AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್​ನೋಟ್ ಬರೆದಿಟ್ಟು ಸಾವು

ex TMC MLA Ashish Banerjee found dead inside party office: ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದ ಮತ್ತು ಐದು ಬಾರಿ ಶಾಸಕರಾಗಿದ್ದ ಆಶಿಶ್ ಬ್ಯಾನರ್ಜಿ ಅವರು ಟಿಎಂಸಿ ಕಚೇರಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಿರ್ಭೂಮ್ ಜಿಲ್ಲೆಯ ರಾಂಪುರ್​ಹತ್​ನಲ್ಲಿ ಅವರ ಮನೆಯ ಪಕ್ಕದಲ್ಲೇ ಇದ್ದ ಪಕ್ಷದ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಅವರದ್ದೆಂದು ಹೇಳಲಾದ ಡೆತ್​ನೋಟ್ ಆ ಕಚೇರಿಯಲ್ಲಿ ಸಿಕ್ಕಿದೆ.

‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್​ನೋಟ್ ಬರೆದಿಟ್ಟು ಸಾವು
ರಾಮಪುರಹತ್ ಮೆಡಿಕಲ್ ಕಾಲೇಜಿನಲ್ಲಿ ಆಶಿಶ್ ಬ್ಯಾನರ್ಜಿ ಬೆಂಬಲಿಗರು...Image Credit source: X user @ani
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2026 | 1:30 PM

Share

ಕೋಲ್ಕತಾ, ಆಗಸ್ಟ್ 16: ಪಶ್ಚಿಮ ಬಂಗಾಳ ರಾಜ್ಯದ ಮಾಜಿ ಉಪಸಭಾಪತಿ ಮತ್ತು ಹಿರಿಯ ಟಿಎಂಸಿ (TMC) ನಾಯಕ ಆಶಿಶ್ ಬ್ಯಾನರ್ಜಿ (Ashish Banerjee) ಅವರು ಇಂದು ಭಾನುವಾರ ಬೆಳಿಗ್ಗೆ (ಆಗಸ್ಟ್ 16) ಬಿರ್ಭೂಮ್ ಜಿಲ್ಲೆಯ ರಾಂಪುರಹತ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಮೃತಪಟ್ಟಿರುವ ಟಿಎಂಸಿ ಕಚೇರಿಯು ಅವರ ಮನೆಯ ಪಕ್ಕದಲ್ಲೇ ಇದೆ.

ನಾನು ಭ್ರಷ್ಟ ಅಲ್ಲ; ಡೆತ್​ನೋಟ್​ನಲ್ಲಿ ಏನಿದೆ?

ಘಟನಾ ಸ್ಥಳದಲ್ಲಿ ಒಂದು ಪತ್ರ ಪತ್ತೆಯಾಗಿದ್ದು, ಅದರಲ್ಲಿ ಅವರು “ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ” ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ತಮ್ಮ ರಾಜಕೀಯ ಜೀವನದಲ್ಲಿ ತಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪ್ರವೇಶಿಸಿದ್ದೇ ಒಂದು ತಪ್ಪು ಎಂದು ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮನ್ನು ಅವಮಾನಿಸಲು ಮತ್ತು ತೇಜೋವಧೆ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಆಶಿಶ್ ಬ್ಯಾನರ್ಜಿ ರಾಜಕೀಯ ಹಿನ್ನೆಲೆ

ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದ ಆಶಿಶ್ ಬ್ಯಾನರ್ಜಿ ಅವರು ರಾಂಪುರಹತ್ ಕ್ಷೇತ್ರದಿಂದ ಸತತ ಐದು ಬಾರಿ (2001 ರಿಂದ 2026ರವರೆಗೆ) ಶಾಸಕರಾಗಿ ಆಯ್ಕೆಯಾಗಿದ್ದರು. 25 ವರ್ಷ ಕಾಲ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು, ಮಮತಾ ಬ್ಯಾನರ್ಜಿ ಅವರ ಸರ್ಕಾರದಲ್ಲಿ ಸಚಿವರಾಗಿ ಮತ್ತು ಉಪಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆಯನ್ನು ಬಹಿರಂಗಪಡಿಸಿದ ಅಜಿತ್ ದೋವಲ್

2026ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಧ್ರುವ ಸಾಹಾ ವಿರುದ್ಧ ಸೋತಿದ್ದರು. ಸೋಲಿನ ನಂತರ ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ. ಜೂನ್ ತಿಂಗಳಲ್ಲಿ ಅವರು ಟಿಎಂಸಿಯ ಬಿರ್ಭೂಮ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us