ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್​ಗೆ ಕಾಂಪಿಟೇಷನ್​ ಕೊಡೋಕೆ ಬಂದ ಸ್ಟಾರ್​ ನಟ?; ಸ್ಪರ್ಧೆ ಮತ್ತಷ್ಟು ಕಠಿಣ

ಮಾ ಚುನಾವಣಾ ಕಣದಲ್ಲಿ ಪ್ರಕಾಶ್​ ರಾಜ್​, ಮಂಚು ವಿಷ್ಣು, ಹೇಮಾ ಹಾಗೂ ಜೀವಿತಾ ಇದ್ದಾರೆ. ಈಗ ಬಹುಭಾಷಾ​ ಸ್ಟಾರ್​ ನಟ ಸೋನು ಸೂದ್​ ಕೂಡ ಈ ಚುನಾವಣೆಗೆ ಸ್ಪರ್ಧಿಸೋಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್​ಗೆ ಕಾಂಪಿಟೇಷನ್​ ಕೊಡೋಕೆ ಬಂದ ಸ್ಟಾರ್​ ನಟ?; ಸ್ಪರ್ಧೆ ಮತ್ತಷ್ಟು ಕಠಿಣ
ಪ್ರಕಾಶ್​ ರೈ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 08, 2021 | 5:59 PM

ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ (MAA) ಅಧ್ಯಕ್ಷ ಸ್ಥಾನಕ್ಕೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಹಿರಿಯ ನಟ ಪ್ರಕಾಶ್​ ರಾಜ್​ (ಪ್ರಕಾಶ್ ರೈ) ಸೇರಿ ಅನೇಕರು ಚುನಾವಣಾ ಕಣದಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಮಾ ಎಲೆಕ್ಷನ್​ಗೆ ಮತ್ತೋರ್ವ ಸ್ಟಾರ್ ನಟ ಸ್ಪರ್ಧಿಸಲಿದ್ದಾರೆ ಎನ್ನುವ ವದಂತಿ ಹರಿದಾಡಿದೆ.

ಮಾ ಚುನಾವಣಾ ಕಣದಲ್ಲಿ ಪ್ರಕಾಶ್​ ರಾಜ್​, ಮಂಚು ವಿಷ್ಣು, ಹೇಮಾ ಹಾಗೂ ಜೀವಿತಾ ಇದ್ದಾರೆ. ಈಗ ಬಹುಭಾಷಾ​ ಸ್ಟಾರ್​ ನಟ ಸೋನು ಸೂದ್​ ಕೂಡ ಈ ಚುನಾವಣೆಗೆ ಸ್ಪರ್ಧಿಸೋಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹೀಗೊಂದು ಸುದ್ದಿ ಟಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಈ ವದಂತಿ ಹಬ್ಬೋಕು ಒಂದು ಕಾರಣ ಇದೆ. ಸೋನು ಸೂದ್​ ಅವರು ತೆಲಂಗಾಣ ಸಚಿವ ಕೆಟಿಆರ್​ ಅವರನ್ನು ಭೇಟಿ ಮಾಡಿದ್ದಾರೆ. ಇದರಿಂದ ಈ ವದಂತಿ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.

ನಟ ಸೋನು ಸೂದ್​ ಕೊವಿಡ್​ ಮೊದಲನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ಅವರು ತಮ್ಮ ಸಹಾಯವನ್ನು ಮುಂದುವರಿಸಿದ್ದಾರೆ. ಸಂಕಷ್ಟದಲ್ಲಿದ್ದವರು ಟ್ವೀಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಸಹಾಯ ನೀಡುತ್ತಿದ್ದಾರೆ. ಇಷ್ಟೆಲ್ಲಾ ಜನಪರ ಕಾರ್ಯ ಮಾಡಿರುವ ಸೋನು ಸೂದ್​ ಈಗ ಮಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇದೆ.

ಟಾಲಿವುಡ್​ನ ಮೂವೀ ಆರ್ಟಿಸ್ಟ್​ ಅಸೋಸಿಯೇಷನ್​ (MAA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪ್ರಕಾಶ್​ ರಾಜ್​ ತೀರ್ಮಾನಿಸಿದ್ದಾರೆ. ಆದರೆ ಅವರು ಈ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಕೆಲವರು ಆಕ್ಷೇಪ ಎತ್ತಿದ್ದಾರೆ. ಪ್ರಕಾಶ್​ ರಾಜ್​ ಮೂಲತಃ ಕನ್ನಡದವರು. ಅವರ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಎಂಎಎ ಎಲೆಕ್ಷನ್​ನಲ್ಲಿ ಸ್ಪರ್ಧಿಸುವುದು ಸರಿಯಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಈಗ ಸೋನು ಕೂಡ ಸ್ಪರ್ಧೆ ಮಾಡಿದರೆ, ಕಾಂಪಿಟೇಷನ್​ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ: ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

ಸೈಕಲ್​ ಹತ್ತಿ ಬ್ರೆಡ್​-ಮೊಟ್ಟೆ​ಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಸೋನು ಸೂದ್​! ವಿಡಿಯೋ ನೋಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್