ರಾಮ್​ ಚರಣ್​-ಶಂಕರ್​ ಸಿನಿಮಾಗೆ ಕಿಯಾರಾ ನಾಯಕಿ; ಹುಟ್ಟುಹಬ್ಬದ ದಿನವೇ ಗುಡ್​ ನ್ಯೂಸ್​

ಮೊದಲಿನಿಂದಲೂ ಬಿಗ್​ ಬಜೆಟ್​ನ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ನಿರ್ದೇಶಕ ಶಂಕರ್​ ಈ ಬಾರಿ ಇನ್ನೊಂದು ದೈತ್ಯ ಸಿನಿಮಾ ಕಟ್ಟಿಕೊಡಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ಕಿಯಾರಾ ಅಡ್ವಾಣಿ ನಾಯಕಿ ಎಂಬುದು ವಿಶೇಷ.

ರಾಮ್​ ಚರಣ್​-ಶಂಕರ್​ ಸಿನಿಮಾಗೆ ಕಿಯಾರಾ ನಾಯಕಿ; ಹುಟ್ಟುಹಬ್ಬದ ದಿನವೇ ಗುಡ್​ ನ್ಯೂಸ್​
ಕಿಯಾರಾ ಅಡ್ವಾಣಿ, ರಾಮ್​ ಚರಣ್​, ಶಂಕರ್​
TV9kannada Web Team

| Edited By: Madan Kumar

Jul 31, 2021 | 1:04 PM

ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾಣಿ (Kiara Advani) ಕೂಡ ಪ್ರಮುಖರು. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಎಂ.ಎಸ್​. ಧೋನಿ: ಅನ್​ಟೋಲ್ಡ್​ ಸ್ಟೋರಿ, ಕಬೀರ್​ ಸಿಂಗ್, ಗುಡ್​ ನ್ಯೂಸ್​ ಮುಂತಾದ ಚಿತ್ರಗಳಿಂದ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಲಸ್ಟ್​ ಸ್ಟೋರೀಸ್​ ವೆಬ್​ ಸರಣಿ ಮೂಲಕವೂ ಅವರ ಜನಪ್ರಿಯತೆ ಹೆಚ್ಚಿತು. ಈ ಬಾಲಿವುಡ್​ ಬೆಡಗಿಗೆ ದಕ್ಷಿಣ ಭಾರತದಲ್ಲೂ ಸಖತ್​ ಡಿಮ್ಯಾಂಡ್​ ಇದೆ. ತೆಲುಗಿನ ಸ್ಟಾರ್​ ನಟರ ಜೊತೆ ಅಭಿನಯಿಸಿರುವ ಅವರಿಗೆ ಈಗ ಇನ್ನೊಂದು ಬಂಪರ್​ ಆಫರ್​ ಸಿಕ್ಕಿದೆ. ನಟ ರಾಮ್​ ಚರಣ್​ (Ram Charan) ಮತ್ತು ನಿರ್ದೇಶಕ ಶಂಕರ್​ (S. Shankar) ಕಾಂಬಿನೇಷನ್​ನ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಇಂದು (ಜು.31) ಕಿಯಾರಾ ಅಡ್ವಾಣಿ ಜನ್ಮದಿನ. ಆ ಪ್ರಯುಕ್ತ ಈ ಸಿಹಿ ಸುದ್ದಿ ಬ್ರೇಕ್​ ಮಾಡಲಾಗಿದೆ. ಖ್ಯಾತ ನಿರ್ಮಾಪಕ ದಿಲ್​ ರಾಜು ನಿರ್ಮಾಣ ಮಾಡಲಿರುವ ದೊಡ್ಡ ಪ್ರಾಜೆಕ್ಟ್​ನಲ್ಲಿ ರಾಮ್​ ಚರಣ್​ ನಟಿಸುತ್ತಿದ್ದು, ಅದಕ್ಕೆ ಶಂಕರ್​ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ರಾಮ್​ ಚರಣ್​ಗೆ ಜೋಡಿಯಾಗಿ ನಟಿಸುವ ಅವಕಾಶ ಕಿಯಾರಾಗೆ ಸಿಕ್ಕಿದೆ. ಈ ಹಿಂದೆ ‘ವಿನಯ ವಿಧೇಯ ರಾಮ’ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಕಿಯಾರಾ ಜೊತೆಯಾಗಿ ನಟಿಸಿದ್ದರು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದೆ.

ರಾಮ್​ ಚರಣ್​ ನಟಿಸುತ್ತಿರುವ 15ನೇ ಸಿನಿಮಾ ಇದಾಗಿದ್ದು, ಶೀಘ್ರದಲ್ಲೇ ಶೂಟಿಂಗ್​ ಆರಂಭ ಆಗಲಿದೆ. ಚಿತ್ರದ ಶೀರ್ಷಿಕೆ ಏನು ಹಾಗೂ ಬೇರೆ ಯಾವೆಲ್ಲ ಕಲಾವಿದರು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಆ ಮೂಲಕ ಕಿಯಾರಾಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೆಚ್ಚಲಿದೆ.

ಸದ್ಯ ರಾಮ್​ ಚರಣ್​ ಅವರು ಆರ್​ಆರ್​ಆರ್​ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ರಾಜಮೌಳಿ ನಿರ್ದೇಶಿಸುತ್ತಿರುವ ಆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಆ ಸಿನಿಮಾ ಬಳಿಕ ರಾಮ್​ ಚರಣ್​-ಶಂಕರ್​ ಕಾಂಬಿನೇಷನ್​ನ ಚಿತ್ರ ಸೆಟ್ಟೇರುವುದರಿಂದ ಇನ್ನೂ ದೊಟ್ಟದಲ್ಲಿ ನಿರ್ಮಾಣವಾಗಲೇಬೇಕಾದ ಅನಿವಾರ್ಯತೆ ಇದೆ. ಮೊದಲಿನಿಂದಲೂ ಬಿಗ್​ ಬಜೆಟ್​ನ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಶಂಕರ್​ ಈ ಬಾರಿ ಇನ್ನೊಂದು ದೈತ್ಯ ಸಿನಿಮಾ ಕಟ್ಟಿಕೊಡಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ:

ರಾಮ್​ ಚರಣ್​ Vs ಜ್ಯೂ. ಎನ್​ಟಿಆರ್​; ಫ್ಯಾನ್ಸ್ ತಕರಾರು ಬಗೆಹರಿಸಲು ರಾಜಮೌಳಿ ಮಾಡಿದ ಪ್ಲ್ಯಾನ್​ ಏನು?

ಮತ್ತೆ ಮತ್ತೆ ಆಲಿಯಾ ಭಟ್​ ಬೇಕು ಎಂದು ಬಯಸಿದ ರಾಮ್​ ಚರಣ್​; ಏನಿದು ವಿಷ್ಯ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada