AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawandeep Rajan: ‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ

Indian Idol 12 Winner: ‘ಇಂಡಿಯನ್​ ಐಡಲ್​ 12’ ವಿನ್ನರ್​ ಆಗಿರುವ ಪವನ್​ದೀಪ್​ ರಾಜನ್​ ಅವರಿಗೆ 12 ಲಕ್ಷ ರೂ. ಬಹುಮಾನ ಸಿಕ್ಕಿದೆ. ಮೊದಲ ಮತ್ತು ಎರಡನೇ ರನ್ನರ್​ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು.

Pawandeep Rajan: ‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​ಗೆ ಸಿಕ್ತು ಟ್ರೋಫಿ, ಕಾರು, 12 ಲಕ್ಷ ರೂ. ಬಹುಮಾನ
‘ಇಂಡಿಯನ್​ ಐಡಲ್​ 12’ ವಿನ್ನರ್​ ಪವನ್​ದೀಪ್​ ರಾಜನ್​
TV9 Web
| Edited By: |

Updated on: Aug 16, 2021 | 8:06 AM

Share

ವಿವಾದಗಳ ನಡುವೆಯೂ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದ ಇಂಡಿಯನ್​ ಐಡಲ್​ (Indian Idol 12) ಸಿಂಗಿಂಗ್​ ರಿಯಾಲಿಟಿ ಶೋ 12ನೇ ಸೀಸನ್​ ಅಂತ್ಯವಾಗಿದೆ. ಈ ಸೀಸನ್​ನ ವಿನ್ನರ್​ ಆಗಿ ಪವನ್​ದೀಪ್​ ರಾಜನ್​  (Pawandeep Rajan) ಹೊರಹೊಮ್ಮಿದ್ದಾರೆ. ಬರೋಬ್ಬರಿ 9 ತಿಂಗಳ ಕಾಲ ಪ್ರಸಾರವಾದ ಈ ರಿಯಾಲಿಟಿ ಶೋಗೆ ಆ.15ರಂದು ಫಿನಾಲೆ ನಡೆಯಿತು. ಆರು ಗಾಯಕರು ಫಿನಾಲೆ ಪ್ರವೇಶಿಸಿದ್ದರು. ಅಂತಿಮವಾಗಿ ಉತ್ತರಾಖಂಡ್​ ಮೂಲದ ಪವನ್​ದೀಪ್​ ರಾಜನ್​ ಅವರು ಜಯಶಾಲಿ ಆದರು. ಅರುಣಿತಾ ಕಂಜಿಲಾಲ್ (Arunita Kanjilal) ಹಾಗೂ ಸಾಯಿಲಿ ಕಾಂಬಳೆ (Sayli Kamble) ಅವರು ಅನುಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು.

ಇಂಡಿಯನ್​ ಐಡಲ್​ 12ರ ವಿನ್ನರ್​ ಪಟ್ಟ ಪಡೆದ ಪವನ್​ದೀಪ್​ ಅವರಿಗೆ ಆಕರ್ಷಕ ಟ್ರೋಫಿ ಜೊತೆಗೆ ಬಹುಮಾನವಾಗಿ 12 ಲಕ್ಷ ರೂ. ಮತ್ತು ಒಂದು ಕಾರು ನೀಡಲಾಗಿದೆ. ಟ್ರೋಫಿ ಮತ್ತು ಚೆಕ್​ ಜೊತೆಗೆ ಅವರು ನಿಂತು ಪೋಸ್​ ನೀಡಿರುವ ಫೋಟೋ ವೈರಲ್​ ಆಗಿದ್ದು, ಎಲ್ಲರಿಂದಲೂ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.

‘ಇಂಡಿಯಲ್​ ಐಡಲ್​ ವೇದಿಕೆಯಲ್ಲಿ ಗಾಯಕರಿಗೆ ತುಂಬ ಗೌರವ ಸಿಗುತ್ತದೆ. ಇಲ್ಲಿ ಸಿಗುವಂತಹ ಅವಕಾಶಗಳಿಗೆ ಹೋಲಿಕೆಯೇ ಇಲ್ಲ. ಹಲವು ಗೀತೆಗಳನ್ನು ಹಾಡುವ ನಮಗೆ ಬೆಸ್ಟ್​ ನಿರ್ಣಾಯಕರು ಮತ್ತು ಅತಿಥಿಗಳಿಂದ ಸೂಕ್ತ ಮಾರ್ಗದರ್ಶನ ಸಿಕ್ಕಿತು. ಗೆಲುವಿಗಾಗಿ ನಾನು ಇಲ್ಲಿಗೆ ಬಂದವನಲ್ಲ. ಕಲಿಕೆಯ ಹಂಬಲದಿಂದ ಈ ಶೋನಲ್ಲಿ ಭಾಗವಹಿಸಿದ್ದೆ’ ಎಂದು ಪವನ್​ದೀಪ್​ ರಾಜನ್​ ಹೇಳಿದ್ದಾರೆ.

ಮೊದಲ ಮತ್ತು ಎರಡನೇ ರನ್ನರ್​ ಅಪ್ ಆದ ಅರುಣಿತಾ ಕಂಜಿಲಾಲ್ ಹಾಗೂ ಸಾಯಿಲಿ ಕಾಂಬಳೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಕಿಯಾರಾ ಅಡ್ವಾಣಿ, ಸಿದ್ಧಾರ್ಥ್​ ಮಲ್ಹೋತ್ರಾ ಮುಂತಾದವರು ಫಿನಾಲೆಗೆ ಅತಿಥಿಗಳಾಗಿ ಆಗಮಿಸಿದ್ದರು. ಹಿಮೇಶ್​ ರೇಷಮ್ಮಿಯಾ, ಸೋನು ಕಕ್ಕರ್​, ವಿಶಾಲ್ ದದ್ಲಾನಿ, ಅನು ಮಲಿಕ್​ ಜಡ್ಜ್​ ಆಗಿದ್ದರು. ಆದಿತ್ಯ ನಾರಾಯಣ್​, ಭಾರತಿ ಸಿಂಗ್​, ಹರ್ಷಾ ಲಿಂಬಾಚಿಯಾ ಅವರು ಫಿನಾಲೆ ಸಂಚಿಕೆಯ ನಿರೂಪಣೆ ಮಾಡಿದರು.

ಪವನ್​ದೀಪ್​ ಅವರು ಮೊದಲ ದಿನದಿಂದಲೇ ಎಲ್ಲರ ಗಮನ ಸೆಳೆಯೋಕೆ ಯಶಸ್ವಿಯಾಗಿದ್ದರು. ಅದ್ಭುತ ಕಂಠದ ಮೂಲಕ ಜಡ್ಜ್​​ಗಳ ಗಮನ ಸೆಳೆದಿದ್ದರು ಪವನ್​​ದೀಪ್. ಗಿಟಾರ್​ ಅಥವಾ ಪಿಯಾನೋ ನುಡಿಸುತ್ತಲೇ ಹಾಡನ್ನು ಹಾಡುವ ಕಲೆ ಪವನ್​ದೀಪ್​ಗೆ ಕರಗತವಾಗಿದೆ. ಈ ಎಲ್ಲಾ ಕಾರಣಕ್ಕೆ ಅವರು ವೀಕ್ಷಕರಿಗೆ ಹಾಗೂ ಜಡ್ಜ್​ಗಳಿಗೆ ಇಷ್ಟವಾಗಿದ್ದಾರೆ. ಅಂತಿಮವಾಗಿ ಅವರು ಜಯಶಾಲಿಯಾಗಿದ್ದಾರೆ. ಚಂಡೀಗಢದಲ್ಲಿ ತಮ್ಮದೇ ಮ್ಯೂಸಿಕ್​ ಬ್ಯಾಂಡ್​ ಹೊಂದಿದ್ದಾರೆ ಪವನ್​ದೀಪ್​. ಕುಮಾನ್​ ವಿಶ್ವವಿದ್ಯಾಲಯದಲ್ಲಿ ಅವರು ಸಂಗೀತ ಪದವಿ ಪಡೆದಿದ್ದಾರೆ.

ಇದನ್ನೂ ಓದಿ:

‘ಇದು ಮೋಸದ ಎಲಿಮಿನೇಷನ್​’; ಇಂಡಿಯನ್​ ಐಡಲ್​ ಶೋ ಮೇಲೆ ಪ್ರೇಕ್ಷಕರ ಸಿಟ್ಟಿಗೆ ಇಲ್ಲಿದೆ ಕಾರಣ

ಕೆಟ್ಟ ಗಾಯನ ಕೇಳಿ ಇಂಡಿಯನ್​ ಐಡಲ್​ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್​

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ