AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?

Bollywood on Attack: ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ ಎದರಿಸಿದ್ದಾರೆ. ಕೆಲವು ನಟ-ನಟಿಯರು ಈ ಪಾತಕಿಗಳೊಟ್ಟಿಗೆ ಆತ್ಮೀಯ ಬಂಧವನ್ನೂ ಇರಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡಿದ್ದಿದೆ. ಕೆಲವರು ಈ ಪಾತಕಿಗಳ ಮನೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದೂ ಸಹ ಇದೆ. ಕೆಲವು ಸೆಲೆಬ್ರಿಟಿಗಳ ಕೊಲೆಯನ್ನೂ ಸಹ ಭೂಗತ ಪಾತಕಿಗಳು ಮಾಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಬಾಲಿವುಡ್​​ಗೆ ಭೂಗತ ಪಾತಕಿಗಳ ಕಾಟ ತುಸು ತಪ್ಪಿತ್ತು. ಆದರೆ ಈಗ ಮತ್ತೆ ಶುರುವಾಗಿದೆ.

ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ?
Bollywood
ಮಂಜುನಾಥ ಸಿ.
|

Updated on: Feb 01, 2026 | 9:52 PM

Share

ಬಾಲಿವುಡ್ (Bollywood) ಮತ್ತು ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ದಾವೂದ್ ಇಬ್ರಾಹಿಂಗಿಂತಲೂ ಮುಂಚಿನಿಂದಲೂ ಭೂತದ ಪಾತಕಿಗಳು ಬಾಲಿವುಡ್​​ ಜೊತೆಗೆ ಸಕ್ರಿಯ ನಂಟು ಹೊಂದಿದ್ದಾರೆ. ಬಾಲಿವುಡ್​​ನಲ್ಲಿರುವ ರಾಶಿ-ರಾಶಿ ಹಣ ಭೂಗತ ಜಗತ್ತನ್ನು ಅದರತ್ತ ಸೆಳೆದಿದೆ. ದಾವೂದ್ ಕಾಲದಿಂದಲೂ ಸಿನಿಮಾಗಳ ನಿರ್ಮಾಣ, ನಟ-ನಟಿಯರ ಆಯ್ಕೆ, ಹಫ್ತಾ ವಸೂಲಿ, ಲಾಭ ಹಂಚಿಕೆ, ಸಿನಿಮಾ ಫೈನ್ಯಾನ್ಸ್ ಇನ್ನೂ ಹಲವು ವಿಷಯಗಳಲ್ಲಿ ಭೂಗತ ಲೋಕದವರು ಬಾಲಿವುಡ್​​ ಮೇಲೆ ಪ್ರಭಾವ ಬೀರುತ್ತಲೇ ಬರುತ್ತಿದ್ದಾರೆ.

ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ ಎದರಿಸಿದ್ದಾರೆ. ಕೆಲವು ನಟ-ನಟಿಯರು ಈ ಪಾತಕಿಗಳೊಟ್ಟಿಗೆ ಆತ್ಮೀಯ ಬಂಧವನ್ನೂ ಇರಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡಿದ್ದಿದೆ. ಕೆಲವರು ಈ ಪಾತಕಿಗಳ ಮನೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಿದ್ದೂ ಸಹ ಇದೆ. ಕೆಲವು ಸೆಲೆಬ್ರಿಟಿಗಳ ಕೊಲೆಯನ್ನೂ ಸಹ ಭೂಗತ ಪಾತಕಿಗಳು ಮಾಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಬಾಲಿವುಡ್​​ಗೆ ಭೂಗತ ಪಾತಕಿಗಳ ಕಾಟ ತುಸು ತಪ್ಪಿತ್ತು. ಆದರೆ ಈಗ ಮತ್ತೆ ಶುರುವಾಗಿದೆ.

ಕಳೆದ ಕೆಲವಾರು ವರ್ಷಗಳಿಂದ ಬಾಲಿವುಡ್​ ಮೇಲೆ ಮತ್ತೆ ಭೂಗತ ಪಾತಕಿಗಳ ಕಣ್ಣು ಬಿದ್ದಿದೆ. ಸಲ್ಮಾನ್ ಖಾನ್ ಮನೆ ಮೇಲೆ ಹಲವು ಬಾರಿ ದಾಳಿ ಮಾಡಲಾಯ್ತು. ಈ ಸಂಬಂಧ ಕೆಲವರ ಬಂಧನವೂ ಆಯ್ತು. ಖ್ಯಾತ ಕಮಿಡಿಯನ್ ಕಪಿಲ್ ಶರ್ಮಾಗೆ ಸೇರಿದ ರೆಸ್ಟೊರೆಂಟ್ ಮೇಲೆ ಸತತ ದಾಳಿಗಳು ನಡೆದಿವೆ. ನಿರ್ಮಾಪಕ, ರಾಜಕಾರಣಿ ಹಾಗೂ ಸಲ್ಮಾನ್, ಶಾರುಖ್ ಅವರಿಗೆ ಆಪ್ತವಾಗಿದ್ದ ಬಾಬಾ ಸಿದ್ಧಿಖಿಯನ್ನು ಕೊಲೆ ಮಾಡಲಾಯ್ತು. ಗಾಯಕ ಅರಿಜಿತ್ ಸಿಂಗ್​​ಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿದೆ. ಗಾಯಕ ಹನಿ ಸಿಂಗ್ ಅವರಿಗೂ ಕೊಲೆ ಬೆದರಿಕೆಗಳು ಬಂದಿವೆ. ಗಾಯಕ ದಿಲ್ಜೀತ್ ದೊಸ್ಸಾಂಜ್ ಅವರಿಗೂ ಬೆದರಿಕೆ ಬಂದಿವೆ.

ಇದನ್ನೂ ಓದಿ:ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಇಂದು ಬೆಳ್ಳಂಬೆಳಿಗ್ಗೆ ಖ್ಯಾತ ನಿರ್ದೇಶಕ, ನಿರ್ಮಾಪಕರೂ ಆಗಿರುವ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಲಾಗಿದೆ. ಕೆಲವರು ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆದರೆ ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಇವರಷ್ಟೆ ಅಲ್ಲದೆ, ಬಾಲಿವುಡ್​ನ ಇನ್ನೂ ಕೆಲವು ನಟ, ನಿರ್ಮಾಪಕರುಗಳಿಗೆ ಸಹ ಭೂಗತ ಪಾತಕಿಗಳ ಬೆದರಿಕೆಗಳು ಬಂದಿವೆ. ಒಟ್ಟಾರೆ ಮತ್ತೆ ಭೂಗತ ಜಗತ್ತು ಬಾಲಿವುಡ್​ ಮೇಲೆ ಕಣ್ಣು ಹಾಕಿದೆ. ಇದು ಬಾಲಿವುಡ್​ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ