ತಾಲಿಬಾನ್ ಒಂದು ಸಂಘಟನೆಯಾದರೂ ಅದರ ಬಜೆಟ್ ಅಫ್ಘಾನಿಸ್ತಾನದ ಬಜೆಟ್​ಗಿಂತ ಬಹಳ ದೊಡ್ಡದು!

ತಾಲಿಬಾನ್ ಒಂದು ಸಂಘಟನೆಯಾದರೂ ಅದರ ಬಜೆಟ್ ಅಫ್ಘಾನಿಸ್ತಾನದ ಬಜೆಟ್​ಗಿಂತ ಬಹಳ ದೊಡ್ಡದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2021 | 4:16 PM

ತಾಲಿಬಾನಿಗಳ ಸಂಖ್ಯೆ ಚಿಕ್ಕದಿರಬಹುದು ಆದರೆ ಅವರ ಸಂಘಟನೆ ಆರ್ಥಿಕವಾಗಿ ಬಹಳ ಸಬಲವಾಗಿದೆ. 2016 ರಲ್ಲಿ ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಶ್ರೀಮಂತ ಸಂಘಟನೆಗಳ ಪೈಕಿ ತಾಲಿಬಾನ್ ಐದನೇ ಸ್ಥಾನದಲ್ಲಿತ್ತು.

ಯಾವುದು ಆಗಬಾರದಿತ್ತು ಅಂತ ಅಫ್ಘಾನಿಸ್ತಾನ ಅಂದುಕೊಳ್ಳುತಿತ್ತೋ ಅದು ಆಗಿ ಬಿಟ್ಟಿದೆ. ತಾಲಿಬಾನ್ ಆ ದೇಶ ಮತ್ತು ಅಲ್ಲಿನ ಸರ್ಕಾರವನ್ನು ವಶಕ್ಕೆ ತೆಗೆದುಕೊಂಡಿದೆ. ತಾಲಿಬಾನಿಗಳು ಕಾಬೂಲ ನಗರವನ್ನು ಪ್ರವೇಶಿಸಿದ ಬಳಿಕ ಅಲ್ಲೇ ಉಳಿದರೆ ಉಳಿಗಾಲ ಇಲ್ಲ ಅನ್ನೋದು ಖಾತ್ರಿಯಾಗುತ್ತಿದ್ದಂತೆ ದೇಶದ ಅಧ್ಯಕ್ಷ ಅಶ್ರಫ್ ಘನಿ ಬೇರೊಂದು ದೇಶಕ್ಕೆ ಪಲಾಯನಗೈದಿದ್ದಾರೆ. ಆಫ್ಘನ್ ಸೇನೆಗೆ ಹೋಲಿಸಿದರೆ, ತಾಲಿಬಾನಿಗಳು ಹೊಂದಿರುವ ಸೇನಾಬಲ ಬಹಳ ಚಿಕ್ಕದು. ಅದರೂ ಅವರಿಗೆ ಅಫ್ಘಾನಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿ ದೇಶದ ಮೇಲೆ ನಿಯಂತ್ರಣ ಸಾಧಿಸುವುದು ಹೇಗೆ ಸಾಧ್ಯವಾಯಿತು ಅನ್ನೋದು ಯಕ್ಷಪ್ರಶ್ನೆಯಾಗಿದೆ.

ತಾಲಿಬಾನಿಗಳ ಸಂಖ್ಯೆ ಚಿಕ್ಕದಿರಬಹುದು ಆದರೆ ಅವರ ಸಂಘಟನೆ ಆರ್ಥಿಕವಾಗಿ ಬಹಳ ಸಬಲವಾಗಿದೆ. 2016 ರಲ್ಲಿ ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಶ್ರೀಮಂತ ಸಂಘಟನೆಗಳ ಪೈಕಿ ತಾಲಿಬಾನ್ ಐದನೇ ಸ್ಥಾನದಲ್ಲಿತ್ತು. ಸುಮಾರು 15,000 ಕೋಟಿ ರೂಪಾಯಿಗಳ ವಹಿವಾಟಿನೊಂದಿಗೆ ಐಸಿಸ್ ಮೊದಲ ಸ್ಥಾನದಲ್ಲಿತ್ತು.

ಆಗ ಕೇವಲ 3,000 ಕೋಟಿ ರೂಪಾಯಿಗಳ ಆದಾಯ ಹೊಂದಿದ್ದ ತಾಲಿಬಾನ್ ಈಗ ರೂ. 11,000 ಕೋಟಿಗಳ ವಾರ್ಷಿಕ ಆದಾಯ ಹೊಂದಿದೆ. ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್​ನ ಒಂದು ಗೌಪ್ಯ ವರದಿಯ ಪ್ರಕಾರ ತಾಲಿಬಾನ್ ಸಂಘಟನೆಯ 2019-20 ಸಾಲಿಮ ಬಜೆಟ್ ರೂ. 11,800 ಕೋಟಿ ಗ್ರಾತ್ರದ್ದಾಗಿತ್ತು.

ಫೋರ್ಬ್ಸ್ ಪ್ರಕಟಿಸಿದ ವರದಿಯ ಪ್ರಕಾರ ತಾಲಿಬಾನ್ ಸಂಘಟನೆಯ ಪ್ರಮುಖ ಆದಾಯದ ಮೂಲ ಡ್ರಗ್ಸ್ ಕಳ್ಳಸಾಗಣೆಯಾಗಿದೆ. ಸುಮಾರು ರೂ 3,086 ಕೋಟಿಗಳನ್ನು ಈ ವ್ಯವಹಾರದ ಮೂಲಕ ಅದು ಸಂಪಾದಿಸುತ್ತದೆ. 1,780 ಕೋಟಿ ರೂಪಾಯಿ ವಿದೇಶಿ ದೇಣಿಗೆ ಮತ್ತು ಅಷ್ಟೇ ಪ್ರಮಾಣದ ಹಣ ಆಮದುಗಳ ಮೂಲಕ ಅದಕ್ಕೆ ಲಭ್ಯವಾಗುತ್ತದೆ. ಸುಮಾರು 1,185 ಕೋಟಿ ರೂಪಾಯಿಗಳನ್ನು ಅದು ಶ್ರೀಮಂತರಿಂದ ವಸೂಲಿ ಮಾಡುತ್ತದೆ.

ಇದನ್ನೂ ಓದಿ: Viral Video: ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ! ವಿಡಿಯೋ ವೈರಲ್​