‘ನಮ್ಮ ಕಾಲದ ಈ 3 ಹೀರೋಯಿನ್ಸ್​ ನಂಗಿಷ್ಟ’: ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡ ಫಿಲ್ಮೀ ಮಾತುಗಳು

CM Basavaraj Bommai: ‘ಜೀ ಕನ್ನಡ’ ವಾಹಿನಿಯ ರಂಗುರಂಗಿನ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನಸಾರೆ ಮಾತನಾಡಿದರು. ಮಕ್ಕಳ ಜೊತೆ ಮಗುವಾಗಿ ಬೆರೆತು, ‘ನಾನು ಸಿಎಂ. ಅಂದರೆ ಕಾಮನ್​ ಮ್ಯಾನ್​’ ಎನ್ನುವ ಮೂಲಕ ಅವರು ಎಲ್ಲರ ಮನಗೆದ್ದರು.

‘ನಮ್ಮ ಕಾಲದ ಈ 3 ಹೀರೋಯಿನ್ಸ್​ ನಂಗಿಷ್ಟ’: ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡ ಫಿಲ್ಮೀ ಮಾತುಗಳು
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: ಮದನ್​ ಕುಮಾರ್​

Updated on: Aug 21, 2021 | 1:10 PM

ಎಲ್ಲ ವೇದಿಕೆಗಳಲ್ಲೂ ರಾಜಕಾರಣಿಗಳು ಗಂಭೀರ ವಿಚಾರಗಳನ್ನೇ ಮಾತನಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀ ಕನ್ನಡ ವಾಹಿನಿಯ ವೇದಿಕೆಯಲ್ಲಿ ತುಂಬ ಲವಲವಿಕೆಯಿಂದ ಮಕ್ಕಳ ಜೊತೆ ಮಾತನಾಡಿದರು. ಜೀ ಕನ್ನಡದ 15ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಅವರು ಅತಿಥಿಯಾಗಿ ಆಗಮಿಸಿದ್ದರು. ಆಗ ಅವರಿಗೆ ಮಕ್ಕಳು ಕೆಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅವರು ಎಲ್ಲರ ಮುಖದಲ್ಲೂ ನಗು ಮೂಡಿಸಿದರು. ಮಕ್ಕಳು ಕೇಳಿದ ಪ್ರಶ್ನೆಗಳೇನು? ಅದಕ್ಕೆ ಸಿಎಂ ಕಡೆಯಿಂದ ಬಂದ ಉತ್ತರಗಳೇನು ಎಂಬುದರ ಪೂರ್ತಿ ವಿವರ ಇಲ್ಲಿದೆ.

ಮಕ್ಕಳ ಪ್ರಶ್ನೆ 1: ಅಂಕಲ್​ ನಿಮ್ಮ ಅಮ್ಮ ಮಾಡುವ ಯಾವ ಅಡುಗೆ ನಿಮಗೆ ಹೆಚ್ಚು ಇಷ್ಟ?

ಸಿಎಂ ಉತ್ತರ: ನಮ್ಮ ತಾಯಿ ಬಿಸಿಬಿಸಿ ಜೋಳದ ರೊಟ್ಟಿ ಮಾಡುತ್ತಿದ್ದರು. ಅದು ನನಗೆ ಬಹಳ ಇಷ್ಟ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನಲು ಶುರುಮಾಡಿದರೆ ಲೆಕ್ಕವೇ ಇರುವುದಿಲ್ಲ. ಆದರೆ ಈಗ ನಮ್ಮ ತಾಯಿ ಇಲ್ಲ. ಈಗ ಯಾರೇ ಬಿಸಿ ರೊಟ್ಟಿ ಮಾಡಿದರೂ ನಮ್ಮ ತಾಯಿಯೇ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತೇನೆ.

ಮಕ್ಕಳ ಪ್ರಶ್ನೆ 2: ಅಂಕಲ್​ ನೀವು ಯಾವಾಗಲೂ ಬ್ಯುಸಿ ಇರ್ತೀರಿ ಅಲ್ವಾ? ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ಹೇಳಿಕೊಡುತ್ತೀರಾ?

ಸಿಎಂ ಉತ್ತರ: ನೋಡು ಮರಿ, ನನಗೆ ಮೊಮ್ಮಗಳು ಇಲ್ಲ. ಆದರೆ ನೀವೆಲ್ಲರೂ ನನ್ನ ಮೊಮ್ಮಕ್ಕಳಿದ್ದಂತೆ. ಹಾಗಾಗಿ ನೀವು ಆನ್​ಲೈನ್​ಗೆ ಬಂದಾಗ ನಾನು ನಿಮಗೆ ಸಿಗುತ್ತೇನೆ. ನಿಮ್ಮನ್ನೆಲ್ಲ ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನಿಸ್ತಾ ಇದೆ. ಇದನ್ನು ನನ್ನ ಮಗನಿಗೆ ಮನವರಿಕೆ ಮಾಡಿಸುತ್ತೇನೆ.

ಮಕ್ಕಳ ಪ್ರಶ್ನೆ 3: ನಾವು ತುಂಬ ಸಿನಿಮಾಗಳಲ್ಲಿ ನೋಡಿರುವ ಸಿಎಂ ಬೇರೆ ಬೇರೆ ಥರ ಇದ್ದರು. ನೀವೇನು ಸರ್​ ಇಷ್ಟು ಸಿಂಪಲ್​ ಆಗಿದ್ದೀರಲ್ಲಾ?

ಸಿಎಂ ಉತ್ತರ: ಅದು ಸಿನಿಮಾ ಕಣೋ. ಸಿನಿಮಾದಲ್ಲಿ ಆರ್ಭಟ ಇರಲೇಬೇಕು. ಹಾಗಿದ್ದಾಗಲೇ ಸಿನಿಮಾ ನೋಡೋಕೆ ಜನ ಬರೋದು. ಆದರೆ ನಿಜಜೀವನದಲ್ಲಿ ನಾವು ಆರ್ಭಟ ಮಾಡಿದರೆ ಜನರು ಕೇಳಲ್ಲ. ಹಾಗಾಗಿ ನಾವು ಇಲ್ಲಿ ಸಿಂಪಲ್​ ಆಗಿ ಇರಲೇಬೇಕು.

ಮಕ್ಕಳ ಪ್ರಶ್ನೆ 4: ನಿಮ್ಮ ಫೇವರಿಟ್​ ಹೀರೋಯಿನ್​ ಯಾರು?

ಸಿಎಂ ಉತ್ತರ: ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್​ಟೈಮ್​ ಫೇವರಿಟ್​ ಹೀರೋಯಿನ್​ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್​ 3 ಹೀರೋಯಿನ್​ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್​. ಡಾ. ರಾಜ್​ಕುಮಾರ್​ ಅವರು ನನ್ನ ಆಲ್​ಟೈಮ್ ಫೇವರಿಟ್​ ಹೀರೋ.

ಮಕ್ಕಳ ಪ್ರಶ್ನೆ 5: ನೀವು ಯಾವಾಗಲೂ ಮೆಲುಕು ಹಾಕುವ ನಿಮ್ಮ ಫೇವರಿಟ್​ ಹಾಡು ಯಾವುದು?

ಸಿಎಂ ಉತ್ತರ: ‘ಹುಟ್ಟಿದರೇ ಕನ್ನಡ ನಾಡಲ್​ ಹುಟ್ಟಬೇಕು..’ ಇದು ನನ್ನ ಫೇವರಿಟ್​. ಇನ್ನೊಂದು ಹೇಳಬೇಕೆಂದರೆ, ‘ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ..’ ಈ ಸಾಂಗ್​ ಕೂಡ ನನ್ನ ಫೇವರಿಟ್​.

ಇದನ್ನೂ ಓದಿ:

‘ಮಹಾನಾಯಕ ಡಾ. ಬಿ.ಆರ್​. ಅಂಬೇಡ್ಕರ್​’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು

‘ಮಹಾನಾಯಕ’ ವಿಚಾರದಲ್ಲಿ ಜನರ ಒತ್ತಾಯಕ್ಕೆ ಮಣಿದು ದೊಡ್ಡ ನಿರ್ಧಾರ ತೆಗೆದುಕೊಂಡ ಜೀ ಕನ್ನಡ ವಾಹಿನಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ