ಹಿಂದಿಗೆ ಹೊರಟ ಕನ್ನಡದ ಸಿನಿಮಾ; ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ ‘ಸಂಕಷ್ಟಕರ ಗಣಪತಿ’

2018ರಲ್ಲಿ ಸಂಕಷ್ಟಕರ ಗಣಪತಿ ಸಿನಿಮಾ ತೆರೆಗೆ ಬಂದಿತ್ತು. ‘ಏಲಿಯನ್ ಹ್ಯಾಂಡ್ ಸಿಂಡ್ರೋಮ್’ ಕಥಾಹಂದರ ಹೊಂದಿದ್ದ ಈ ಸಿನಿಮಾ ಉತ್ತಮ ಹೆಸರು ಮಾಡಿತ್ತು.

ಹಿಂದಿಗೆ ಹೊರಟ ಕನ್ನಡದ ಸಿನಿಮಾ; ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ ‘ಸಂಕಷ್ಟಕರ ಗಣಪತಿ’
ಹಿಂದಿಗೆ ಹೊರಟ ಕನ್ನಡದ ಸಿನಿಮಾ; ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ ‘ಸಂಕಷ್ಟಕರ ಗಣಪತಿ’
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 14, 2021 | 9:18 PM

ಸ್ಯಾಂಡಲ್​ವುಡ್​ನ ಸಾಕಷ್ಟು ಸಿನಿಮಾಗಳು ಈ ಮೊದಲಿನಿಂದಲೂ ಬೇರೆ ಭಾಷೆಗಳಿಗೆ ರಿಮೇಕ್​ ಆಗುತ್ತಲೇ ಬಂದಿವೆ. ಯು-ಟರ್ನ್​ ಸಿನಿಮಾ ಹಲವು ಭಾಷೆಗೆ ರಿಮೇಕ್​ ಆಗಿ ದಾಖಲೆ ಬರೆದಿದೆ. ಈಗ ಕನ್ನಡದ ಮತ್ತೊಂದು ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ಹೌದು, ಕನ್ನಡದ ‘ಸಂಕಷ್ಟಕರ ಗಣಪತಿ’ ಸಿನಿಮಾ ಈಗ ಹಿಂದಿ ಚಿತ್ರರಂಗದತ್ತ ಮುಖ ಮಾಡಿದೆ.

2018ರಲ್ಲಿ ಸಂಕಷ್ಟಕರ ಗಣಪತಿ ಸಿನಿಮಾ ತೆರೆಗೆ ಬಂದಿತ್ತು. ‘ಏಲಿಯನ್ ಹ್ಯಾಂಡ್ ಸಿಂಡ್ರೋಮ್’ ಕಥಾಹಂದರ ಹೊಂದಿದ್ದ ಈ ಸಿನಿಮಾ ಉತ್ತಮ ಹೆಸರು ಮಾಡಿತ್ತು. ವಿಮರ್ಶೆಯಲ್ಲೂ ಈ ಚಿತ್ರ ಗೆದ್ದಿತ್ತು. ಈಗ ಈ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ‘ಕಾರ್ವಾನ್’ ಮತ್ತು ‘ರಶ್ಮಿ ರಾಕೆಟ್’ ಖ್ಯಾತಿಯ ಆಕರ್ಷ್ ಖುರಾನಾ ಅವರು ಸನ್ನಿ ಖುರಾನಾ ಹಾಗೂ ವಿಕಾಸ್ ಶರ್ಮಾ ಜೊತೆಗೂಡಿ ‘ಬಾಯೆ ಹಾಥ್ ಕಾ ಖೇಲ್’ ಹೆಸರಿನಡಿಯಲ್ಲಿ ಸಿನಿಮಾ ಮಾಡುತ್ತಿದೆ.

2018ರಲ್ಲಿ ತೆರೆಕಂಡ ಈ ಚಿತ್ರವು ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿ ನಂತರ ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರವಾಗುತ್ತಿದೆ. ಅರ್ಜುನ್​ ಕುಮಾರ್​ ಎಸ್​. ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದರು.  ಲಿಖಿತ್ ಶೆಟ್ಟಿ, ಅಚ್ಯುತ ಕುಮಾರ್, ಶೃತಿ ಗೊರಾಡಿಯಾ, ನಾಗಭೂಷಣ, ಮಂಜುನಾಥ ಹೆಗಡೆ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್​ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಮತ್ತು  ವಿಜೇತ್ ಚಂದ್ರ, ಮಧು ತುಂಬಕೆರೆ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದರು.

ಇದನ್ನೂ ಓದಿ: ಜಾತಿ ನಿಂದನೆ ಆರೋಪದಡಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಬಂಧನಕ್ಕೂ ಮೊದಲು ರಂಪಾಟ ಮಾಡಿದ ನಟಿ

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ