‘ಪ್ರಭಾಕರ್ ಕಾಲಿಗೆ ಹುಳ ಆಗಿತ್ತು ಎಂಬುದೆಲ್ಲ ಸುಳ್ಳು, ಆದರೆ ಪೆಟ್ಟಾಗಿದ್ದು ನಿಜ’; ಸರಿಗಮ ವಿಜಿ ತೆರೆದಿಟ್ಟ ಸತ್ಯ
‘ಪ್ರಭಾಕರ್ ಒಳ್ಳೆಯ ವ್ಯಕ್ತಿ ಆಗಿದ್ದರು. ಎಲ್ಲರಿಗೂ ಬೇಕಾಗಿದ್ದ ಮನುಷ್ಯನಾಗಿದ್ದರು. ಇಂದು ಫೇಮಸ್ ಆಗಿರುವ ಅನೇಕ ಫೈಟರ್ಗಳು ಪ್ರಭಾಕರ್ ಜೊತೆ ಕೆಲಸ ಮಾಡುತ್ತಿದ್ದರು’ ಎಂದು ನಟ ಸರಿಗಮ ವಿಜಿ ಅವರು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದವರು ನಟ ಟೈಗರ್ ಪ್ರಭಾಕರ್. ಅವರು ನಿಧನರಾಗಿ 20 ವರ್ಷ ಕಳೆದಿದೆ. ಇಂದಿಗೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮೊದಲು ಖಳನಟನಾಗಿ, ನಂತರ ಹೀರೋ ಆಗಿ ಮಿಂಚಿದ ಅವರು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರ ಜೊತೆ ಒಡನಾಡಿದ ಕಲಾವಿದರಲ್ಲಿ ಸರಿಗಮ ವಿಜಿ ಕೂಡ ಪ್ರಮುಖರು. ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ಪ್ರಭಾಕರ್ ಅವರಿಗೆ ಗಾಯಗಳಾಗಿದ್ದು ನಿಜ. ಅದರ ಜೊತೆಗೆ ಕೆಲವು ಗಾಸಿಪ್ಗಳು ಕೂಡ ಹುಟ್ಟಿಕೊಂಡಿದ್ದವು. ಅವುಗಳನ್ನು ಸರಿಗಮ ವಿಜಿ ತಳ್ಳಿ ಹಾಕಿದ್ದಾರೆ.
‘ನಾನು ಪ್ರಭಾಕರ್ ಅವರ ಜೊತೆಯಲ್ಲೇ ಇರುತ್ತಿದ್ದೆ. ಅವರ ಕಾಲಿಗೆ ಹುಳಬಿದ್ದಿತ್ತು ಎಂಬುದೆಲ್ಲ ಸುಳ್ಳು. ಕಾಲಿನಲ್ಲಿ ದೊಡ್ಡ ತೂತು ಆಗಿತ್ತು. ಅವರು ಆಸ್ಪತ್ರೆಯಲ್ಲಿ ಹೋಗಿ ಮಲಗಿದರೆ ತಿಂಗಳುಗಟ್ಟಲೆ ಅಲ್ಲೇ ಇರಬೇಕಾಗುತ್ತದೆ. ಅಷ್ಟರಲ್ಲಿ ಪ್ರಭಾಕರ್ ಬದಲು ಇನ್ನೊಬ್ಬರು ಬಂದು ಅವಕಾಶ ಪಡೆದುಕೊಂಡುಬಿಟ್ಟರೆ ಏನು ಮಾಡೋದು? ಹಾಗಾಗಿ ಹೆಚ್ಚೇನೂ ಚಿಕಿತ್ಸೆ ಪಡೆದುಕೊಳ್ಳದೇ ಅವರು ಶೂಟಿಂಗ್ಗೆ ಬಂದುಬಿಡುತ್ತಿದ್ದರು. ಆ ನಿರ್ಲಕ್ಷ್ಯದಿಂದ ಅವರ ಗಾಯ ದೊಡ್ಡದಾಯಿತು’ ಎಂದು ಸರಿಗಮ ವಿಜಿ ಹೇಳಿದ್ದಾರೆ.
ಇದನ್ನೂ ಓದಿ:
ಟೈಗರ್ ಪ್ರಭಾಕರ್ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್ಗೆ ಪ್ರಭಣ್ಣನ ನೆನಪು

ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ

ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ

ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ

ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
