ಫೈಟರ್​ ವಿವೇಕ್​ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು

Fighter Vivek Death: ಘಟನೆ ನಡೆದು ಒಂದು ದಿನ ಕಳೆದ ಬಳಿಕ ರಚಿತಾ ರಾಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವೇಕ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಆದರೆ ಇಷ್ಟು ಮಾತ್ರದಿಂದ ಜನರು ಸಮಾಧಾನ ಆಗಿಲ್ಲ.

ಫೈಟರ್​ ವಿವೇಕ್​ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು
ರಚಿತಾ ರಾಮ್​, ಮೃತ ಫೈಟರ್​ ವಿವೇಕ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 10, 2021 | 1:44 PM

ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಸಿನಿಮಾ ಚಿತ್ರೀಕರಣದ ವೇಳೆ ಸಾವು-ನೋವು ಸಂಭವಿಸುವಂತಹ ಘಟನೆ ಸ್ಯಾಂಡಲ್​ವುಡ್​ನಲ್ಲಿ ಆಗಾಗ ನಡೆಯುತ್ತಲೇ ಇದೆ. ಆದರೂ ಕೂಡ ಸಿನಿಮಾ ಮಂದಿ ಎಚ್ಚರಿಕೆ ವಹಿಸುತ್ತಲೇ ಇಲ್ಲ. ಸೋಮವಾರ (ಆ.9) ‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್​ ಸ್ಪರ್ಶದಿಂದ ಫೈಟರ್​ ವಿವೇಕ್​ ಸಾವನ್ನಪ್ಪಿರುವುದು ನೋವಿನ ಸಂಗತಿ. ಈ ಸಿನಿಮಾಗೆ ಅಜಯ್​ ರಾವ್​ (Ajay Rao) ಮತ್ತು ರಚಿತಾ ರಾಮ್​ (Rachita Ram) ನಾಯಕ-ನಾಯಕಿ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಚಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ವಿವೇಕ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಘಟನೆ ನಡೆದು ಒಂದು ದಿನ ಕಳೆದ ಬಳಿಕ ರಚಿತಾ ರಾಮ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವೇಕ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ವಿದ್ಯುತ್​ ಅವಘಡದಿಂದ ಸಾವನ್ನಪಿದ ಫೈಟರ್​ ವಿವೇಕ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ. ಆದರೆ ಇಷ್ಟು ಮಾತ್ರದಿಂದ ಜನರು ಸಮಾಧಾನ ಆಗಿಲ್ಲ. ಮೃತ ವಿವೇಕ್​ ಕುಟುಂಬಕ್ಕೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರಂಜಿತ್​ ಅವರಿಗೆ ಹಣದ ಸಹಾಯ ಮಾಡಿ ಎಂದು ಜನರು ಒತ್ತಾಯಿಸಿದ್ದಾರೆ.

‘ವಿವೇಕ್​ ಕುಟುಂಬಕ್ಕೆ ಸಹಾಯ ಮಾಡಿ. ಅವರ ತಮ್ಮನ ವಿದ್ಯಾಭ್ಯಾಸಕ್ಕೆ ನೆರವಾಗಿ. ಬರೀ ಬಾಯಲ್ಲಿ ಹೇಳೋದಲ್ಲ ಮೇಡಂ. ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನು ಅವರಿಗೆ ನೀಡಿ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಈ ಕಮೆಂಟ್​ಗಳಿಗೆ ರಚಿತಾ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Rachita Ram

(ರಚಿತಾ ರಾಮ್​ ಪೋಸ್ಟ್​ಗಳಿಗೆ ಜನರ ಕಮೆಂಟ್​)

ಇದಕ್ಕೂ ಮುನ್ನ ಅವರು ತಮ್ಮ ಫೋಟೋವೊಂದನ್ನು ಅಪ್​ಲೋಡ್​ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ​ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಿಮ್ಮ ಸಿನಿಮಾದಲ್ಲಿ ಕ್ರೇನ್​ ದುರಂತದಿಂದ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಅದರ ಬಗ್ಗೆ ನೀವು ಯಾವುದೇ ಪೋಸ್ಟ್​ ಮಾಡಿಲ್ಲ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಗೌರವ ಕಳೆದುಹೋಯ್ತು’ ಎಂಬ ಕಮೆಂಟ್​ಗಳು ಬಂದ ಬಳಿಕವೇ ರಚಿತಾ ಅವರು ವಿವೇಕ್​ಗೆ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಮಾಡಿದರು.

ಇದನ್ನೂ ಓದಿ:

‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?

ಫೈಟರ್​​ ಸಾವು ಪ್ರಕರಣ: ನಿರ್ಮಾಪಕ ಗುರು ದೇಶಪಾಂಡೆ ಪರಾರಿ; ಐವರ ವಿರುದ್ಧ ಎಫ್​ಐಆರ್​

(Rachita Ram instagram post about fighter Vivek death during Love You Racchu shooting)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ