ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್​ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?

ಮೂಲ ಚಿತ್ರದ ಸೊಗಡನ್ನು ಬದಿಗಿರಿಸಿ, ಟಾಲಿವುಡ್​ ಶೈಲಿಯಲ್ಲಿ ಆ್ಯಕ್ಷನ್​ ದೃಶಗಳನ್ನು ಚಿತ್ರೀಕರಿಸಲು ಜಯಂ​ ರಾಜ ಮುಂದಾಗಿದ್ದಾರೆ. ಇದಕ್ಕೆ ಚಿರಂಜೀವಿ ಸಮ್ಮತಿ ಸೂಚಿಸಿಲ್ಲ.

ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್​ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?
ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್​ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ
Follow us
TV9 Web
| Updated By: ಮದನ್​ ಕುಮಾರ್​

Updated on: Aug 21, 2021 | 9:16 AM

ಟಾಲಿವುಡ್​ನ ದಿಗ್ಗಜ ಕಲಾವಿದ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಅವರು ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ. ದೊಡ್ಡ ಪ್ರಾಜೆಕ್ಟ್​ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ಅವರು ಆ ಸಿನಿಮಾಗಳ ಮೇಕಿಂಗ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಚಿರಂಜೀವಿ ನಟಿಸುತ್ತಿರುವ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ‘ಮೆಗಾ ಸ್ಟಾರ್​’ ಎಲ್ಲ ಆಯಾಮದಿಂದಲೂ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಅವರಿಗೆ ‘ಲೂಸಿಫರ್’ (Lucifer) ತೆಲುಗು ರಿಮೇಕ್​ನ ಕೆಲಸಗಳಿಂದ ಅಷ್ಟೇನೂ ಖುಷಿ ಆದಂತಿಲ್ಲ. ಹಾಗಾಗಿ ಅವರು ನಿರ್ದೇಶಕ ಜಯಂ ರಾಜ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

2019ರಲ್ಲಿ ಸೂಪರ್​ ಹಿಟ್​ ಆದ ಮಲಯಾಳಂ ಸಿನಿಮಾ ‘ಲೂಸಿಫರ್’. ಮೋಹನ್​​ಲಾಲ್​ ಮುಖ್ಯಭೂಮಿಕೆ ನಿಭಾಯಿಸಿದ್ದ ಆ ಚಿತ್ರಕ್ಕೆ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​​ ಅವರು ನಿರ್ದೇಶನ ಮಾಡಿದ್ದರು. ಅದೇ ಸಿನಿಮಾ ತೆಲುಗಿಗೆ ರಿಮೇಕ್​ ಆಗುತ್ತಿದ್ದು, ಚಿರಂಜೀವಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಜಯಂ​ ರಾಜ ನಿಭಾಯಿಸುತ್ತಿದ್ದಾರೆ.

ಈ ಸಿನಿಮಾದ ಆ್ಯಕ್ಷನ್​ ದೃಶ್ಯಗಳ ಬಗ್ಗೆ ಚಿರಂಜೀವಿ ತಕರಾರು ತೆಗೆದಿದ್ದಾರೆ ಎನ್ನಲಾಗಿದೆ. ಮೂಲ ಸಿನಿಮಾದಲ್ಲಿ ನಿರ್ದೇಶಕ ಫೃಥ್ವಿರಾಜ್​ ಸುಕುಮಾರನ್​ ಅವರು ಸಾಹಸ ಸನ್ನಿವೇಶಗಳನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದರು. ಅದು ಚಿರುಗೆ ಸಖತ್​ ಇಂಪ್ರೆಸ್​ ಆಗಿದೆ. ಅದೇ ಮಾದರಿಯಲ್ಲೇ ರಿಮೇಕ್​ನಲ್ಲೂ ಫೈಟಿಂಗ್​ ಸೀನ್ಸ್​ ಇರಬೇಕು ಎಂದು ಅವರು ಬಯಸುತ್ತಿದ್ದಾರೆ. ಆದರೆ ನಿರ್ದೇಶಕ ಜಯಂ​ ರಾಜ ಬೇರೇನನ್ನೋ ಮಾಡಿದ್ದಾರೆ. ಮೂಲ ಚಿತ್ರದ ಸೊಗಡನ್ನು ಬದಿಗಿರಿಸಿ, ಟಾಲಿವುಡ್​ ಶೈಲಿಯಲ್ಲಿ ಆ್ಯಕ್ಷನ್​ ದೃಶಗಳನ್ನು ಜಯಂ​ ರಾಜ ಚಿತ್ರೀಕರಿಸಿದ್ದಾರೆ. ಇದಕ್ಕೆ ಚಿರಂಜೀವಿ ಸಮ್ಮತಿ ಸೂಚಿಸಿಲ್ಲ. ಹಾಗಾಗಿ ಸಾಹಸ ಸನ್ನಿವೇಶಗಳನ್ನು ಮತ್ತೆ ಹೊಸದಾಗಿ ಚಿತ್ರೀಕರಿಸುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಸಿನಿಮಾ ಕೆಲಸಗಳು ಇನ್ನಷ್ಟು ತಡವಾಗುವ ನಿರೀಕ್ಷೆ ಇದೆ.

ಇನ್ನು, ಆ.22ರಂದು ಚಿರಂಜೀವಿ ಹುಟ್ಟುಹಬ್ಬ. ಈ ಪ್ರಯುಕ್ತ ಬಹುನಿರೀಕ್ಷಿತ ‘ಆಚಾರ್ಯ’ ಸಿನಿಮಾದ ರಿಲೀಸ್​ ದಿನಾಂಕ ಘೋಷಣೆ ಆಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಕೊನೆಯ ಹಂತದ ಶೂಟಿಂಗ್​ ನಡೆಯುತ್ತಿದೆ.

ಇದನ್ನೂ ಓದಿ:

ಸರ್ಜರಿ ಬಳಿಕ​ ಚಿರಂಜೀವಿ ಜೊತೆ ಪ್ರಕಾಶ್​ ರೈ ಫೋಟೋ ವೈರಲ್​; ಇನ್ನಷ್ಟು ಹೆಚ್ಚಿತು ಅನುಮಾನ

ಚಿರಂಜೀವಿ ಅಭಿಮಾನಿಗಳು ಆ.22ರ ಮೇಲೆ ಕಣ್ಣು ಇಟ್ಟಿರೋದು ಯಾಕೆ? ನಿರೀಕ್ಷೆ ಹೆಚ್ಚಿಸಿದ ‘ಆಚಾರ್ಯ’

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ