AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಕೆರಿಯರ್​ನಲ್ಲೇ ಅತ್ಯಂತ ದುಬಾರಿ ಸ್ಪೆಲ್ ಎಸೆದ ಜಸ್​ಪ್ರೀತ್ ಬುಮ್ರಾ

Jasprit Bumrah: ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಈವರೆಗೆ 87 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ 107. ಇದಾಗ್ಯೂ ಅವರು ಒಮ್ಮೆಯೂ 5 ವಿಕೆಟ್​ಗಳ ಸಾಧನೆ ಮಾಡಿಲ್ಲ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಒಂದೇ ಒಂದು ಪಂದ್ಯದಲ್ಲಿ ಅವರು 4 ವಿಕೆಟ್​ಗಳ ಗೊಂಚಲನ್ನು ಸಹ ಪಡೆದಿಲ್ಲ.

ಝಾಹಿರ್ ಯೂಸುಫ್
|

Updated on: Feb 01, 2026 | 2:09 PM

Share
ಜಸ್​ಪ್ರೀತ್ ಬುಮ್ರಾ (Jasprit Bumrah) ಟಿ20 ಕೆರಿಯರ್ ಆರಂಭಿಸಿ ಬರೋಬ್ಬರಿ 13 ವರ್ಷಗಳಾಗಿವೆ. ಈ ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ಅತ್ಯಂತ ದುಬಾರಿ ಸ್ಪೆಲ್ ಎಸೆದಿದ್ದಾರೆ. ಅದು ಸಹ ಒಂದೇ ಒಂದು ವಿಕೆಟ್ ಕಬಳಿಸದೇ ಎಂಬುದೇ ಅಚ್ಚರಿ. 

1 / 5
ತಿರುವನಂತಪುರದ ಗ್ರೀನ್​ಫೀಲ್ಡ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಜಸ್​ಪ್ರೀತ್ ಬುಮ್ರಾ ನೀಡಿದ್ದು ಬರೋಬ್ಬರಿ 58 ರನ್​ಗಳು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

2 / 5
ಇದು ಜಸ್​ಪ್ರೀತ್ ಬುಮ್ರಾ ಅವರ ಕೆರಿಯರ್​ನಲ್ಲೇ ಅತ್ಯಂತ ದುಬಾರಿ ಸ್ಪೆಲ್. ಅಂದರೆ 4 ಓವರ್​ಗಳಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ಒಂದೇ ಒಂದು ವಿಕೆಟ್ ಪಡೆಯದೇ 50 ಕ್ಕಿಂತ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದಾರೆ. ಇದಕ್ಕೂ ಮುನ್ನ 2022 ರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 4 ಓವರ್​ಗಳಲ್ಲಿ 50 ರನ್ ಚಚ್ಚಿಸಿಕೊಂಡಿದ್ದರು.

3 / 5
ಹಾಗೆಯೇ 2021 ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಸ್​ಪ್ರೀತ್ ಬುಮ್ರಾ 4 ಓವರ್​ಗಳಲ್ಲಿ 56  ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇದು ಬುಮ್ರಾ ಟಿ20 ಕೆರಿಯರ್​ನಲ್ಲೇ ಅವರ ಅತ್ಯಂತ ದುಬಾರಿ ಸ್ಪೆಲ್ ಆಗಿತ್ತು. ಇದಾದ ಬಳಿಕ ಒಮ್ಮೆಯೂ ಅವರು ಐಪಿಎಲ್​ನಲ್ಲಿ 50 ಕ್ಕಿಂತ ಹೆಚ್ಚು ರನ್ ನೀಡಿರಲಿಲ್ಲ.

4 / 5
ಆದರೆ ಇದೀಗ ಅಂತಾರಾಷ್ಟ್ರೀಯ ಪಂದ್ಯದಲ್ಲೇ 58 ರನ್ ಚಚ್ಚಿಸಿಕೊಂಡಿದ್ದಾರೆ. ಈ ಮೂಲಕ 13 ವರ್ಷಗಳ ಕೆರಿಯರ್​ನಲ್ಲೇ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಜಸ್​ಪ್ರೀತ್ ಬುಮ್ರಾ ಅವರ ಈ ಕಳಪೆ ಪ್ರದರ್ಶನ ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!

ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ

RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್

ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು

ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ

ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ

ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್

ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು

ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್