ಸ್ವಾತಂತ್ರ್ಯ ಪೂರ್ವದ ಕತೆಗೆ ಒಂದಾಗಲಿದ್ದಾರೆ ಕುಮಾರಸ್ವಾಮಿ, ಎಸ್.ನಾರಾಯಣ್; ಹೀರೋ ಆಗಲಿದ್ದಾರಾ ಕಮಲ್ ಹಾಸನ್?

HD Kumaraswamy: ಕನ್ನಡ ಚಿತ್ರರಂಗದಲ್ಲಿ ಮೌಲ್ಯಾಧಾರಿತ ಚಿತ್ರಗಳನ್ನು ನೀಡಿದ್ದ ಹಿಟ್ ಜೋಡಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಸ್.ನಾರಾಯಣ್ ಈಗ ಮತ್ತೆ ಒಂದಾಗಲಿದ್ದಾರೆ. ಹದಿನೇಳು ವರ್ಷದ ಹಿಂದೆಯೇ ಮಾತುಕತೆ ನಡೆದಿದ್ದ ಈ ಚಿತ್ರಕ್ಕೆ ಕಮಲ್ ಹಾಸನ್ ನಾಯಕನಾಗಿ ಅಭಿನಯಿಸಲು ಮಾತುಕತೆ ನಡೆಸಲಾಗಿತ್ತು. ಈಗ ಅವರೇ ನಾಯಕನಾಗುತ್ತಾರಾ? ಎಸ್.ನಾರಾಯಣ್ ಏನಂತಾರೆ? ಸಂಪೂರ್ಣ ವಿವರ ಇಲ್ಲಿದೆ.

ಸ್ವಾತಂತ್ರ್ಯ ಪೂರ್ವದ ಕತೆಗೆ ಒಂದಾಗಲಿದ್ದಾರೆ ಕುಮಾರಸ್ವಾಮಿ, ಎಸ್.ನಾರಾಯಣ್; ಹೀರೋ ಆಗಲಿದ್ದಾರಾ ಕಮಲ್ ಹಾಸನ್?
ರಾಜಕಾರಣಿ, ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ ಮತ್ತು ನಿರ್ದೇಶಕ ಎಸ್,ನಾರಾಯಣ್(ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Aug 15, 2021 | 10:01 AM

ಕನ್ನಡದಲ್ಲಿ ಖ್ಯಾತ ಹಿಟ್ ಚಿತ್ರಗಳನ್ನು ನೀಡಿದ ನಿರ್ಮಾಪಕ- ನಿರ್ದೇಶಕ ಜೋಡಿ ಮತ್ತೆ ಒಂದಾಗಲಿದೆ. ಹೌದು. ಸೂರ್ಯವಂಶ, ಚಂದ್ರಚಕೋರಿ ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ನಿರ್ವಹಿಸಿದ್ದ, ರಾಜಕಾರಣಿ, ನಿರ್ಮಾಪಕ ಎಚ್​​.ಡಿ.ಕುಮಾರಸ್ವಾಮಿ ಮತ್ತು ನಿರ್ದೇಶಕ ಎಸ್.ನಾರಾಯಣ್ ಹೊಸ ಚಿತ್ರದಲ್ಲಿ ಜೊತೆಯಾಗಲಿದ್ದಾರೆ. ಈ ಚಿತ್ರವು ಕಾದಂಬರಿ ಆಧಾರಿತವಾಗಿದ್ದು, ಸ್ವಾತಂತ್ರ್ಯ ಪೂರ್ವದ ಕಥಾನಕವನ್ನು ಹೊಂದಿರುವುದು ವಿಶೇಷ. ಎಸ್.ನಾರಾಯಣ್ ನೀಡಿರುವ ಮಾಹಿತಿಯ ಪ್ರಕಾರ, ಈ ಚಿತ್ರದ ಮಾತುಕತೆ ಹಲವು ವರ್ಷಗಳ ಮೊದಲೇ ನಡೆದಿತ್ತಂತೆ. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರಿರಲಿಲ್ಲ. ಈಗ ಅದಕ್ಕೆ ಮತ್ತೆ ಕಾಲ ಕೂಡಿಬಂದಿದೆ ಎನ್ನುತ್ತಾರೆ. ಈ ಮೊದಲು ಮಾತುಕತೆ ನಡೆದಿದ್ದಾಗ ಕಮಲ್ ಹಾಸನ್ ಹೀರೋ ಆಗಿ ಅಭಿನಯಿಸಲು ಮಾತುಕತೆ ನಡೆಸಲಾಗಿತ್ತು. ಐಶ್ವರ್ಯಾ ರೈ ಅವರನ್ನು ನಾಯಕಿ ಪಾತ್ರಕ್ಕೆ ಕರೆತರಬೇಕು ಎಂದು ಯೋಚಿಸಲಾಗಿತ್ತು. ಈಗ ಮತ್ತೆ ಮಾತುಕತೆ ನಡೆಯಬೇಕಾಗಿದ್ದು, ನಾಯಕ ನಟ ಹಾಗೂ ಕಲಾವಿದರ ತೀರ್ಮಾನ ಇನ್ನೂ ಆಗಿಲ್ಲ ಎನ್ನುತ್ತಾರೆ ಎಸ್.ನಾರಾಯಣ್.

‘‘ಕನ್ನಡದ ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ಆಧರಿಸಿದ ಚಿತ್ರ ಇದಾಗಿರಲಿದ್ದು, ಬಹುದೊಡ್ಡ ಮಟ್ಟದಲ್ಲಿ ತಯಾರಾಗಲಿದೆ. ಚಿತ್ರಕ್ಕೆ ಇನ್ನೂ ಪ್ರಾರಂಭಿಕ ಮಾತುಕತೆಯಷ್ಟೇ ನಡೆದಿದ್ದು, ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಇವೆ. ಹದಿನೇಳು ವರ್ಷಗಳ ಹಿಂದೆ ರಚಿಸಿದ ಸ್ಕ್ರಿಪ್ಟ್ ಇದು. ಈಗ ಮತ್ತೆ ಓದಿ, ಅದಕ್ಕೆ ತಯಾರಾಗಬೇಕು. ಕುಮಾರಸ್ವಾಮಿಯವರು ಮೌಲ್ಯಕ್ಕೆ ಬಹಳ ಮಹತ್ವ ಕೊಡುವವರು. ಈ ಕಾದಂಬರಿಯ ಕತೆ ಹಾಗೆಯೇ ಇರಲಿದೆ ಎಂದಿದ್ದಾರೆ’’ ನಾರಾಯಣ್.

ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯವರ ಜಾಗ್ವಾರ್, ಸೀತಾರಾಮ ಕಲ್ಯಾಣ ಚಿತ್ರಗಳನ್ನು ನಿರ್ಮಿಸಿದ್ದು ಬಿಟ್ಟರೆ, ಸದ್ಯಕ್ಕೆ ಬೇರೆ ಚಿತ್ರದ ಜವಾಬ್ದಾರಿ ತೆಗೆದುಕೊಂಡಿರಲಿಲ್ಲ. ಎಸ್.ನಾರಾಯಣ್ ಈ ಮೊದಲು ‘ಭೂಮಿಪುತ್ರ’ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿಯಾಗಿತ್ತು. ಕುಮಾರಸ್ವಾಮಿಯವರು ಪ್ರಾರಂಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿರಲಿದ್ದು, ಅರ್ಜುನ್ ಸರ್ಜಾ ಕುಮಾರಸ್ವಾಮಿ ಪಾತ್ರ ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಚಿತ್ರಕ್ಕೆ ಮುಹೂರ್ತವೂ ನಡೆದಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಪ್ರಾರಂಭವಾಗಲೇ ಇಲ್ಲ. ಈ ಕುರಿತು ಎಸ್.ನಾರಾಯಣ್ ಮಾತನಾಡಿದ್ದು, ಅದೊಂದು ಕಹಿ ಘಟನೆ. ಅದರ ಕುರಿತು ತಾನು ಮಾತನಾಡಿವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಎಸ್.ನಾರಾಯಣ್ ಆದಿತ್ಯ ಹಾಗೂ ಅದಿತಿ ಪ್ರಭುದೇವ ನಟನೆಯ 5ಡಿ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಧಾರವಾಹಿಯೊಂದರಲ್ಲಿ ಮಾಜಿ ಸೈನಿಕ ಅಧಿಕಾರಿಯ ಪಾತ್ರವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ:

Bigg Boss: ‘ಬಿಗ್​ ಬಾಸ್​ ನಿರೂಪಕರನ್ನು ಬದಲಾಯಿಸಿ ಪ್ಲೀಸ್​’: ಹೊಸ ಸೀಸನ್​ ಶುರುವಿಗೂ ಮುನ್ನವೇ ಜನರಿಂದ ಭಾರಿ ಒತ್ತಾಯ

ರಚಿತಾ ರಾಮ್​ ಬಗ್ಗೆ ಕೆಟ್ಟ ಕಮೆಂಟ್​: ಫೈಟರ್​ ವಿವೇಕ್​ ಸಾವಿನ ಕುರಿತು ಮೌನ ಮುರಿದ ‘ಡಿಂಪಲ್​ ಕ್ವೀನ್​’

(S Narayan and former CM HD Kumaraswamy once again teams up for a new movie)

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ