ಗಡಂಗ್​ ರಕ್ಕಮ್ಮನಾಗಿ ಚಂದನವನಕ್ಕೆ ಬಂದ ಜಾಕ್ವೆಲಿನ್​ ಫರ್ನಾಂಡಿಸ್​; ವಿಕ್ರಾಂತ್​ ರೋಣದಲ್ಲಿ ವಿಶೇಷ ಪಾತ್ರ

Gadang Rakkamma: ‘ಖಂಡಿತವಾಗಿಯೂ ವಿಕ್ರಾಂತ್​ ರೋಣ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರಲಿದೆ’ ಎಂದು ಕೆಲವೇ ದಿನಗಳ ಹಿಂದೆ ಟ್ವೀಟ್​ ಮಾಡಿದ್ದ ಜಾಕ್ವೆಲಿನ್ ಫರ್ನಾಂಡಿಸ್​, ಈಗ ತಮ್ಮ ಫಸ್ಟ್​ಲುಕ್​ ಬಿಡುಗಡೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.​

ಗಡಂಗ್​ ರಕ್ಕಮ್ಮನಾಗಿ ಚಂದನವನಕ್ಕೆ ಬಂದ ಜಾಕ್ವೆಲಿನ್​ ಫರ್ನಾಂಡಿಸ್​; ವಿಕ್ರಾಂತ್​ ರೋಣದಲ್ಲಿ ವಿಶೇಷ ಪಾತ್ರ
ಕಿಚ್ಚ ಸುದೀಪ್​, ಜಾಕ್ವೆಲಿನ್​ ಫರ್ನಾಂಡಿಸ್​
Follow us
TV9 Web
| Updated By: ಮದನ್​ ಕುಮಾರ್​

Updated on:Jul 31, 2021 | 2:11 PM

ಹತ್ತು ಹಲವು ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಸೌಂಡು ಮಾಡುತ್ತಿದೆ. ಕಿಚ್ಚ ಸುದೀಪ್​ (Kichcha Sudeep) ನಟನೆಯ ಈ ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ನಟಿಸಿದ್ದಾರೆ ಎಂಬುದು ಕೆಲವೇ ದಿನಗಳ ಹಿಂದೆ ತಿಳಿದುಬಂದಿತ್ತು. ಆದರೆ ಪಾತ್ರದ ಹೆಸರೇನು ಮತ್ತು ಅವರ ಲುಕ್​ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಜಾಕ್ವೆಲಿನ್​ ಪಾತ್ರದ ಫಸ್ಟ್​ಲುಕ್​ ಬಹಿರಂಗಪಡಿಸಲಾಗಿದೆ. ಅವರ ಪಾತ್ರದ ಹೆಸರು ‘ಗಡಂಗ್​ ರಕ್ಕಮ್ಮ’ ಎಂದು ಕೂಡ ನಿರ್ದೇಶಕ ಅನೂಪ್​ ಭಂಡಾರಿ (Anup Bhandari) ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್​ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಚಿತ್ರತಂಡ ರಿಲೀಸ್​ ಮಾಡಿರುವ ಹೊಸ​ ಪೋಸ್ಟರ್​ ಕೌತುಕ ಮೂಡಿಸುವಂತಿದೆ. ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಗ್ಲಾಮರಸ್​ ಆದಂತಹ ಕಾಸ್ಟ್ಯೂಮ್​ ಧರಿಸಿ ನಿಂತಿರುವ ಜಾಕ್ವೆಲಿನ್​ ಅವರ ಲುಕ್​ ಗಮನ ಸೆಳೆಯುತ್ತಿದೆ.

‘ಗಡಂಗ್​ ರಕ್ಕಮ್ಮನಿಗೆ ಗೊತ್ತಿಲ್ಲದೇ ಇರುವುದು ಯಾವುದೂ ಇಲ್ಲ’ ಎಂಬ ಕ್ಯಾಪ್ಷನ್​ ಜೊತೆಗೆ ಪೋಸ್ಟರ್​ ಅನಾವರಣ ಮಾಡಲಾಗಿದೆ. ‘ಖಂಡಿತವಾಗಿಯೂ ವಿಕ್ರಾಂತ್​ ರೋಣ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರಲಿದೆ’ ಎಂದು ಕೆಲವೇ ದಿನಗಳ ಹಿಂದೆ ಟ್ವೀಟ್​ ಮಾಡಿದ್ದ ಜಾಕ್ವೆಲಿನ್, ಈಗ ತಮ್ಮ ಫಸ್ಟ್​ಲುಕ್​ ಬಿಡುಗಡೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.​ ‘ವಿಕ್ರಾಂತ್​ ರೋಣ ಸಿನಿಮಾದಲ್ಲಿನ ಗಡಂಗ್​ ರಕ್ಕಮ್ಮ ಎಂಬ ನನ್ನ ಪಾತ್ರವನ್ನು ಪರಿಚಯಿಸಲು ಖುಷಿ ಆಗುತ್ತಿದೆ’ ಎಂದು ಜಾಕ್ವೆಲಿನ್​ ಫರ್ನಾಂಡಿಸ್​ ಟ್ವೀಟ್​ ಮಾಡಿದ್ದಾರೆ. ಕನ್ನಡ ಸಿನಿಪ್ರಿಯರಿಂದ ಹಾಗೂ ಸುದೀಪ್​ ಅಭಿಮಾನಿಗಳಿಂದ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ.

ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಜೊತೆಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್​ ಜೊತೆ ನಿರೂಪ್​ ಭಂಡಾರಿ, ನೀತಾ ಅಶೋಕ್​ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಜಾಕ್ವೆಲಿನ್​ ಜೊತೆಗೆ ಶೂಟಿಂಗ್ ಮುಗಿಸಿದ ಬಳಿಕ ಅವರ ಕಾರ್ಯವೈಖರಿಗೆ ಸುದೀಪ್​ ಮೆಚ್ಚುಗೆ ಸೂಚಿಸಿದ್ದರು. ಇಬ್ಬರೂ ಜೊತೆಯಾಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು, ವಿಶೇಷ ಹಾಡಿನ ಬಗ್ಗೆ ನಿರೀಕ್ಷೆ ಮೂಡಿಸಿದ್ದರು. ಆ ಹಾಡು ಯಾವಾಗ ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುವಷ್ಟು ಕಾತರ ಹೆಚ್ಚಿದೆ.

ಇದನ್ನೂ ಓದಿ:

‘ವಿಕ್ರಾಂತ್​ ರೋಣ’ ಚಿತ್ರದ ನಟಿ ಜಾಕ್ವೆಲಿನ್​ ಹಾಟ್​ ಫೋಟೋ ವೈರಲ್​

ಜಾಕ್ವೆಲಿನ್ ಜೊತೆಗಿನ ನೆಚ್ಚಿನ ಚಿತ್ರಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್

Published On - 2:03 pm, Sat, 31 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ