ಸರ್ಜರಿ ಬಳಿಕ​ ಚಿರಂಜೀವಿ ಜೊತೆ ಪ್ರಕಾಶ್​ ರೈ ಫೋಟೋ ವೈರಲ್​; ಇನ್ನಷ್ಟು ಹೆಚ್ಚಿತು ಅನುಮಾನ

Prakash Raj: ಭುಜದ ಸರ್ಜರಿ ಬಳಿಕ ಪ್ರಕಾಶ್​ ರೈ ಹೆಚ್ಚು ಸಮಯ ವಿಶ್ರಾಂತಿ ತೆಗೆದುಕೊಂಡಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಅವರು ಅನೇಕ ಚಟುವಟಿಕೆಗಳಲ್ಲಿ ಈಗಾಗಲೇ ಭಾಗವಹಿಸುತ್ತಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ಅವರನ್ನು ಭೇಟಿ ಆಗಿದ್ದಾರೆ.

ಸರ್ಜರಿ ಬಳಿಕ​ ಚಿರಂಜೀವಿ ಜೊತೆ ಪ್ರಕಾಶ್​ ರೈ ಫೋಟೋ ವೈರಲ್​; ಇನ್ನಷ್ಟು ಹೆಚ್ಚಿತು ಅನುಮಾನ
ಸರ್ಜರಿ ಬಳಿಕ​ ಚಿರಂಜೀವಿ ಜೊತೆ ಪ್ರಕಾಶ್​ ರೈ ಫೋಟೋ ವೈರಲ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 17, 2021 | 1:03 PM

ನಟ ಪ್ರಕಾಶ್​ ರೈ (Prakash Rai) ಅವರು ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಸಿದ್ಧಾಂತಗಳ ಕಾರಣಕ್ಕಾಗಿ ಅವರ ಬಗ್ಗೆ ಪರ-ವಿರೋಧದ ಮಾತು ಕೇಳಿಬಂದರೂ ಕೂಡ ನಟನಾಗಿ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ವಿವಾದ ಎಷ್ಟೇ ಇದ್ದರೂ ಪ್ರಕಾಶ್​ ರಾಜ್​ (Prakash Raj) ಕಾಲ್​ಶೀಟ್​ಗಾಗಿ ನಿರ್ಮಾಪಕ-ನಿರ್ದೇಶಕರು ಇಂದಿಗೂ ಅವರ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಇತ್ತೀಚೆಗಷ್ಟೇ ಸಿನಿಮಾವೊಂದರ ಶೂಟಿಂಗ್​ ವೇಳೆ ಅವರು ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಅವರಿಗೆ ಸರ್ಜರಿ ಕೂಡ ಮಾಡಲಾಗಿತ್ತು. ಈಗ ಅವರು ಏನಾಏಕಿ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಜೊತೆ ಇರುವ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟನೆ ಮಾತ್ರವಲ್ಲದೇ ಅನೇಕ ವಿಚಾರಗಳಲ್ಲಿ ಪ್ರಕಾಶ್​ ರೈ ಅವರು ಮುಂದಾಳತ್ವ ವಹಿಸುತ್ತಾರೆ. ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ (MAA) ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಕುರಿತು ಬಹಳ ದೊಡ್ಡ ಚರ್ಚೆ ಆಗಿತ್ತು. ಪ್ರಕಾಶ್​ ರೈ ಮೂಲತಃ ತೆಲುಗಿನ ಕಲಾವಿದ ಅಲ್ಲ ಎಂಬ ಕಾರಣದಿಂದ ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸುವಂತಿಲ್ಲ ಎಂದು ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಲವರು ಪ್ರಕಾಶ್​ ರೈಗೆ ಸಪೋರ್ಟ್​ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡುತ್ತಿರುವವರಲ್ಲಿ ಚಿರಂಜೀವಿ ಕೂಡ ಪ್ರಮುಖಕರು ಎಂಬ ಮಾತಿದೆ. ಆ ಮಾತಿಗೆ ಪುಷ್ಟಿ ನೀಡುವ ರೀತಿಯಲ್ಲಿ ಈ ಫೋಟೋ ಕಣ್ಣು ಕುಕ್ಕುತ್ತಿದೆ.

ಭುಜದ ಸರ್ಜರಿ ಬಳಿಕ ಪ್ರಕಾಶ್​ ರೈ ಹೆಚ್ಚು ಸಮಯ ವಿಶ್ರಾಂತಿ ತೆಗೆದುಕೊಂಡಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ಅವರು ಅನೇಕ ಚಟುವಟಿಕೆಗಳಲ್ಲಿ ಈಗಾಗಲೇ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಜಿಮ್​ಗೂ ತೆರಳಿದ್ದಾರೆ. ಜಿಮ್​ನಲ್ಲಿಯೇ ಅವರು ಚಿರಂಜೀವಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಈ ಫೋಟೋಗೆ ಪ್ರಕಾಶ್​ ರೈ ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ಬೆಳಗ್ಗೆ ಜಿಮ್​ನಲ್ಲಿ ಬಾಸ್ ಜೊತೆ ಭೇಟಿ. ಸಿನಿಮಾದವರ ಸಮಸ್ಯೆ ಪರಿಹರಿಸಲು ಮುಂದಾಳತ್ವ ವಹಿಸಿದ್ದಕಾಗಿ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಸದಾ ಸ್ಫೂರ್ತಿ ನೀಡುವ ಅಣ್ಣಯ್ಯ. ಅವರನ್ನು ಪಡೆದಿರುವ ನಾವು ಧನ್ಯರು’ ಎಂದು ಪ್ರಕಾಶ್​ ರೈ ಬರೆದುಕೊಂಡಿದ್ದಾರೆ. ​ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವ ಈ ಕಲಾವಿದರ ನಡುವೆ ಉತ್ತಮ ಬಾಂಧವ್ಯ ಇದೆ.

ಇದನ್ನೂ ಓದಿ:

ಪ್ರೀತಿಸುವವರಿಗಾಗಿ ಆಸ್ಪತ್ರೆಯಿಂದಲೇ ಸೆಲ್ಫಿ ಕಳಿಸಿದ ಪ್ರಕಾಶ್​ ರೈ; ‘ನೀವು ಡೆವಿಲ್​ ಅಲ್ಲ’ ಎಂದ ಫ್ಯಾನ್ಸ್​

ನಟ ಪ್ರಕಾಶ್​ ರೈಗೆ ಗಾಯ; ಹೈದರಾಬಾದ್​ನಲ್ಲಿ ಶಸ್ತ್ರ ಚಿಕಿತ್ಸೆ: ಇಲ್ಲಿದೆ ಹೆಲ್ತ್​ ಅಪ್​ಡೇಟ್​

(Prakash Raj meets Megastar Chiranjeevi in gym after shoulder surgery)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ