‘ಟಿಣಿಂಗಾ ಮಿಣಿಂಗಾ ಟಿಶ್ಯಾ..’ ಹಾಡು ನೋಡಿ ಮನಸಾರೆ ಎಂಜಾಯ್​ ಮಾಡಿದ ಫೈಟ್​ ಮಾಸ್ಟರ್​ ರಾಮ್​-ಲಕ್ಷ್ಮಣ್​

ಭಾರತೀಯ ಚಿತ್ರರಂಗದಲ್ಲಿ ರಾಮ್​-ಲಕ್ಷ್ಮಣ್​ ಅವರಿಗೆ ತುಂಬ ಬೇಡಿಕೆ ಇದೆ. ಕನ್ನಡದ ಹಲವು ಸಿನಿಮಾಗಳಿಗೆ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಅವರು ‘ಸಲಗ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Aug 21, 2021 | 4:45 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಸಲಗ’ ಚಿತ್ರವು ಹಾಡುಗಳ ಮೂಲಕ ಭಾರಿ ಸೌಂಡು ಮಾಡುತ್ತಿದೆ. ‘ದುನಿಯಾ’ ವಿಜಯ್​ (Duniya Vijay) ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿನ ‘ಟಿಣಿಂಗಾ ಮಿಣಿಂಗಾ ಟಿಶ್ಯಾ’ (Tininga Mininga Tishya) ಹಾಡು ಸಖತ್​ ವೈರಲ್​ ಆಗಿದೆ. ಚರಣ್​ ರಾಜ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಗೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಖ್ಯಾತ ಫೈಟ್​ ಮಾಸ್ಟರ್​ಗಳಾದ ರಾಮ್​ ಲಕ್ಷ್ಮಣ್​ (Ram Lakshman) ಅವರು ಇತ್ತೀಚೆಗೆ ಈ ಹಾಡನ್ನು ನೋಡಿ ಮನಸಾರೆ ಎಂಜಾಯ್​ ಮಾಡಿದ್ದಾರೆ. ಆ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. 

ಭಾರತೀಯ ಚಿತ್ರರಂಗದಲ್ಲಿ ರಾಮ್​-ಲಕ್ಷ್ಮಣ್​ ಅವರಿಗೆ ತುಂಬ ಬೇಡಿಕೆ ಇದೆ. ಕನ್ನಡದ ಹಲವು ಸಿನಿಮಾಗಳಿಗೆ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಅವರು ‘ಸಲಗ’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ಸಲಗ ಸಾಂಗ್​ ನೋಡಿದ್ವಿ. ವಿಜಯ್​ ಅವರು ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿರುವುದು ನಮಗೆ ಖುಷಿ ತಂದಿದೆ’ ಎಂದು ಅವರು ಹೇಳಿದ್ದಾರೆ. ಸಿದ್ಧಿ ಜನಾಂಗದ ಕಲಾವಿದರು ನರ್ತಿಸಿರುವ ‘ಟಿಣಿಂಗಾ ಮಿಣಿಂಗಾ ಟಿಶ್ಯಾ’ ಹಾಡು ಅವರಿಗೆ ತುಂಬಾ ಇಷ್ಟ ಆಗಿದೆ. ಇಡೀ ತಂಡಕ್ಕೆ ಅವರು ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಇದನ್ನೂ ಓದಿ:

‘ಸಲಗ’ ಚಿತ್ರದ ಹಾಡಿಗೆ ಸಿಕ್ಕ ಯಶಸ್ಸಿನ ಹಿನ್ನೆಲೆ; ವೇದಿಕೆಯಲ್ಲೇ ಭಾವುಕರಾದ ಗೀತಾ ಸಿದ್ದಿ

ದುನಿಯಾ ವಿಜಯ್​ ‘ಸಲಗ’ ಬೇರೆ ಭಾಷೆಗಳಲ್ಲೇಕೆ ರಿಲೀಸ್​ ಆಗುತ್ತಿಲ್ಲ? ಇಲ್ಲಿದೆ ಮಹತ್ವದ ಕಾರಣ

Follow us on

Click on your DTH Provider to Add TV9 Kannada