75ನೇ ವಾರ್ಷಿಕೋತ್ಸವ ಸ್ಮರಣಾರ್ಥ ಪಿಯಾಜಿಯೊ ಎರಡು ವೆಸ್ಪಾ ಸ್ಕೂಟರ್ಗಳನ್ನು ಲಾಂಚ್ ಮಾಡಿದೆ
ವೆಸ್ಪಾ ಸ್ಕೂಟರ್ಸ್ ಸಂಸ್ಥೆಯು ತನ್ನ 75 ನೇ ವಾರ್ಷಿಕೋತ್ಸದ ಸ್ಮರಣಾರ್ಥ ಸ್ಕೂಟರ್ಗಳನ್ನು ಲಾಂಚ್ ಮಾಡಿದೆ. ಸದರಿ ವಾಹನಗಳು ಎರಡು ಬಣ್ಣಗಳಲ್ಲಿ ಲಭ್ಯವಿವೆ. ಒಂದು ಮೆಟ್ಯಾಲಿಕ್ ಹಳದಿ ಬಣ್ಣವಾದರೆ ಮತ್ತೊಂದು ದಟ್ಟ ಹೊಗೆ ಬಣ್ಣವಾಗಿದೆ.
ಪಿಯಾಜಿಯೋ ವೆಸ್ಪಾ 75 ನೇ ಆವೃತ್ತಿಯ ಎರಡು ಸ್ಕೂಟರ್ಗಳನ್ನು ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. 125 ಸಿಸಿ ಸ್ಕೂಟರ್ ಎಕ್ಸ್ ಶೋರೂಮ್ ಬೆಲೆ (ಪುಣೆಯಲ್ಲಿ) ರೂ. 1.26 ಲಕ್ಷವಾಗಿದ್ದರೆ 150 ಸಿಸಿ ಸ್ಕೂಟರ್ ಬೆಲೆ ರೂ. 1.39 ಲಕ್ಷವಾಗಿದೆ. ನಿಮಗೆ ಖರೀದಿಸುವ ಮನಸ್ಸಿದ್ದರೆ ರೂ. 5,000 ಮುಂಗಡ ಕಟ್ಟಿ ಬುಕ್ ಮಾಡಬಹುದಾಗಿದೆ. ಕಂಪನಿಯ ವೆಬ್ ಸೈಟ್ಗೆ ಲಾಗಿನ್ ಆದರೆ ಬುಕಿಂಗ್ ಮತ್ತು ಅಧಿಕೃತ ಡೀಲರ್ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ವೆಸ್ಪಾ ಸ್ಕೂಟರ್ಸ್ ಸಂಸ್ಥೆಯು ತನ್ನ 75 ನೇ ವಾರ್ಷಿಕೋತ್ಸದ ಸ್ಮರಣಾರ್ಥ ಸ್ಕೂಟರ್ಗಳನ್ನು ಲಾಂಚ್ ಮಾಡಿದೆ. ಸದರಿ ವಾಹನಗಳು ಎರಡು ಬಣ್ಣಗಳಲ್ಲಿ ಲಭ್ಯವಿವೆ. ಒಂದು ಮೆಟ್ಯಾಲಿಕ್ ಹಳದಿ ಬಣ್ಣವಾದರೆ ಮತ್ತೊಂದು ದಟ್ಟ ಹೊಗೆ ಬಣ್ಣವಾಗಿದೆ. ಸ್ಕೂಟರ್ಗಳೊಂದಿಗೆ ಒಂದು ಸಂಗ್ರಹಯೋಗ್ಯ ಪೋಸ್ಟ್ ಕಾರ್ಡ್ ಮತ್ತು ವಿಂಟೇಜ್ ವೆಸ್ಪಾ ಚಿಹ್ನೆಯನ್ನೊಳಗೊಂಡ ವೆಲ್ಕಮ್ ಕಿಟ್ ಸಿಗಲಿದೆ.
ಹೊಸ ಸ್ಕೂಟರ್ಗಳ ಎರಡೂ ಬದಿಯಲ್ಲಿ ವಿಶೇಷ ಸಂಖ್ಯೆ 75 ರ ಲೇಬಲ್ಗಳನ್ನು ಮೆತ್ತಲಾಗಿದೆ. ಈ ಲೇಬಲ್ಗಳನ್ನು ಎರಡೂ ಸ್ಕೂಟರ್‌ಗಳ ಮುಂಭಾಗದ ಫೆಂಡರ್ ಮತ್ತು ಗ್ಲೌವ್‌ಬಾಕ್ಸ್‌ನಲ್ಲಿ ಸಹ ಕಾಣಬಹುದು. ಅದರ ಜೊತೆಗೆ, ಸ್ಕೂಟರ್‌ಗಳು ವಿಂಡ್‌ಸ್ಕ್ರೀನ್ ಮತ್ತು ಚಕ್ರಗಳ ಮೇಲೆ ಅದ್ಭುತವಾದ ಫಿನಿಶ್ ಅನ್ನು ಸಹ ಹೊಂದಿವೆ.
ಇದನ್ನೂ ಓದಿ: ಕಣ್ಣೆದುರೇ ಭೀಕರವಾಗಿ ಕುಸಿದ ಗುಡ್ಡ; ಸೆಕೆಂಡ್ಗಳ ಅಂತರದಲ್ಲಿ ಸಾವಿನಿಂದ ಪಾರಾದ 14 ಮಂದಿ-ಭಯಾನಕ ವಿಡಿಯೋ ಇಲ್ಲಿದೆ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

