ಸುಶಾಂತ್​ ಸಿಂಗ್​ಗೆ ರಕ್ಷಾ ಬಂಧನದ ಶುಭಾಶಯ ಕೋರಿದ ಸಹೋದರಿ ಶ್ವೇತಾ; ಚಿತ್ರ ನೋಡಿ ಭಾವುಕರಾದ ಅಭಿಮಾನಿಗಳು

Raksha Bandhan: ನಟ ದಿ.ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ರಕ್ಷಾ ಬಂಧನದ ಸಂದರ್ಭದಲ್ಲಿ ತಮ್ಮ ಸಹೋದರನಿಗೆ ಶುಭ ಕೋರಿದ್ದಾರೆ. ಅಭಿಮಾನಿಗಳು ಇದನ್ನು ನೋಡಿ, ಸುಶಾಂತ್ ಅವರನ್ನು ಈ ಸಂದರ್ಭದಲ್ಲಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಭಾವುಕರಾಗಿದ್ದಾರೆ.

ಸುಶಾಂತ್​ ಸಿಂಗ್​ಗೆ ರಕ್ಷಾ ಬಂಧನದ ಶುಭಾಶಯ ಕೋರಿದ ಸಹೋದರಿ ಶ್ವೇತಾ; ಚಿತ್ರ ನೋಡಿ ಭಾವುಕರಾದ ಅಭಿಮಾನಿಗಳು
ಬಾಲ್ಯದಲ್ಲಿ ಸುಶಾಂತ್ ಸಿಂಗ್ ಹಾಗೂ ಶ್ವೇತಾ ಸಿಂಗ್ (ಕೃಪೆ: ಶ್ವೇತಾ ಸಿಂಗ್/ ಇನ್ಸ್ಟಾಗ್ರಾಂ)
Follow us
TV9 Web
| Updated By: shivaprasad.hs

Updated on: Aug 22, 2021 | 12:12 PM

ಕಳೆದ ವರ್ಷ ಅಗಲಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ರಕ್ಷಾಬಂಧನದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಈರ್ವರೂ ಬಾಲ್ಯದಲ್ಲಿ ಜೊತೆಯಾಗಿ ತೆಗೆಸಿಕೊಂಡಿದ್ದ ಚಿತ್ರವೊಂದನ್ನು ಹಂಚಿಕೊಂಡಿರುವ ಶ್ವೇತಾ, ಸುಶಾಂತ್ ಕುರಿತು ಪ್ರೀತಿಯ ಒಂದೆರಡು ಸಾಲನ್ನು ಬರೆದಿದ್ದಾರೆ. ‘ಪ್ರೀತಿಯ ಸಹೋದರ, ನಾವಿಬ್ಬರು ಎಂದಿಗೂ ಜೊತೆಯಾಗಿರುತ್ತೇವೆ’ ಎಂದು ಅವರು ಬರೆದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ರಕ್ಷಾ ಬಂಧನದ ಸಂದರ್ಭದಲ್ಲಿ ಈ ಚಿತ್ರವನ್ನು ನೋಡಿ ಅಭಿಮಾನಿಗಳಿಗೆ ಸಂತಸವಾಗಿದ್ದು, ಸುಶಾಂತ್ ಸಿಂಗ್ ಈ ಸಂದರ್ಭದಲ್ಲಿ ಇರಬೇಕಿತ್ತು, ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಶ್ವೇತಾ ಹಂಚಿಕೊಂಡ ಚಿತ್ರ:

ಶ್ವೇತಾ ಮತ್ತು ಸುಶಾಂತ್​ ಪರಸ್ಪರ ಕೈ ಯನ್ನು ಹಿಡಿದುಕೊಂಡು ನಿಂತಿರುವ ಈ ಚಿತ್ರ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿದೆ. ಕಾಮೆಂಟ್​ಗಳ ಮೂಲಕ ಹಲವರು ಈ ಕುರಿತು ಬರೆದುಕೊಂಡಿದ್ದು, ಸುಶಾಂತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ನಟ ಸುಶಾಂತ್ ಸಿಂಗ್ ಅವರ ಫೇಸ್​ಬುಕ್ ಖಾತೆಯನ್ನು ಅವರ ಸ್ಮರಣಾರ್ಥವಾಗಿ ಸುಶಾಂತ್ ಚಿಂತನೆ, ಯೋಚನೆ ಮೊದಲಾದವುಗಳ ಮೂಲಕ ಕಲೆಕ್ಷನ್ ರೂಪದಲ್ಲಿ ಮಾರ್ಪಡಿಸಲಾಗುವುದು ಎಂದು ಅವರ ಖಾತೆಯನ್ನು ನಿರ್ವಹಿಸುವವರು ತಿಳಿಸಿದ್ದರು. ಅದರಂತೆ ಕಳೆದ ವಾರ ಸುಶಾಂತ್ ಅವರ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲಾಗಿತ್ತು. ಈ ಕುರಿತಂತೆ ಅಭಿಮಾನಿಗಳಿಗೆ ಗೊಂದಲವಾಗಿ, ಈ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನಟ ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14ರಂದು ನಿಧನ ಹೊಂದಿದ್ದರು. ಅವರ ಸಾವಿನ ಕುರಿತು ಹಲವಾರು ಅನುಮಾನಗಳು ಎದ್ದಿತ್ತು. ಈ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಯವರನ್ನು ಬಂಧಿಸಲಾಗಿತ್ತು. ಈಗ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ ಖ್ಯಾತ ನಟ ಇಮ್ರಾನ್ ಹಶ್ಮಿ ಈ ಕುರಿತಂತೆ ಮಾತನಾಡುತ್ತಾ, ಈ ಪ್ರಕರಣದಲ್ಲಿ ರಿಯಾಗೆ ಅನ್ಯಾಯವಾಗಿದೆ ಎಂದಿದ್ದರು.

ಇದನ್ನೂ ಓದಿ:

ಬದಲಾಯಿತು ಸುಶಾಂತ್ ಸಿಂಗ್ ರಜಪೂತ್ ಫೇಸ್​ಬುಕ್ ಖಾತೆಯ ಡಿಪಿ; ಗಾಬರಿ ಬಿದ್ದ ಫ್ಯಾನ್ಸ್​, ಏನಿದು ಸಮಾಚಾರ?

ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ; ಫೋಟೋ ವೈರಲ್

(Late actor Sushant Singh Rajput sister Shwetha Singh wishes her brother on Raksha Bandhan)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ