AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 2ರ ದಿನಭವಿಷ್ಯ

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 2ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 2ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Feb 02, 2026 | 12:20 AM

Share

ಈ ದಿನ ಮನೆಯಿಂದ ಹೊರಡುವ ಮುನ್ನ ಶಿವಾಷ್ಟಕವನ್ನು ಕೇಳಿಸಿಕೊಳ್ಳಿ. ಅದಕ್ಕೆ ಮುಂಚೆ ಈಶ್ವರನ ಪಟದ ಮುಂದೆ ದೀಪವನ್ನು ಹಚ್ಚಿಟ್ಟು, ಇದನ್ನು ಕೇಳಿಸಿಕೊಳ್ಳಿ. ಇನ್ನು ಮನೆಯಿಂದ ಹೊರಡುವ ವೇಳೆಗೆ ಹಸಿ ಹಾಲಿಗೆ (ಬಿಸಿ ಮಾಡಿರಬಾರದು) ಸ್ವಲ್ಪ ಸಕ್ಕರೆ ಮತ್ತು ಅರಿಶಿನ ಹಾಕಿಕೊಂಡು, ಕುಡಿದು ಆ ನಂತರ ಹೊರಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ ಭಾವನೆ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರು ಬಾಡಿಗೆ ಆದಾಯದಂಥದ್ದನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ನಿರೀಕ್ಷೆಯಂತೆ ಇರುವ ಆಸ್ತಿಗಳು ಖರೀದಿಗೆ ದೊರೆಯಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಖರ್ಚಿನ ರೀತಿಯಲ್ಲಿ ಬಹಳ ದೊಡ್ಡ ಬದಲಾವಣೆ ಅಳವಡಿಸಿಕೊಳ್ಳಲು ಈ ದಿನ ತೀರ್ಮಾನ ಮಾಡಲಿದ್ದೀರಿ. ಸೈಟು ಖರೀದಿಯೋ ಅಥವಾ ಮನೆ ನಿರ್ಮಾಣವೋ ಅಥವಾ ಈಗಾಗಲೇ ಇರುವ ಮನೆ ರೆನೊವೇಷನ್ ಮಾಡಿಸಬೇಕೋ ಇಂಥ ವಿಚಾರದ ಬಗ್ಗೆ ತಂದೆಯ ಜೊತೆ ಅಥವಾ ಪಿತೃ ಸಮಾನರಾದವರ ಜೊತೆಗೆ ಚರ್ಚೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಉದ್ಯೋಗಸ್ಥರಾಗಿದ್ದಲ್ಲಿ ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೆಲಸದಿಂದ ತೆಗೆಯಲಿದ್ದಾರೆ ಅಂತಲೋ ನೀವು ಹೂಡಿಕೆ ಮಾಡಿದ್ದ ರಿಯಲ್ ಎಸ್ಟೇಟ್ ಅಥವಾ ಷೇರು ಮಾರ್ಕೆಟ್ ಹಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಬಹುದು ಅಂತಲೋ ಹೀಗೆ- ಇಂಥವೇ ಮಾತುಗಳು ಕಿವಿ ಮೇಲೆ ಬೀಳುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ.

ಲೇಖನ- ಸ್ವಾತಿ ಎನ್.ಕೆ.

Follow Us