AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

ವನಿತಾ ವಿಜಯ್​ಕುಮಾರ್​ 2007ರಲ್ಲಿ ಆಕಾಶ್​ ಹಾಗೂ 2010ರಲ್ಲಿ ಆನಂದ್​ ರಾಜ್​ ಜತೆ ವಿಚ್ಛೇದನ ಪಡೆದುಕೊಂಡಿದ್ದರು. ಕಳೆದ ವರ್ಷ ಜೂನ್​ 27ರಂದು ಪೀಟರ್​ ಪೌಲ್​ ಜತೆ ಅವರು ಮದುವೆ ಆಗಿದ್ದರು.

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು
‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು
TV9 Web
| Edited By: |

Updated on:Aug 20, 2021 | 3:59 PM

Share

ಬಿಗ್​ ಬಾಸ್​ ಸ್ಪರ್ಧಿ, ನಟಿ ವನಿತಾ ವಿಜಯ್​ಕುಮಾರ್​ ಅವರು ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿ ಆಗುತ್ತಿರುತ್ತಾರೆ. ಈಗಾಗಲೇ ಅವರು ಮೂರು ಮದುವೆ ಆಗಿದ್ದು, ಮೂರೂ ಸಂಬಂಧಗಳು ಮುರಿದು ಬಿದ್ದಿವೆ. ಹೀಗಿರುವಾಗಲೇ ಅವರು ನಾಲ್ಕನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣವಾಗಿದ್ದು ಒಂದು ಫೋಟೋ. ಶೂಟಿಂಗ್​ನಲ್ಲಿ ಬರುವ ಮದುವೆ ದೃಶ್ಯದ ಫೋಟೋ ಇಟ್ಟುಕೊಂಡು ವನಿತಾ ನಾಲ್ಕನೇ ಮದುವೆ ಆಗಿದ್ದಾರೆ ಎಂದು ಅನೇಕರು ಬಿಂಬಿಸಿದ್ದರು. ಇದಕ್ಕೆ ಅವರು ಈಗ ತಿರುಗೇಟು ನೀಡಿದ್ದಾರೆ.

ವನಿತಾ ವಿಜಯ್​ಕುಮಾರ್​ 2007ರಲ್ಲಿ ಆಕಾಶ್​ ಹಾಗೂ 2010ರಲ್ಲಿ ಆನಂದ್​ ರಾಜ್​ ಜತೆ ವಿಚ್ಛೇದನ ಪಡೆದುಕೊಂಡಿದ್ದರು. ಕಳೆದ ವರ್ಷ ಜೂನ್​ 27ರಂದು ಪೀಟರ್​ ಪೌಲ್​ ಜತೆ ಅವರು ಮದುವೆ ಆಗಿದ್ದರು. ಪೀಟರ್​ ಪೌಲ್​ಗೆ ಆಗಲೇ ವಿವಾಹ ಆಗಿತ್ತು. ಪೀಟರ್​ ಮೊದಲನೇ ಪತ್ನಿ ಜಗಳ ತೆಗೆದಿದ್ದರು. ‘ನನಗೆ ವಿಚ್ಛೇದನ ನೀಡದೇ ನನ್ನ ಪತಿ ಎರಡನೇ ಮದುವೆ ಆಗಿದ್ದಾನೆ. ಹೀಗಾಗಿ, ಆತನ ಎರಡನೇ ಮದುವೆಗೆ ಕಾನೂನಿನಲ್ಲಿ ಮನ್ನಣೆ ಇಲ್ಲ’ ಎಂದು ಅವರ ಪತ್ನಿ ವಾದಿಸಿದ್ದರು. ಪೀಟರ್​ ಹೆಚ್ಚಾಗಿ ಕುಡಿಯುತ್ತಿದ್ದ. ಕೆಲ ಸಮಯ ಇದನ್ನು ವನಿತಾ ಸಹಿಸಿಕೊಂಡರು. ಕೊನೆಗೆ ಕಳೆದ ನವೆಂಬರ್​ ತಿಂಗಳಲ್ಲಿ ಇಬ್ಬರೂ ಬೇರೆ ಆದರು. ಈ ಮೂಲಕ ವನಿತಾ ಮೂರನೇ ಸಂಬಂಧವೂ ಮುರಿದು ಬಿದ್ದಿತ್ತು.

ಇತ್ತೀಚೆಗೆ ಹಾಸ್ಯ ನಟ ಶ್ರೀನಿವಾಸನ್​ ಜೊತೆ ವನಿತಾ ಹಾರ ಬದಲಾಯಿಸಿಕೊಳ್ಳುತ್ತಿರುವ ಫೋಟೋ ವೈರಲ್​ ಆಗಿತ್ತು. ಇದು ಅವರು ನಟಿಸಿರುವ ಹೊಸ ಸಿನಿಮಾದ ಫೋಟೋ ಎಂಬುದು ನಂತರದಲ್ಲಿ ಗೊತ್ತಾಗಿತ್ತು. ಸಂದರ್ಶನವೊಂದರಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಇದಕ್ಕೆ ವನಿತಾ ಖಾರವಾಗಿ ಉತ್ತರಿಸಿದ್ದಾರೆ. ‘ನಾನು ನಾಲ್ಕಲ್ಲ, ನಲವತ್ತು ಬಾರಿ ಮದುವೆ ಆಗುತ್ತೇನೆ’ ಎಂದಿದ್ದಾರೆ. ನಂತರ ‘ನಾನು ಸಿಟ್ಟಲ್ಲಿ ಆ ರೀತಿ ಹೇಳಿದ್ದೇನೆ ಅಷ್ಟೆ. ಆ ರೀತಿಯ ಆಲೋಚನೆ ಇಲ್ಲ’ ಎಂದು ಅವರು ನಕ್ಕಿದ್ದಾರೆ.

ವನಿತಾ ‘ಬಿಗ್​ ಬಾಸ್​ ಜೋಡಿಗಳ್’​ ಶೋನಲ್ಲಿ ಸ್ಪರ್ಧಿಯಾಗಿದ್ದರು. ಇದರ ಜತೆಗೆ ಅವರು ತಮ್ಮ ಟಿವಿ ಶೋ ಹಾಗೂ ಯೂಟ್ಯೂಬ್​ ಚಾನೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​

Published On - 3:55 pm, Fri, 20 August 21

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?