ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ.

ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?
ಕಿರಣ್​ ರಾಜ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 21, 2021 | 7:13 AM

ಬಿಗ್​ ಬಾಸ್​ ಮನೆ ಪ್ರವೇಶಿಸಿದ ನಂತರದಲ್ಲಿ ಹೊರ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಮನೆ ಒಳಗೆ ತೆರಳಿದ ಸ್ಪರ್ಧಿಗಳು ಮೊಬೈಲ್​ ಬಳಕೆ ಮಾಡುವಂತೇ ಇಲ್ಲ. ಈ ಕಾರಣಕ್ಕೆ ಸ್ಪರ್ಧಿಗಳು ಮನೆಯವರ ಜತೆ ಮಾತನಾಡಬೇಕು, ಏನಾದರೂ ಬೇಕಾದರೆ ಬಿಗ್​ ಬಾಸ್​ ಜತೆ ಮಾತನಾಡಬೇಕು. ಈಗ ಬಿಗ್​ ಬಾಸ್​ ಮನೆಯಲ್ಲಿ ಕಿರಣ್​ ರಾಜ್​ ಬಿಗ್​ ಬಾಸ್​ಗೆ ವಿಶೇಷ ಮನವಿಯೊಂದನ್ನು ಇಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಕನ್ನಡತಿ ಧಾರಾವಾಹಿ ಮೂಲಕ ಹೆಚ್ಚು ಮನೆಮಾತಾದ ಕಿರಣ್​ ರಾಜ್​ ಕೂಡ ಬಿಗ್​ ಬಾಸ್​ ಮನೆ ಸೇರಿದ್ದಾರೆ. ಅವರು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಗಗನ್​ ಚಿನ್ನಪ್ಪ ಹಾಗೂ ಕಿರಣ್​ ರಾಜ್​ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಗಗನ್​, ‘ಇಲ್ಲಿ ನಾವು ನಿತ್ಯ ಒಂದೊಂದು ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ಇದು ಒಂದು ವಾರದ ಬಿಗ್​ ಬಾಸ್. ಆದರೆ, 100 ದಿನಗಳ ಬಿಗ್​ ಬಾಸ್​ನಲ್ಲಿ ಎಲ್ಲರೂ ಪ್ರತಿ ಕೆಲಸವನ್ನು ಒಂದು ವಾರ ಮಾಡಬೇಕು. ಪಾತ್ರೆ ತೊಳೆಯೋದೆಲ್ಲ ಒಂದು ವಾರ ಮಾಡೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ. ಇದಕ್ಕೆ ಕಿರಣ್​ ರಾಜ್​ ಕೂಡ ತಲೆ ಆಡಿಸಿದ್ದಾರೆ. ‘ಬಾಳೆ ಎಲೆ ತಂದುಕೊಡಿ ಬಿಗ್​ ಬಾಸ್​’ ಎಂದು ನಾನು ಕೇಳುತ್ತಿದ್ದೆ ಎಂದಿದ್ದಾರೆ ಕಿರಣ್​ ರಾಜ್​.

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಗಳು ಹಾಸ್ಯಕ್ಕೆ ಕೆಲ ಮಾತುಗಳನ್ನು ಆಡಿದ್ದರು. ಇದನ್ನು ಅಚ್ಚರಿ ಎಂಬಂತೆ ಬಿಗ್​ ಬಾಸ್​ ಈಡೇರಿಸಿದ್ದರು. ಈಗ ಕಿರಣ್​ ರಾಜ್​ ಬೇಡಿಕೆಯನ್ನು ಬಿಗ್​ ಬಾಸ್​ ಈಡೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್​ ಬಾಸ್​ ಈ ಭಾನುವಾರ (ಆಗಸ್ಟ್ 22) ಪೂರ್ಣಗೊಳ್ಳಲಿದೆ. ಕೊನೆಯ ದಿನವನ್ನು ನಡೆಸಿಕೊಡೋಕೆ ಕಿಚ್ಚ ಸುದೀಪ್​ ಆಗಮಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಎಪಿಸೋಡ್​ಗಾಗಿ ವೀಕ್ಷಕರು ಕಾದು ಕೂತಿದ್ದಾರೆ.

ಇದನ್ನೂ ಓದಿ:

 ‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ