ಪ್ರೀತಿಸುವವರಿಗಾಗಿ ಆಸ್ಪತ್ರೆಯಿಂದಲೇ ಸೆಲ್ಫಿ ಕಳಿಸಿದ ಪ್ರಕಾಶ್​ ರೈ; ‘ನೀವು ಡೆವಿಲ್​ ಅಲ್ಲ’ ಎಂದ ಫ್ಯಾನ್ಸ್​

Prakash Raj: ಶಸ್ತ್ರ ಚಿಕಿತ್ಸೆ ಆಗಿರುವುದಕ್ಕೆ ಭಯಪಡುವ ಅಗತ್ಯ ಇಲ್ಲ ಎಂದು ಪ್ರಕಾಶ್​ ರೈ ಹೇಳಿದ್ದಾರೆ. ಆಸ್ಪತ್ರೆ ಬೆಡ್​​ ಮೇಲೆ ಮಲಗಿಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಅವರು, ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

ಪ್ರೀತಿಸುವವರಿಗಾಗಿ ಆಸ್ಪತ್ರೆಯಿಂದಲೇ ಸೆಲ್ಫಿ ಕಳಿಸಿದ ಪ್ರಕಾಶ್​ ರೈ; ‘ನೀವು ಡೆವಿಲ್​ ಅಲ್ಲ’ ಎಂದ ಫ್ಯಾನ್ಸ್​
ಪ್ರಕಾಶ್​ ರೈ
Follow us
TV9 Web
| Updated By: ಮದನ್​ ಕುಮಾರ್​

Updated on:Aug 12, 2021 | 9:58 AM

ಬಹುಭಾಷಾ ನಟ ಪ್ರಕಾಶ್​ ರೈ​ (Prakash Rai) ಅವರು ಇತ್ತೀಚೆಗಷ್ಟೇ ಶೂಟಿಂಗ್​ ಸಂದರ್ಭದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಆ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ತಮಗೆ ಏನಾಗಿದೆ ಎಂಬ ಬಗ್ಗೆ ಪ್ರಕಾಶ್​ ರೈ ಟ್ವಿಟರ್​ ಮೂಲಕ ಮಾಹಿತಿ ನೀಡಿ, ಅಭಿಮಾನಿಗಳ ಆತಂಕವನ್ನು ದೂರ ಮಾಡಲು ಪ್ರಯತ್ನಿಸಿದ್ದರು. ಈಗ ಅವರಿಗೆ ಶಸ್ತ್ರ ಚಿಕಿತ್ಸೆ (Surgery) ಮಾಡಲಾಗಿದೆ. ಆಪರೇಷನ್​ ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಅವರು ಅದನ್ನು ಅಭಿಮಾನಿಗಳ ಜೊತೆ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ಆರೋಗ್ಯ ಈಗ ಹೇಗಿದೆ ಎಂಬ ಬಗ್ಗೆ ಅಪ್​ಡೇಟ್ ನೀಡಿದ್ದಾರೆ.

ಧನುಶ್​ ಅಭಿನಯದ ಡಿ44 ಸಿನಿಮಾದ ಶೂಟಿಂಗ್​ ವೇಳೆ ಪ್ರಕಾಶ್​ ರೈ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ಅವರು ಹೈದರಾಬಾದ್​ಗೆ ತೆರಳಿದ್ದರು. ತಮ್ಮ ಸ್ನೇಹಿತ ವೈದ್ಯರಿಂದಲೇ ಹೈದರಾಬಾದ್​ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದರು.

ಪ್ರಕಾಶ್​ ರಾಜ್​ ಪೆಟ್ಟು ಮಾಡಿಕೊಂಡಿರುವುದು ಮತ್ತು ಆಪರೇಷನ್​ ಅಗತ್ಯವಿದೆ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಭಯಪಡುವ ಅಗತ್ಯ ಇಲ್ಲ ಎಂದು ಪ್ರಕಾಶ್​ ರೈ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಪತ್ರೆ ಬೆಡ್​​ ಮೇಲೆ ಮಲಗಿಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಅವರು, ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಪ್ರೀತಿಯಿಂದ ಕಮೆಂಟ್​ ಮಾಡಿದ್ದಾರೆ.

‘ಡೆವಿಲ್​ ಈಸ್​ ಬ್ಯಾಕ್​. ಸರ್ಜರಿ ಯಶಸ್ವಿ ಆಗಿದೆ. ಆತ್ಮೀಯ ಗೆಳೆಯ ಡಾ. ಗುರುವರೆಡ್ಡಿ ಅವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಪ್ರಕಾಶ್​ ರೈ ಬರೆದುಕೊಂಡಿದ್ದಾರೆ. ‘ಸರ್​, ನೀವು ಸಿನಿಮಾದಲ್ಲಿ ಮಾತ್ರ ಡೆವಿಲ್​. ನೈಜ ಬದುಕಿನಲ್ಲಿ ಏಂಜಲ್​’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಇತ್ತೀಚೆಗೆ ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಶಿಯೇಷನ್​ (MAA) ಚುನಾವಣೆ ಕಾರಣಕ್ಕಾಗಿ ಪ್ರಕಾಶ್​ ರೈ ಸುದ್ದಿ ಆಗಿದ್ದರು. MAA ಚುನಾವಣೆಯಲ್ಲಿ ಅವರು ಪ್ರೆಸಿಡೆಂಟ್​ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಆದರೆ ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಪ್ರಕಾಶ್​ ರೈ ಅವರು ಮೂಲತಃ ತೆಲುಗು ಕಲಾವಿದ ಅಲ್ಲ. ಹಾಗಾಗಿ ಅವರು ಮಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತಕರಾರು ತೆಗೆಯಲಾಗಿದೆ. ಎಷ್ಟೇ ವಿರೋಧ ಇದ್ದರೂ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಪ್ರಕಾಶ್​ ರೈ ಬಂದಿಲ್ಲ.

ಇದನ್ನೂ ಓದಿ:

ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ

Published On - 8:53 am, Thu, 12 August 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ