ಚಿರಂಜೀವಿ ಅಭಿಮಾನಿಗಳು ಆ.22ರ ಮೇಲೆ ಕಣ್ಣು ಇಟ್ಟಿರೋದು ಯಾಕೆ? ನಿರೀಕ್ಷೆ ಹೆಚ್ಚಿಸಿದ ‘ಆಚಾರ್ಯ’

Acharya Release Date: ಆ.22ರಂದು ಚಿರಂಜೀವಿ ಜನ್ಮದಿನ. ಅಂದು ‘ಆಚಾರ್ಯ’ ಚಿತ್ರತಂಡದಿಂದ ರಿಲೀಸ್​ ದಿನಾಂಕ ಘೋಷಣೆ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

TV9kannada Web Team

| Edited By: Madan Kumar

Aug 05, 2021 | 5:42 PM

‘ಮೆಗಾ ಸ್ಟಾರ್​’ ಚಿರಂಜೀವಿ (Chiranjeevi) ಮತ್ತು ರಾಮ್​ ಚರಣ್​ (Ram Charan) ಜೊತೆಯಾಗಿ ನಟಿಸಿರುವ ‘ಆಚಾರ್ಯ’ (Acharya) ಸಿನಿಮಾ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಚಿತ್ರ ಯಾವಾಗ ಬಿಡುಗಡೆ ಆಗಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಹಾಗಾಗಿ ಚಿತ್ರತಂಡ ರಿಲೀಸ್​ ಡೇಟ್​ ಯಾವಾಗ ಘೋಷಣೆ ಮಾಡಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಒಂದು ಸೂಕ್ತ ಸಮಯದಲ್ಲಿ ಆ ಮಾಹಿತಿ ಹೊರಬೀಳಲಿದೆ. ಹಾಗಾದರೆ ಯಾವುದು ಆ ಸೂಕ್ತ ಸಮಯ? ಚಿರಂಜೀವಿ ಬರ್ತ್​ಡೇ! ಆ.22ರಂದು ಚಿರಂಜೀವಿ ಜನ್ಮದಿನ. ಅಂದು ‘ಆಚಾರ್ಯ’ ಚಿತ್ರತಂಡದಿಂದ ರಿಲೀಸ್​ ದಿನಾಂಕ ಘೋಷಣೆ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ಈವರೆಗೂ ಬಿಟ್ಟುಕೊಟ್ಟಿಲ್ಲ.

ಆಚಾರ್ಯ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿದ್ದವು. ಈಗ ಕೊನೆಯ ಹಂತದ ಶೂಟಿಂಗ್​ ನಡೆಯುತ್ತಿದೆ. ಅಂದಹಾಗೆ, ರಾಮ್​ ಚರಣ್​ ಈ ಚಿತ್ರದಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಇದೊಂದು ಅತಿಥಿ ಪಾತ್ರ. ಇತ್ತೀಚೆಗೆ ಬಿಡುಗಡೆಯಾದ ಅವರ​ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಇದನ್ನೂ ಓದಿ:

ರಾಮ್​ ಚರಣ್​-ಶಂಕರ್​ ಸಿನಿಮಾಗೆ ಕಿಯಾರಾ ನಾಯಕಿ; ಹುಟ್ಟುಹಬ್ಬದ ದಿನವೇ ಗುಡ್​ ನ್ಯೂಸ್​

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?

Follow us on

Click on your DTH Provider to Add TV9 Kannada