ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್​ ಕಪೂರ್​; ವೈರಲ್ ಆಯ್ತು ಫೋಟೋ

ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ.

ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್​ ಕಪೂರ್​; ವೈರಲ್ ಆಯ್ತು ಫೋಟೋ
ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್​ ಕಪೂರ್​; ಇಲ್ಲಿವೆ ಫೋಟೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 21, 2021 | 10:52 PM

ಅರ್ಜುನ್​ ಕಪೂರ್​ ಅವರು ಗರ್ಲ್​ಫ್ರೆಂಡ್ ಮಲೈಕಾ ಅರೋರಾ ಜತೆ ಹಾಯಾಗಿ ದಿನ ಕಳೆಯುತ್ತಿದ್ದಾರೆ. ತಮ್ಮ ರಿಲೇಶನ್​ಶಿಪ್​ ಬಗ್ಗೆ ಸಾಕಷ್ಟು ಬಾರಿ ಅವರು ಓಪನ್​ ಆಗಿಯೇ ಮಾತನಾಡುತ್ತಾರೆ. ಸಾಕಷ್ಟು ಫೋಟೋಗಳನ್ನು ಇಬ್ಬರೂ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಾರೆ. ಈಗ ವೀಕೆಂಡ್​ನಲ್ಲಿ ಅರ್ಜುನ್​ ಹಾಗೂ ಮಲೈಕಾ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಅರ್ಜುನ್​ ಕಪೂರ್​ ಹಂಚಿಕೊಂಡಿದ್ದಾರೆ.

ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಮಲೈಕಾಗೆ ಮದುವೆ ಆಗಿ ಒಂದು ಮಗು ಕೂಡ ಇದೆ. ನಟ, ನಿರ್ಮಾಪಕ ಅರ್ಬಾಜ್​ ಖಾನ್​​ ಜೊತೆ ಮದುವೆ ಆಗಿದ್ದ ಮಲೈಕಾ ನಂತರ ವಿಚ್ಛೇದನ ಪಡೆದಿದ್ದರು. ಈಗ ಮಲೈಕಾ ಮತ್ತು ಅರ್ಜುನ್​ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ. ಅರ್ಜುನ್​ ಕಪೂರ್​ ಅವರು ಸ್ಟೇಟಸ್​ನಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಲೈಕಾ ಅರೋರಾ ಕುಳಿತಿರುವ ಫೋಟೋಗಳನ್ನು ಅರ್ಜುನ್​ ಕಪೂರ್​ ಹಂಚಿಕೊಂಡಿದ್ದಾರೆ. ಮಲೈಕಾ ಮೊಬೈಲ್​ ನೋಡುತ್ತಾ ಕೂತಿದ್ದಾರೆ. ‘ಶನಿವಾರ’ ಎಂದು ಬರೆದು ಮಲೈಕಾಗೆ ಟ್ಯಾಗ್​ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಜುನ್​ ಕಪೂರ್​ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ‘ನನ್ನ ಖಾಸಗಿ ಜೀವನದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಯಾಕೆಂದರೆ ನಾವು ನಮ್ಮ ಸಂಗಾತಿಯನ್ನು ಗೌರವಿಸಬೇಕು’ ಎಂದು ಅರ್ಜುನ್​ ಕಪೂರ್​ ಹೇಳಿದ್ದರು.

ಬಾಂದ್ರಾ ಸಮೀಪದಲ್ಲೇ ಅರ್ಜುನ್​ ಕಪೂರ್​ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕಾಗಿ ಅವರು 20 ಕೋಟಿ ರೂಪಾಯಿ ನೀಡಿದ್ದರು. ಇದು ಮಲೈಕಾ ಅರೋರ ಅವರ ಲಕ್ಸುರಿ ಮನೆ ಸಮೀಪವೇ ಇದೆ. ಈ ವಿಲ್ಲಾವನ್ನು ಮಲೈಕಾ ತುಂಬಾನೇ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಕರೀನಾ ಕಪೂರ್​, ರಣಬೀರ್​ ಕಪೂರ್​ ಮನೆ ಕೂಡ ಇದೇ ಭಾಗದಲ್ಲಿದೆ.

ಇದನ್ನೂ ಒದಿ: ತನಗಿಂತ 12 ವರ್ಷ ಕಿರಿಯ ನಟನ ಜೊತೆ ಸುತ್ತಾಡುತ್ತಿರುವ ಮಲೈಕಾ ಅರೋರಾ ಸೌಂದರ್ಯದ ಗುಟ್ಟು ರಟ್ಟು!

ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ