AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ‘ಸೂಪರ್ ಡಾನ್ಸರ್ 4’ಗೆ ಎಂಟ್ರಿ ಕೊಡುತ್ತಲೇ ಭಾವುಕರಾದ ಶಿಲ್ಪಾ ಶೆಟ್ಟಿ; ಕಾರಣವೇನು?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೂಪರ್ ಡಾನ್ಸರ್ 4ರ ರಿಯಾಲಿಟಿ ಶೋಗೆ ಕಮ್​ಬ್ಯಾಕ್ ಮಾಡಿದ್ದಾರೆ. ಅಲ್ಲಿ ಸಿಕ್ಕ ಅದ್ದೂರಿ ಸ್ವಾಗತವನ್ನು ನೋಡಿ ಶಿಲ್ಪಾ ಭಾವುಕರಾಗಿದ್ದಾರೆ.

Shilpa Shetty: ‘ಸೂಪರ್ ಡಾನ್ಸರ್ 4’ಗೆ ಎಂಟ್ರಿ ಕೊಡುತ್ತಲೇ ಭಾವುಕರಾದ ಶಿಲ್ಪಾ ಶೆಟ್ಟಿ; ಕಾರಣವೇನು?
ಶಿಲ್ಪಾ ಶೆಟ್ಟಿ
Follow us
TV9 Web
| Updated By: shivaprasad.hs

Updated on: Aug 21, 2021 | 10:41 AM

ಪತಿ ರಾಜ್ ಕುಂದ್ರಾ ಬಂಧನದ  ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ನಟಿ ಶಿಲ್ಪಾ ಶೆಟ್ಟಿ, ರಿಯಾಲಿಟಿ ಶೋ ಮೂಲಕ ಕಮ್​ಬ್ಯಾಕ್ ಮಾಡಿದ್ದಾರೆ. ‘ಸೂಪರ್ ಡಾನ್ಸರ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇಟೈಮ್ಸ್ ವರದಿ ಮಾಡಿರುವ ಪ್ರಕಾರ, ‘‘ಶಿಲ್ಪಾ ಅವರ ಸಂಕಷ್ಟದ ಸಮಯದಲ್ಲಿ ತಂಡವು ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿತ್ತು. ಮಗು, ಕುಟುಂಬಕ್ಕೋಸ್ಕರವಲ್ಲದೇ, ತಮ್ಮನ್ನು ದೃಷ್ಟಿಯಲ್ಲಿಟ್ಟುಕೊಂಡು ರಿಯಾಲಿಟಿ ಶೋದಲ್ಲಿ ಭಾಗಿಯಾಗುವುದು ಅವಶ್ಯಕ ಎಂದೆನಿಸಿದ್ದರಿಂದ ಮರಳಲು ಒಪ್ಪಿಕೊಂಡರು. ಅವರನ್ನು ಶೋಗೆ ಅದ್ದೂರಿಯಾಗಿ ಆಮಂತ್ರಿಸಿದ್ದನ್ನು ನೋಡಿ, ಶಿಲ್ಪಾ ಭಾವುಕರಾದರು’’ ಎಂದು ಇಟೈಮ್ಸ್ ವರದಿ ಮಾಡಿದೆ.

ಶಿಲ್ಪಾ ಅವರು ಶೋಗೆ ಪ್ರವೇಶ ಮಾಡುತ್ತಾ ತಮಗೆ ಸಿಕ್ಕ ಸ್ವಾಗತ ನೋಡಿ ಭಾವುಕರಾದರು. ಆಗ ಸಹ ನಿರ್ಣಾಯಕರಾದ ನಿರ್ದೇಶಕ ಅನುರಾಗ್ ಬಸು ಹಾಗೂ ಗೀತಾ ಕಪೂರ್ ಶಿಲ್ಪಾ ಅವರನ್ನು ಸಮಾಧಾನಪಡಿಸಿದರು. ಈ ಮೊದಲು ಅನುರಾಗ್ ಬಸು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘‘ಶೋನಲ್ಲಿ ಶಿಲ್ಪಾ ಅವರ ಗೈರು ಬಹಳ ಬೇಸರ ತಂದಿದೆ. ನಮ್ಮದು ಮೂರು ಜನರ ಸಣ್ಣ ಕುಟುಂಬ(ನಿರ್ಣಾಯಕರದ್ದು). ಅದರಲ್ಲಿ ಒಬ್ಬರು ಗೈರಾದಾಗ ಅವರ ಅನುಪಸ್ಥಿತಿ ಬಹಳ ಕಾಡುತ್ತದೆ’’ ಎಂದಿದ್ದರು.

ಈ ಮೊದಲು ಕೂಡಾ ಶಿಲ್ಪಾ ಒಮ್ಮೆ ಸೂಪರ್ ಡಾನ್ಸರ್ 4ರ ಶೋಗೆ ಗೈರಾಗಿದ್ದರು. ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಅವರು ಶೋದಿಂದ ದೂರ ಉಳಿದಿದ್ದರು. ಆ ಸಂದರ್ಭದಲ್ಲಿ ಬಾಲಿವುಡ್​ನ ಖ್ಯಾತ ಡಾನ್ಸರ್ ಮಲೈಕಾ ಅರೋರಾ ಶಿಲ್ಪಾ ಸ್ಥಾನ ತುಂಬಿದ್ದರು. ಆದರೆ ಈ ಬಾರಿ ರಿಯಾಲಿಟಿ ಶೋ ತಂಡ, ಶಿಲ್ಪಾ ಅವರನ್ನೇ ನಿರ್ಣಾಯಕಿ ಸ್ಥಾನದಲ್ಲಿ ಮುಂದುವರೆಸಿದ್ದು, ಶಿಲ್ಪಾ ಕೂಡಾ ಅದರಲ್ಲಿ ಸಂತಸದಿಂದ ಭಾಗಿಯಾಗಿದ್ದಾರೆ.

ಇತ್ತೀಚೆಗೆ ಶೋದ  ಪ್ರೊಮೊ ಒಂದರಲ್ಲಿ ಶಿಲ್ಪಾ ಮಾತನಾಡಿದ್ದು ಸುದ್ದಿಯಾಗಿತ್ತು. ರಿಯಾಲಿಟಿ ಶೋನಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಕಥೆ ಆಧರಿಸಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ಮಾಡಿದ್ದರು. ಇದನ್ನು ನೋಡಿದ ನಂತರದಲ್ಲಿ ಶಿಲ್ಪಾ ಶೆಟ್ಟಿ, ‘‘ನಾನು ಪ್ರತಿ ಬಾರಿ ಝಾನ್ಸಿ ರಾಣಿಯ ಬಗ್ಗೆ ಕೇಳಿದಾಗ ಸಾಕಷ್ಟು ವಿಚಾರಗಳು ತಲೆಯಲ್ಲಿ ಬರುತ್ತವೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಗಂಡ ಸತ್ತ ನಂತರದಲ್ಲಿ, ತಮ್ಮ ಅಸ್ತಿತ್ವಕ್ಕಾಗಿ ಮಹಿಳೆಯರು ಹೋರಾಡಬೇಕಾದ ಪರಿಸ್ಥಿತಿ ಇದೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಿದ ಸಾಕಷ್ಟು ಮಹಿಳೆಯರು ಭಾರತದ ಇತಿಹಾಸದಲ್ಲಿ ಸಿಗುತ್ತಾರೆ. ಅಂಥ ರಾಷ್ಟ್ರದಿಂದ ನಾವು ಬಂದಿದ್ದೇವೆ ಎನ್ನುವ ಹೆಮ್ಮೆ ನನಗಿದೆ. ಯಾವುದೇ ಸನ್ನಿವೇಶವಿದ್ದರೂ, ನಾವು ಮಹಿಳೆಯರು ಹೋರಾಡಬಲ್ಲ ಶಕ್ತಿಯನ್ನು ಹೊಂದಿದ್ದೇವೆ’ ಎಂದಿದ್ದರು. ಅವರ ಈ ಮಾತು ಸಂಚಲನ ಮೂಡಿಸಿತ್ತು.

ಇದನ್ನೂ ಓದಿ:

‘ಪ್ರಭಾಕರ್​ ಕಾಲಿಗೆ ಹುಳ ಆಗಿತ್ತು ಎಂಬುದೆಲ್ಲ ಸುಳ್ಳು, ಆದರೆ ಪೆಟ್ಟಾಗಿದ್ದು ನಿಜ’; ಸರಿಗಮ ವಿಜಿ ತೆರೆದಿಟ್ಟ ಸತ್ಯ

ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್​ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?

(Shilpa Shetty got tears after she got grand welcome in Super Dancer 4)