‘ಇಷ್ಟು ದಿನ ಏಕೆ ಕಾಣಿಸಿಕೊಂಡಿಲ್ಲ?’ ಅಭಿಮಾನಿಗಳ ಪ್ರಶ್ನೆಗೆ ಅರವಿಂದ್ ಕೆಪಿ ಕೊಟ್ರು ಉತ್ತರ
ಬಿಗ್ ಬಾಸ್ ಪೂರ್ಣಗೊಂಡು ಇಷ್ಟು ದಿನವಾದರೂ ಲೈವ್ ಏಕೆ ಬಂದಿಲ್ಲ ಎಂದು ಅರವಿಂದ್ ಕೆಪಿ ಅವರನ್ನು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಅರವಿಂದ್ ಕೆಪಿ ಲೈವ್ನಲ್ಲಿ ಉತ್ತರ ನೀಡಿದ್ದಾರೆ.
ಅರವಿಂದ್ ಕೆ.ಪಿ. ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada) ರನ್ನರ್ಅಪ್ ಆಗಿ ಹೊರ ಹೊಮ್ಮಿದ್ದಾರೆ. ಮಂಜು ವಿರುದ್ಧ ಅವರು ಕೆಲವೇ ಮತಗಳ ಅಂತರದಲ್ಲಿ ಸೋತಿದ್ದಾರೆ. ನಾನು ಗೆಲ್ಲೋಕೆ ಅರವಿಂದ್ ಅವರೇ ಸ್ಫೂರ್ತಿ ಎಂದು ಮಂಜು ಹೇಳಿದ್ದರು. ಇದು ಅರವಿಂದ್ಗೆ (Aravind KP) ಖುಷಿ ನೀಡಿದೆ. ಬಿಗ್ ಬಾಸ್ ಪೂರ್ಣಗೊಂಡು ವಾರ ಕಳೆದರೂ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯಾವುದೇ ಮಾಧ್ಯಮಕ್ಕೆ ಸಂದರ್ಶನ ನೀಡಿರಲಿಲ್ಲ. ಈಗ ಅವರು ಅಭಿಮಾನಿಗಳಿಗಾಗಿ ಲೈವ್ ಬಂದಿದ್ದಾರೆ.
ಬಿಗ್ ಬಾಸ್ ಪೂರ್ಣಗೊಂಡು ಇಷ್ಟು ದಿನವಾದರೂ ಲೈವ್ ಏಕೆ ಬಂದಿಲ್ಲ ಎಂದು ಅರವಿಂದ್ ಕೆಪಿ ಅವರನ್ನು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಅರವಿಂದ್ ಕೆಪಿ ಲೈವ್ನಲ್ಲಿ ಉತ್ತರ ನೀಡಿದ್ದಾರೆ. ಅವರು 120 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದರಿಂದ ಇಂದು ಬ್ರೇಕ್ ಬೇಕು ಎಂದು ಅವರಿಗೆ ಅನ್ನಿಸಿದೆ. ಈ ಕಾರಣಕ್ಕೆ ಅಭಿಮಾನಿಗಳ ಎದುರು ಬರೋಕೆ ಅವರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಕೆಟ್ಟ ಭಾಷೆಯಲ್ಲಿ ಬಿಗ್ ಬಾಸ್ಗೆ ಬೈಯ್ಯುವ ಅರವಿಂದ್-ದಿವ್ಯಾ ಫ್ಯಾನ್ಸ್ಗೆ ಪರಮೇಶ್ವರ ಗುಂಡ್ಕಲ್ ನೇರ ಪ್ರಶ್ನೆ