Salman Khan: ಬಹು ನಿರೀಕ್ಷಿತ ‘ಟೈಗರ್ 3’ ಚಿತ್ರದ ಫೊಟೊಗಳು ಲೀಕ್; ಸಲ್ಮಾನ್ ಗೆಟಪ್ ನೋಡಿ ಅಚ್ಚರಿಗೊಂಡ ಫ್ಯಾನ್ಸ್
Tiger 3: ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ‘ಟೈಗರ್ 3’ ಚಿತ್ರದಲ್ಲಿನ ಸಲ್ಮಾನ್ ಗೆಟಪ್ ಲೀಕ್ ಆಗಿದೆ. ಹೊಸ ಚಿತ್ರದಲ್ಲಿ ಸಲ್ಮಾನ್ ಅವತಾರ ನೊಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ ‘ಟೈಗರ್ 3’ ಸದ್ಯ ಚಿತ್ರೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಈ ಚಿತ್ರವು ಸದ್ಯ ರಷ್ಯಾದಲ್ಲಿ ಬೀಡುಬಿಟ್ಟಿದೆ. ಅಲ್ಲಿ ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿನ ಕೆಲವು ಚಿತ್ರಗಳು ಅಂತರ್ಜಾಲದಲ್ಲಿ ಲೀಕ್ ಆಗಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ. ಆಕ್ಷನ್ ಚಿತ್ರವಾದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲ ಮೂಡಿಸುವಂತಹ ಸಲ್ಮಾನ್ ಖಾನ್ ಗೆಟಪ್ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
‘ಟೈಗರ್ 3’ ಚಿತ್ರಕ್ಕೆ ಇನ್ನೂ ಅಧಿಕೃತವಾಗಿ ಶೀರ್ಷಿಕೆಯನ್ನು ನೀಡಿಲ್ಲ. ಈ ಹಿಂದಿನ ‘ಏಕ್ತಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಚಿತ್ರಗಳು ಬಹುದೊಡ್ಡ ಹಿಟ್ ಆಗಿದ್ದಲ್ಲದೇ, ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ್ದವು. ಆದ್ದರಿಂದಲೇ ಸರಣಿಯ ಮೂರನೇ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇದೆ. ಸದ್ಯ ರಷ್ಯಾದಲ್ಲಿ ಆಕ್ಷನ್ ಚಿತ್ರಗಳನ್ನು ಚಿತ್ರತಂಡ ಚಿತ್ರೀಕರಿಸುತ್ತಿದೆ ಎಂಬ ಮಾಹಿತಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದ್ದು, ಲೀಕ್ ಆಗಿರುವ ಸಲ್ಮಾನ್ ಚಿತ್ರಗಳು ಅಭಿಮಾನಿಗಳ ಮನಗೆದ್ದಿದೆ.
ಇನ್ಸ್ಟಾಗ್ರಾಂನಲ್ಲಿ ಶೇರ್ ಆಗುತ್ತಿರುವ ಸಲ್ಮಾನ್ ಚಿತ್ರ:
View this post on Instagram
View this post on Instagram
ಮನೀಶ್ ಶರ್ಮಾ ನಿರ್ದೇಶನ ಮಾಡುತ್ತಿರುವ ‘ಟೈಗರ್ 3’ ಚಿತ್ರದಲ್ಲಿ ಸಲ್ಮಾನ್ ರಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಹಿಂದಿನ ಟೈಗರ್ ಚಿತ್ರಗಳನ್ನು ನಿರ್ಮಿಸಿದ್ದ ‘ಯಶ್ ರಾಜ್ ಸ್ಟುಡಿಯೋಸ್’ ನಿರ್ಮಾಣ ಮಾಡುತ್ತಿದೆ. ಸಲ್ಮಾನ್ ಸಂಬಂಧಿ ಸೊಹೈಲ್ ಖಾನ್ ಕೂಡಾ ಈ ಚಿತ್ರದ ಭಾಗವಾಗಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಪೋಸ್ ಕೂಡಾ ನೀಡಿದ್ದು, ಅದನ್ನು ಅಭಿಮಾನಿಗಳು ಸಂತಸದಿಂದ ಹಂಚಿಕೊಂಡಿದ್ದಾರೆ.
ಅಭಿಮಾನಿಗಳೊಂದಿಗೆ ಸಲ್ಮಾನ್ ಪೋಸ್:
View this post on Instagram
‘ಟೈಗರ್ 3’ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ. ಇಮ್ರಾನ್ ಹಶ್ಮಿ ಸಲ್ಮಾನ್ ಖಾನ್ ವಿರುದ್ಧ ತೊಡೆತಟ್ಟಲಿದ್ದಾರೆ. ಈ ಹಿಂದೆ ಚಿತ್ರದ ಮುಹಹೂರ್ತದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಮ್ರಾನ್ ಹಶ್ಮಿ, ‘ಸಲ್ಮಾನ್ ಜೊತೆ ನಟಿಸುವ ನನ್ನ ಬಹು ದಿನಗಳ ಕನಸು ಈ ಮೂಲಕ ನನಸಾಗಲಿದೆ’ ಎಂದಿದ್ದರು. ಟೈಗರ್ 3 ಚಿತ್ರವು ಸಲ್ಮಾನ್ ಪಾಲಿಗೆ ಬಹುಮುಖ್ಯವಾದ ಚಿತ್ರವಾಗಿದೆ. ಕಾರಣ, ಅವರ ಈ ಹಿಂದಿನ ‘ರಾಧೆ: ದಿ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ ಸಲ್ಮಾನ್ಗೆ ಈ ಚಿತ್ರ ಮುಖ್ಯವಾಗಿದೆ.
ಇದನ್ನೂ ಓದಿ:
ಸುಶಾಂತ್ ಸಿಂಗ್ಗೆ ರಕ್ಷಾ ಬಂಧನದ ಶುಭಾಶಯ ಕೋರಿದ ಸಹೋದರಿ ಶ್ವೇತಾ; ಚಿತ್ರ ನೋಡಿ ಭಾವುಕರಾದ ಅಭಿಮಾನಿಗಳು
ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ; ಫೋಟೋ ವೈರಲ್
(Salmaan Khan photos were leaked from Tiger 3 sets which is shooting in Russia)