AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ವಾಯುಸೇನೆ ಸಮವಸ್ತ್ರ ಧರಿಸಿದ ಕಂಗನಾ ರಣಾವತ್​ ಫೋಟೋ ವೈರಲ್​

‘ತೇಜಸ್’​ ಚಿತ್ರದ ಬಗ್ಗೆ ಕಂಗನಾ ರಣಾವತ್​ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರತೀಯ ವಾಯುಸೇನೆಯ ಪೈಲಟ್​​ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

Kangana Ranaut: ವಾಯುಸೇನೆ ಸಮವಸ್ತ್ರ ಧರಿಸಿದ ಕಂಗನಾ ರಣಾವತ್​ ಫೋಟೋ ವೈರಲ್​
ಕಂಗನಾ ರಣಾವತ್
TV9 Web
| Edited By: |

Updated on: Aug 21, 2021 | 6:20 PM

Share

ನಟಿ ಕಂಗನಾ ರಣಾವತ್​ (Kangana Ranaut) ಅವರು ಎಷ್ಟೇ ಕಿರಿಕ್​ ಮಾಡಿಕೊಂಡರೂ ಸಿನಿಮಾ ಕೆಲಸಗಳನ್ನು ನಿರ್ಲಕ್ಷಿಸುವುದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ಅವರು ಕಂಡಕಂಡ ವಿಚಾರಗಳಲ್ಲೆಲ್ಲ ಮೂಗು ತೂರಿಸುತ್ತಾರೆ. ಈ ನಡುವೆಯೇ ಸಿನಿಮಾ ಶೂಟಿಂಗ್​ಗಳಲ್ಲೂ ಪಾಲ್ಗೊಳ್ಳುತ್ತಾರೆ. ಅವರು ನಟಿಸಿರುವ ‘ತಲೈವಿ’ (Thalaivi) ಚಿತ್ರ ರಿಲೀಸ್​ಗೆ ರೆಡಿ ಇದೆ. ಆದರೆ ಕೊವಿಡ್​ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಈಗ ಕಂಗನಾ ಅವರು ಭಾರತೀಯ ವಾಯುಸೇನೆಯ (Indian Air Force) ಸಮವಸ್ತ್ರ ಧರಿಸಿರುವ ಫೋಟೋ ವೈರಲ್​ ಆಗಿದೆ. ಅದರ ಹಿಂದಿನ ಕಹಾನಿ ಏನು? ಸಿನಿಮಾ ಬಿಟ್ಟು ಅವರೇನಾದ್ರೂ ಸೇನೆ ಸೇರಿಕೊಂಡ್ರಾ? ಹಾಗೇನೂ ಇಲ್ಲ. ಇದು ಅವರ ಹೊಸ ಸಿನಿಮಾ ‘ತೇಜಸ್’​ ಗೆಟಪ್​.

ಇತ್ತೀಚೆಗಷ್ಟೇ ಕಂಗನಾ ಅವರು ‘ಧಾಕಡ್​’ ಸಿನಿಮಾದ ಶೂಟಿಂಗ್ ಮುಗಿಸಿದರು. ಈಗ ‘ತೇಜಸ್​’ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ (ಆ.21) ಶೂಟಿಂಗ್​ ಆರಂಭ ಆಗಿದ್ದು, ಮೊದಲ ದಿನವೇ ಸೆಟ್​ನಲ್ಲಿ ಅವರು ವಾಯುಸೇನೆಯ ಸಮವಸ್ತ್ರ ಧರಿಸಿ ಕ್ಯಾಮೆರಾ ಎದುರಿಸಿದ್ದಾರೆ. ಈ ಚಿತ್ರಕ್ಕೆ ಸರ್ವೇಶ್​ ಮೇವರಾ ಅವರು ನಿರ್ದೇಶನ ಮಾಡುತ್ತಿದ್ದಾರೆ.

ತೇಜಸ್​ ಚಿತ್ರದ ಬಗ್ಗೆ ಕಂಗನಾ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರತೀಯ ವಾಯುಸೇನೆಯ ಪೈಲಟ್​ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹಗಲಿರುಳು ದೇಶದ ರಕ್ಷಣೆ ಮಾಡುವ ಯೋಧರಿಗೆ ಈ ಸಿನಿಮಾ ಅರ್ಪಣೆ ಎಂದು ಅವರು ಈ ಹಿಂದೆ ಹೇಳಿದ್ದರು. ಈ ವರ್ಷ ಮಾರ್ಚ್​ನಲ್ಲಿ ಕಂಗನಾ ಜನ್ಮದಿನದ ಪ್ರಯುಕ್ತ ‘ತೇಜಸ್​’ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಆಗಿತ್ತು. ಈ ಪಾತ್ರಕ್ಕಾಗಿ ಅವರು ಭರ್ಜರಿ ತರಬೇತಿ ಪಡೆದುಕೊಂಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಂಗನಾ ರಣಾವತ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಜಯಲಲಿತಾ ಬಯೋಪಿಕ್​ ಆಗಿ ಮೂಡಿಬರುತ್ತಿರುವ ‘ತಲೈವಿ’ ಚಿತ್ರದ ಬಿಡುಗಡೆಗಾಗಿ ಅವರ ಫ್ಯಾನ್ಸ್​ ಕಾಯುತ್ತಿದ್ದಾರೆ. ‘ಮಣಿಕರ್ಣಿಕಾ ರಿಟರ್ನ್ಸ್​’ ಮತ್ತು ಇಂದಿರಾ ಗಾಂಧಿ ಜೀವನಾಧಾರಿತ ‘ಎಮರ್ಜೆನ್ಸಿ’ ಸಿನಿಮಾ ಕೂಡ ಕಂಗನಾ ಕೈಯಲ್ಲಿದೆ. ಈ ಎರಡೂ ಸಿನಿಮಾಗಳಿಗೆ ಅವರೇ ನಿರ್ದೇಶನ ಮಾಡಲಿರುವುದು ವಿಶೇಷ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದ ಕಂಗನಾ, ಪಡ್ಡೆಗಳ ನಿದ್ದೆ ಕದ್ದಿದ್ದರು.

ಇದನ್ನೂ ಓದಿ:

ಕಂಗನಾಗೆ ಇನ್​ಸ್ಟಾಗ್ರಾಮ್​ಗೆ ಚೀನಾ ಹ್ಯಾಕರ್ಸ್​ ಕಾಟ; ತಾಲಿಬಾನ್​ ಪೋಸ್ಟ್​ಗಳು ಡಿಲೀಟ್ ​

Kangana Ranaut: ನಟಿ ಕಂಗನಾರ ಹಾಟ್ ಫೊಟೊಸ್ ವೈರಲ್ ಆದ ಬೆನ್ನಲ್ಲೇ ಡಿನ್ನರ್ ಡೇಟ್ ಚಿತ್ರಗಳೂ ವೈರಲ್!

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ