ನ್ಯಾಯ ಸಿಗುವವರೆಗೂ ಶೂಟಿಂಗ್​ ಸೆಟ್​ಗೆ ಕಾಲಿಡುವುದಿಲ್ಲ ಎಂದು ಚಿತ್ರದ ನಾಯಕ ನಟ ಅಜಯ್​ ರಾವ್​ ಹೇಳಿದ್ದಾರೆ.

‘ಮೆಟಲ್​ ರೋಪ್​ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೇಟ್​ ಹಾಕಿದ್ದವನಿಗೂ ಶಾಕ್​ ಹೊಡೆದಿದೆ. ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ. ಈ ದೃಶ್ಯದ ಚಿತ್ರೀಕರಣದಲ್ಲಿ ನಾನಿದ್ರೆ ಮಾಡುತ್ತಿರಲಿಲ್ಲ. ನಾನೇನಾದ್ರೂ ಹೇಳಲು ಹೋದ್ರೆ ಮೂಗು ತೂರಿಸ್ತಾರೆ ಅಂತಾರೆ. ನಾನು ನಿರ್ದೇಶಕರ ಬಳಿ ಮಾತನಾಡುವುದಕ್ಕೆ ಆಗಿಲ್ಲ. ಘಟನಾ ಸ್ಥಳದಿಂದ ನಾನು 200 ಮೀಟರ್ ದೂರ ಇದ್ದೆ. ಬಳಿಕ ನಮ್ಮ ಹುಡುಗರು ಬಂದು ಮಾಹಿತಿ ನೀಡಿದರು’ ಎಂದು ಅಜಯ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ:

Love You Racchu: ಫೈಟರ್​ ವಿವೇಕ್​ ಸಾವು; ನಿರ್ದೇಶಕ ಶಂಕರ್​, ಸಾಹಸ ನಿರ್ದೇಶಕ ವಿನೋದ್​ ಪೊಲೀಸರ ವಶಕ್ಕೆ

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್