ವಿಡಿಯೋ ಶೂಟ್ ಮಾಡಲು ಈ ಹೈದರು ಆರಿಸಿಕೊಂಡಿದ್ದು ಒಂದು ಪೊಲೀಸ್ ಸ್ಟೇಶನ್! ಅವರೀಗ ಪೊಲೀಸರ ಅತಿಥಿಗಳು!!

ವಿಡಿಯೋ ಶೂಟ್ ಮಾಡಲು ಈ ಹೈದರು ಆರಿಸಿಕೊಂಡಿದ್ದು ಒಂದು ಪೊಲೀಸ್ ಸ್ಟೇಶನ್! ಅವರೀಗ ಪೊಲೀಸರ ಅತಿಥಿಗಳು!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2021 | 4:11 PM

ಯುವಕರು ಇಲ್ಲಿ ತೋರುತ್ತಿರುವ ಸ್ಟಂಟ್ ಅಪಾಯಕಾರಿ ಅಲ್ಲವಾಗಿರುವುದರಿಂದ ಪಡ್ಡೆಗಳು ಏನೋ ಮಾಡಿವೆ ಅಂದುಕೊಂಡು ಸುಮ್ಮನಾಗಬಹುದಿತ್ತು. ಅದರೆ ಅಸಲಿ ವಿಷಯವೆಂದರೆ, ಇವರು ವಿಡಿಯೋ ಶೂಟ್ ಮಾಡಲು ಆರಿಸಿಕೊಂಡಿದ್ದು ಒಂದು ಪೊಲೀಸ್ ಠಾಣೆಯನ್ನು!

ನಾನು ಬೇರೆಯವರಿಗಿಂತ ಡಿಫರೆಂಟ್, ಏನು ಬೇಕಾದರೂ ನಾನು ಮಾಡಬಲ್ಲೆ ಎಂಬ ಒಣ ಧಿಮಾಕು ಪ್ರದರ್ಶಿಸುವುದು ಈ ತಲೆಮಾರಿನ ಯುವಕರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ತಮ್ಮ ಸ್ನೇಹಿತ-ಸ್ನೇಹಿತೆಯರನ್ನು ಇಂಪ್ರೆಸ್ ಮಾಡಲು ಡೇರ್ ಡೆವಿಲ್ ಸ್ಟಂಟ್ಗಳನ್ನು ಮಾಡುತ್ತಾ ಅದನ್ನು ತಮ್ಮ ಫೋನ್ಗಳಲ್ಲಿ ರೆಕಾರ್ಡ್ ಮಾಡಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ಸ್ಟಂಟ್ ಮಾಡಹೋಗಿ ಅಪಾಯಕ್ಕೆ ಸಿಲುಕಿದ, ಕೆಲವು ಸಂದರ್ಭಗಳಲ್ಲಿ ಪ್ರಾಣವನ್ನೇ ಕಳೆದುಕೊಂಡ ವಿಡಿಯೋಗಳೂ ಇವೆ.

ಈ ವಿಡಿಯೋನಲ್ಲಿ ಯುವಕರನ್ನು ಕೊಂಚ ಗಮನಿಸಿ. ಎಂಥದ್ದೋ ಸ್ಟಂಟ್ ಮಾಡುತ್ತಾ, ಯೋ ಯೋ ಅನ್ನುತ್ತಾ ಒಂದು ವಿಡಿಯೋವನ್ನು ಅವರು ಶೂಟ್ ಮಾಡಿದ್ದಾರೆ. ಒಬ್ಬನು ಅಲ್ಲ್ಲಿರುವ ಕುರ್ಚಿಯ ಮೇಲೆ ಕೂತು ತನ್ನೆದಿರಿರುವ ಟೇಬಲ್ ಮೇಲೆ ಕಾಲು ಚಾಚುತ್ತಾನೆ! ಯುವಕರು ಇಲ್ಲಿ ತೋರುತ್ತಿರುವ ಸ್ಟಂಟ್ ಅಪಾಯಕಾರಿ ಅಲ್ಲವಾಗಿರುವುದರಿಂದ ಪಡ್ಡೆಗಳು ಏನೋ ಮಾಡಿವೆ ಅಂದುಕೊಂಡು ಸುಮ್ಮನಾಗಬಹುದಿತ್ತು. ಅದರೆ ಅಸಲಿ ವಿಷಯವೆಂದರೆ, ಇವರು ವಿಡಿಯೋ ಶೂಟ್ ಮಾಡಲು ಆರಿಸಿಕೊಂಡಿದ್ದು ಒಂದು ಪೊಲೀಸ್ ಠಾಣೆಯನ್ನು!

ಹೌದು, ನಿಮಗಿಲ್ಲಿ ಕಾಣುತ್ತಿರುವುದು ಉತ್ತರ ಪ್ರದೇಶ ಆಗ್ರಾ ಪಟ್ಟಣದ ಜಗದೀಶ್ಪುರ ಪೊಲೀಸ್ ಸ್ಟೇಶನ್. ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿರುವುದು ಒಳ್ಳೆಯ ಕ್ರಮವೇ. ಆದರೆ, ಈ ಹುಡುಗರು ಠಾಣೆಯನ್ನು ಹೇಗೆ ಪ್ರವೇಶಿಸಿದರು, ಯಾಕೆ ಅಲ್ಲಿಗೆ ಬಂದರು, ಅವರು ವಿಡಿಯೋ ಶೂಟ್ ಮಾಡುವವರೆಗೆ ಸ್ಟೇಶನ್ ಅದ್ಹೇಗೆ ಖಾಲಿಯಿತ್ತು ಎಂಬ ಪ್ರಶ್ನೆಗಳಿಗೆ ಈ ಪೊಲೀಸ್ ಸ್ಟೇಶನ್ ಅಧಿಕಾರಿಗಳು ಮತ್ತು ಪೇದೆಗಳು ಉತ್ತರ ನೀಡಬೇಕಿದೆ.

ಯಾಕೆಂದರೆ ಖಾಲಿ ಪೊಲೀಸ್ ಸ್ಟೇಶನ್ ಒಂದರ ಚಿತ್ರಣವನ್ನು ಕಲ್ಪಿಸಿಕೊಳ್ಳವುದು ನಮಗೆ ಸಾಧ್ಯವಿಲ್ಲ.

ಇದನ್ನೂ ಓದಿ: ಅಮೆರಿಕದ ಜಿಮ್ನಾಸ್ಟ್ ಆಲಿ ರೈಸ್ಮಾನ್​ರಂತೆ ನಟಿಸಿದ ಪುಟ್ಟ ಬಾಲಕಿ! ವಿಡಿಯೋ ಮಜವಾಗಿದೆ ಮಿಸ್ ಮಾಡ್ಕೊಳ್ಬೇಡಿ