ಇಂಡಿಯನ್ ಐಡಲ್ ನಂತರವೂ ಮುಂದುವರಿದ ಪ್ರೇಮ ಕಥೆ? ಒಂದೇ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿಸಿದ ಪವನ್ದೀಪ್-ಅರುಣಿತಾ
ಅರುಣಿತಾ ಹಾಗೂ ಪವನ್ದೀಪ್ ಒಂದೇ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿ ಮಾಡಿದ್ದಾರೆ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ನೆರೆಹೊರೆಯವರಾಗಿದ್ದಾರೆ.
ಇಂಡಿಯನ್ ಐಡಲ್ 12ರ ವಿನ್ನರ್ ಪಟ್ಟವನ್ನು ಪವನ್ದೀಪ್ ರಾಜನ್ ಪಡೆದುಕೊಂಡಿದ್ದಾರೆ. ಅವರಿಗೆ ಆಕರ್ಷಕ ಟ್ರೋಫಿ ಜತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ. ಇದರ ಜತೆಗೆ ಅವರಿಗೆ ಅಪಾರ ಖ್ಯಾತಿ ಸಿಕ್ಕಿದೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ಹಾಡೋಕೆ ಆಫರ್ ಕೂಡ ಬರುತ್ತಿವೆ. ಹೀಗಿರುವಾಗಲೇ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಪವನ್ದೀಪ್ ರಾಜನ್ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ವಾಹಿನಿಯವರು ಬಿಂಬಿಸಿದ್ದರು. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಟಿಆರ್ಪಿಗೋಸ್ಕರ ಈ ರೀತಿ ಮಾಡಲಾಗುತ್ತಿದೆ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು. ಇನ್ನೂ ಕೆಲವರು ಪವನ್ದೀಪ್ ಹಾಗೂ ಅರುಣಿತಾ ನಡುವೆ ಇರೋದು ಕೇವಲ ಫ್ರೆಂಡ್ಶಿಪ್ ಎಂದು ಸಬೂಬು ನೀಡಿದ್ದರು. ಆದರೆ, ಇವರ ನಡುವೆ ಪ್ರೀತಿ ಮೊಳೆತಿದ್ದು, ಅದು ಮುಂದುವರಿಯುತ್ತಿದೆಯೇ ಎನ್ನುವ ಅನುಮಾನ ಕಾಡಿದೆ.
ಅರುಣಿತಾ ಹಾಗೂ ಪವನ್ದೀಪ್ ಒಂದೇ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಖರೀದಿ ಮಾಡಿದ್ದಾರೆ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇಬ್ಬರೂ ನೆರೆಹೊರೆಯವರಾಗಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಕುತೂಹಲಗೊಂಡಿದ್ದಾರೆ. ಅಲ್ಲದೆ, ಈ ನಿರ್ಧಾರ ನೋಡಿ, ಪವನ್ದೀಪ್ ಹಾಗೂ ಅರುಣಿತಾ ನಡುವೆ ನಿಜವಾದ ಪ್ರೀತಿ ಹುಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.
ಇನ್ನು, ಪವನ್ದೀಪ್, ಅರುಣಿತಾ ಹಾಗೂ ಇಂಡಿಯನ್ ಐಡಲ್ 12ರ ಎರಡನೇ ರನ್ನರ್ ಅಪ್ ಶಣ್ಮುಖ್ ಪ್ರಿಯ ಅವರು ಒಟ್ಟಾಗಿ ಆಲ್ಬಮ್ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ ಸುರಾನಿ ಅವರು ಈ ಆಲ್ಬಮ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಪವನ್ದೀಪ್ ಅವರು ಇಂಡಿಯನ್ ಐಡಲ್ 12ರಲ್ಲಿ ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್ಗಳ ಗಮನ ಸೆಳೆದಿದ್ದರು ಪವನ್ದೀಪ್. ಗಿಟಾರ್ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್ದೀಪ್ಗೆ ಕರಗತವಾಗಿದೆ.ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್ಗಳಿಗೆ ಇಷ್ಟವಾಗಿದ್ದರು. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ. ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್ ಬ್ಯಾಂಡ್ ಹೊಂದಿದ್ದಾರೆ ಪವನ್ದೀಪ್. ಕುಮಾನ್ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Pawandeep Rajan: ‘ಇಂಡಿಯನ್ ಐಡಲ್ 12’ ವಿನ್ನರ್ ಪವನ್ದೀಪ್ ರಾಜನ್ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ