AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೀತಿಸಿದ ಬಳಿಕ ಮೋಸ ಮಾಡ್ಬೇಡಿ ಪ್ಲೀಸ್​’; ಕಣ್ಣೀರು ಹಾಕುತ್ತ ನೋವಿನ ಘಟನೆ ಹೇಳಿಕೊಂಡ ನಿರಂಜನ್​

‘ಆಕೆ ನನಗಿಂತ ಹೆಚ್ಚು ನಗುತ್ತಾಳೆ, ನಗಿಸುತ್ತಾಳೆ. ಅಂಥವಳನ್ನು ಆ ಸ್ಥಿತಿಯಲ್ಲಿ ನೋಡೋಕೆ ನನಗೆ ಆಗಲಿಲ್ಲ. ಕಷ್ಟ ಆಗುತ್ತದೆ’ ಎನ್ನುತ್ತಲೇ ನಿರಂಜನ್​ ಅವರು ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

‘ಪ್ರೀತಿಸಿದ ಬಳಿಕ ಮೋಸ ಮಾಡ್ಬೇಡಿ ಪ್ಲೀಸ್​’; ಕಣ್ಣೀರು ಹಾಕುತ್ತ ನೋವಿನ ಘಟನೆ ಹೇಳಿಕೊಂಡ ನಿರಂಜನ್​
‘ಪ್ರೀತಿಸಿದ ಬಳಿಕ ಮೋಸ ಮಾಡ್ಬೇಡಿ ಪ್ಲೀಸ್​’; ಕಣ್ಣೀರು ಹಾಕುತ್ತ ನೋವಿನ ಘಟನೆ ಹೇಳಿಕೊಂಡ ನಿರಂಜನ್​
TV9 Web
| Updated By: ಮದನ್​ ಕುಮಾರ್​|

Updated on: Aug 22, 2021 | 8:40 PM

Share

ಸೆಲೆಬ್ರಿಟಿಗಳ ಬದುಕು ಎಂದರೆ ತುಂಬ ಮಜವಾಗಿರುತ್ತದೆ ಎಂಬುದು ಜನರ ಕಲ್ಪನೆ. ಆದರೆ ಅವರಿಗೂ ಕೂಡ ಜನಸಾಮಾನ್ಯರ ರೀತಿಯೇ ಅನೇಕ ಕಷ್ಟಗಳು ಇರುತ್ತವೆ. ಅದನ್ನು ಹೇಳಿಕೊಳ್ಳದೇ, ಪ್ರೇಕ್ಷಕರ ಎದುರು ನಗುನಗುತ್ತ ಬಾಳಬೇಕಾದ ಅನಿವಾರ್ಯತೆ ಕಲಾವಿದರದ್ದು. ಕೆಲವೊಮ್ಮೆ ಹೇಳಿಕೊಳ್ಳಲೇಬೇಕಾದ ಸಂದರ್ಭ ಎದುರಾಗುತ್ತವೆ. ನಟ, ನಿರೂಪಕ ನಿರಂಜನ್​ ದೇಶಪಾಂಡೆ (Niranjan Deshpande) ಅವರಿಗೆ ಬಿಗ್​ ಬಾಸ್​ (Bigg Boss) ಮನೆಯಲ್ಲಿ ಆ ರೀತಿಯ ಒಂದು ಸಂದರ್ಭ ಒದಗಿಬಂದಿದೆ. ತಮ್ಮ ಸಹೋದರಿಯ ಬದುಕಿನಲ್ಲಿ ಆದ ಒಂದು ಕಹಿ ಘಟನೆಯನ್ನು ಅವರು ವಿವರಿಸಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಮುಗಿದ ಬಳಿಕ ‘ಬಿಗ್​ ಬಾಸ್​ ಮಿನಿ ಸೀಸನ್’ ಆರಂಭ ಆಯಿತು. ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಮತ್ತು ನಿರೂಪಕರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಟಾಸ್ಕ್​ಗಳ ಜೊತೆಗೆ ಅನೇಕ ವಿಚಾರಗಳನ್ನು ಶೇರ್​ ಮಾಡಿಕೊಳ್ಳುತ್ತ ಅವರೆಲ್ಲ ಕಾಲ ಕಳೆಯುತ್ತಿದ್ದಾರೆ. ನಿರಂಜನ್​ ಕೂಡ ಲವಲವಿಕೆಯಿಂದಲೇ ಭಾಗವಹಿಸುತ್ತಿದ್ದಾರೆ. ಎಲ್ಲರನ್ನೂ ನಗಿಸುವುದು ನಿರಂಜನ್​ ಸ್ವಭಾವ. ​ಆದರೆ ಇತ್ತೀಚೆಗಿನ ಎಪಿಸೋಡ್​ನಲ್ಲಿ ಅವರು ಕಣ್ಣೀರು ಹಾಕಿದ್ದಾರೆ.

ಆ.22ರಂದು ರಕ್ಷಾ ಬಂಧನ ಹಬ್ಬ. ಆ ಪ್ರಯುಕ್ತ ಬಿಗ್​ ಬಾಸ್​ ಮನೆಯಲ್ಲಿ ಸಹೋದರಿಯರ ಬಗ್ಗೆ ಮಾತನಾಡಲಾಯಿತು. ನಿರಂಜನ್​ ಕೂಡ ತಮ್ಮ ತಂಗಿಯ ಬಗ್ಗೆ ಹೇಳಿಕೊಂಡರು. ‘ಆಕೆ ಒಡಹುಟ್ಟಿದ ತಂಗಿ. ಲೆಕ್ಕ ಪ್ರಕಾರ ಅವಳು ನನಗೆ ಅಕ್ಕ. ನಾವಿಬ್ಬರು ಅವಳಿ-ಜವಳಿ. ಅವಳು ನನಗಿಂತ 13 ನಿಮಿಷ ದೊಡ್ಡವಳು. ಗಂಡ-ಹೆಂಡತಿ ಕೂಡ ಅಷ್ಟು ಕ್ಲೋಸ್​ ಆಗಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಎಲ್ಲಿ ಹೋದರೂ ಜೊತೆಯಾಗಿ ಹೋಗುತ್ತಿದ್ವಿ. ನಂತರ ಮದುವೆ ಎಂಬ ಘಟ್ಟ ಬಂತು. ಅವಳ ಮದುವೆ ಬಗ್ಗೆ ನಾನು ದೊಡ್ಡ ಕನಸು ಕಂಡಿದ್ದೆ’ ಎಂದು ನಿರಂಜನ್​ ಮಾತು ಆರಂಭಿಸಿದರು.

‘ಅವಳ ಹಳೇ ರಿಲೇಷನ್​ಶಿಪ್​ನ ಕಾರಣದಿಂದಲೋ ಏನೋ ಅವಳಿಗೆ ಮದುವೆ ಬಗ್ಗೆ ನಂಬಿಕೆಯೇ ಹೊರಟುಹೋಗಿತ್ತು. ಜೀವನದಲ್ಲಿ ಅವಳ ಮದುವೆಯೇ ನನಗೆ ಸವಾಲಾಗಿ ಉಳಿದುಕೊಂಡಿತು. ಮನೆಯ ಹೆಣ್ಣುಮಗಳಿಗೆ ಒಂದು ಮದುವೆ ಮಾಡೋಕೆ ಆಗಲ್ವಾ ಎಂಬ ಮಾತು ಹೋದಲ್ಲೆಲ್ಲ ಬರುತ್ತದೆ’ ಎಂದು ನಿರಂಜನ್​ ಕಣ್ಣೀರು ಹಾಕಿದ್ದಾರೆ.

‘ದಯವಿಟ್ಟು ನಾನು ಎಲ್ಲ ಗಂಡಸರಿಗೆ ಕೇಳಿಕೊಳ್ಳುತ್ತೇನೆ. ದಯವಿಟ್ಟು ಯಾವ ಹೆಣ್ಣಿಗೂ ಮೋಸ ಮಾಡಬೇಡಿ. ನಿಮ್ಮ ಮನೆಯಲ್ಲೂ ಒಬ್ಬಳು ಹೆಣ್ಣು ಇರುತ್ತಾಳೆ ಎಂಬುದನ್ನು ನೆನಪಿನಲ್ಲಿಡಿ. ಎಲ್ಲ ಹುಡುಗಿಯರಿಗೂ ಅದನ್ನೇ ಕೇಳಿಕೊಳ್ಳುತ್ತೇನೆ. ಯಾವ ಹುಡುಗರ ಲೈಫ್​ನಲ್ಲೂ ಆಟ ಆಡಬೇಡಿ. ನೀವು ಆಟ ಆಡುವುದು ಬರೀ ಅವರ ಜೊತೆ ಅಲ್ಲ. ಅವರ ಇಡೀ ಕುಟುಂಬದ ಜೊತೆ’ ಎಂದು ನಿರಂಜನ್​ ಭಾವುಕರಾಗಿದ್ದಾರೆ.

‘ಆಕೆ ನನಗಿಂತ ಹೆಚ್ಚು ನಗುತ್ತಾಳೆ, ನಗಿಸುತ್ತಾಳೆ. ಅಂಥವಳನ್ನು ಆ ಸ್ಥಿತಿಯಲ್ಲಿ ನೋಡೋಕೆ ನನಗೆ ಆಗಲಿಲ್ಲ. ಕಷ್ಟ ಆಗುತ್ತದೆ’ ಎನ್ನುತ್ತಲೇ ನಿರಂಜನ್​ ಅವರು ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ:

‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ