ಬದಲಾಯಿತು ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಡಿಪಿ; ಗಾಬರಿ ಬಿದ್ದ ಫ್ಯಾನ್ಸ್​, ಏನಿದು ಸಮಾಚಾರ?

Sushant Singh Rajput: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಗೊಂಡು ವರ್ಷ ಕಳೆದ ಮೇಲೆ ಅವರ ಫೇಸ್​ಬುಕ್ ಖಾತೆಯ ಡಿಪಿ ಬದಲಾಯಿಸಲಾಗಿದೆ. ಈ ಘಟನೆಯಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ವಾಸ್ತವವಾಗಿ ಅಲ್ಲಿ ನಡೆದಿದ್ದೇನು ಎಂಬ ಸಂಪೂರ್ಣ ವರದಿ ಇಲ್ಲಿದೆ.

ಬದಲಾಯಿತು ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಡಿಪಿ; ಗಾಬರಿ ಬಿದ್ದ ಫ್ಯಾನ್ಸ್​, ಏನಿದು ಸಮಾಚಾರ?
ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಹೊಸ ಚಿತ್ರ
Follow us
TV9 Web
| Updated By: shivaprasad.hs

Updated on: Aug 21, 2021 | 3:50 PM

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳಿಗೆ ತಲೆಕೆಡಿಸಿಕೊಳ್ಳುವ ಪ್ರಕರಣವೊಂದು ಫೇಸ್​ಬುಕ್ ಅಂಗಳದಲ್ಲಿ ಜರುಗಿದೆ. ಸುಶಾಂತ್ ಸಿಂಗ್​ರ ಅಧಿಕೃತ ಫೇಸ್​ಬುಕ್ ಖಾತೆಯ ಪ್ರೊಫೈಲ್ ಬದಲಾಯಿಸಲಾಗಿದ್ದು, ಅಭಿಮಾನಿಗಳು ಗಾಬರಿ ಬಿದ್ದಿದ್ದಾರೆ. ಸುಶಾಂತ್ ಸಿಂಗ್ ಇಹಲೋಕ ತ್ಯಜಿಸಿ ವರ್ಷ ಕಳೆದ ಮೇಲೆ ಅವರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಬದಲಾವಣೆಗಳು ಏಕೆ ನಡೆಯುತ್ತಿವೆ ಎಂಬುದು ತಿಳಿಯದೇ, ಅಭಿಮಾನಿಗಳು ನಾನಾವಿಧದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಕುರಿತ ಕುತೂಹಲಕರ ವರದಿ ಇಲ್ಲಿದೆ.

ಸುಶಾಂತ್ ಸಿಂಗ್ ಫೇಸ್​ಬುಕ್ ಖಾತೆಯಲ್ಲಿ ಏನೇನು ಬದಲಾವಣೆಯಾಗಿದೆ?: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿನ ಅವರ ಪ್ರೊಫೈಲ್ ಬದಲಿಸಲಾಗಿದೆ. ಅವರ ಪ್ರೊಫೈಲ್ ಬದಲಿಸಿದ ನಂತರ ಗೊಂದಲಗೊಂಡ ಅಭಿಮಾನಿಗಳು ಅವರ ಹಳೆಯ ಪೋಸ್ಟ್​ಗಳಿಗೂ ಹೋಗಿ ಕಾಮೆಂಟ್ ಹಾಕುತ್ತಿದ್ದು, ಈ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ.

ಅಭಿಮಾನಿಗಳ ಗೊಂದಲಗಳೇನು? ಅಭಿಮಾನಿಗಳು ತಮ್ಮ ಅಚ್ಚರಿಯನ್ನು ನಾನಾ ವಿಧವಾಗಿ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಕೆಲವರು ‘ಓ ದೇವರೇ! ನನಗೊಮ್ಮೆ ಶಾಕ್ ಆಯ್ತು’ ಎಂದರೆ, ಮತ್ತೆ ಕೆಲವರು ‘ಈ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದೀರಿ? ದಯವಿಟ್ಟು ತಿಳಿಸಿ’ ಎಂದು ಕಾಮೆಂಟ್ ಮಾಡಿದ್ದಾರೆ. ಹಲವಾರು ಅಭಿಮಾನಿಗಳಿಗೆ ಈ ನಡೆ ಹಿಡಿಸಿಲ್ಲ. ನೇರವಾಗಿ ಅಸಮಾಧಾನ ತೋಡಿಕೊಳ್ಳುತ್ತಿರುವ ಅವರು, ‘ಈ ಖಾತೆಯನ್ನು ನಿರ್ವಹಿಸುತ್ತಿರುವವರು ಯಾರು? ಹೀಗೆ ಚಿತ್ರಗಳನ್ನು ಅಪ್​ಲೋಡ್ ಮಾಡುವ ಮೂಲಕ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ?’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Sushant Singh Rajput

ಅಭಿಮಾನಿಗಳ ಪ್ರತಿಕ್ರಿಯೆ

ವಾಸ್ತವವಾಗಿ ಆಗಿರುವುದೇನು?

ಸುಶಾಂತ್ ಸಿಂಗ್ ರಜಪೂತ್ ನಿಧನಾನಂತರ ಅವರ ಎಲ್ಲಾ ಸಾಮಾಜಿಕ ಜಾಲತಾಣಗಳು ತಟಸ್ಥವಾಗಿದ್ದವು. ನಿಧನದ ಎರಡು ದಿನದ ನಂತರ ಅವರ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಬರೆದಿದ್ದ ಪ್ರಕಾರ, ‘ಸುಶಾಂತ್ ಸಿಂಗ್ ಅವರಿಗೆ ಅಭಿಮಾನಿಗಳೇ ಗಾಡ್​ಫಾದರ್​ಗಳು. ಸುಶಾಂತ್​ಗೆ ಈ ಹಿಂದೆ ಮಾತು ಕೊಟ್ಟಂತೆ, ಈ ಖಾತೆಯಲ್ಲಿ ಅವರ ಯೋಚನೆಗಳು, ಕನಸುಗಳು, ಹಾರೈಕೆಗಳು, ಕಲಿಕೆಗಳನ್ನು ಹಂಚಿಕೊಳ್ಳುತ್ತೇವೆ. ಈ ಮೂಲಕ ಸುಶಾಂತ್ ಬಿಟ್ಟುಹೋಗಿರುವ ಧನಾತ್ಮಕ ಚಿಂತನೆಗಳನ್ನು ಸೇರಿಸಿ ಅವರ ಸುಂದರ ಕಲೆಕ್ಷನ್ ಮಾಡುತ್ತೇವೆ’ ಎಂದು ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಅದರಂತೆ ಈಗ ಸುಶಾಂತ್ ಅವರ ಹೊಸ ಚಿತ್ರವನ್ನು ಅಪ್​ಲೋಡ್ ಮಾಡಲಾಗಿದೆ.

ಸುಶಾಂತ್ ಸಿಂಗ್ ನೂತನ ಡಿಪಿ:

ಬಹಳಷ್ಟು ಅಭಿಮಾನಿಗಳಿಗೆ ಈ ವಿಷಯ ತಿಳಿಯದ ಕಾರಣ ಮತ್ತು ಇದ್ದಕ್ಕಿದ್ದಂತೆ ಸುಶಾಂತ್ ಖಾತೆ ಆಕ್ಟೀವ್ ಆದ ಕಾರಣ ಗೊಂದಲಗೊಂಡಿದ್ದಾರೆ. ಆದರೆ ಈ ಕುರಿತು ಸುಶಾಂತ್ ಖಾತೆಯಿಂದ ಮತ್ಯಾವ ಹೊಸ ಸ್ಪಷ್ಟನೆಯನ್ನೂ ನೀಡಲಾಗಿಲ್ಲ.

ಇದನ್ನೂ ಓದಿ:

Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

ಎಸ್​.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್​ ಕೃಷ್ಣನ್​

(Sushant Singh Rajput fb account profile is updated and fans are shocked)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ