AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೆದುರೇ ಭೀಕರವಾಗಿ ಕುಸಿದ ಗುಡ್ಡ; ಸೆಕೆಂಡ್​ಗಳ ಅಂತರದಲ್ಲಿ ಸಾವಿನಿಂದ ಪಾರಾದ 14 ಮಂದಿ-ಭಯಾನಕ ವಿಡಿಯೋ ಇಲ್ಲಿದೆ

ಆ ಗುಡ್ಡ ದೊಡ್ಡದಾಗಿದ್ದು, ಅದರ ಕೆಳಗೇ ಬಸ್​ ನಿಂತಿದೆ. ಒಂದು ಬದಿ ಮಾತ್ರ ಕುಸಿತವಾಗಿದೆ. ಹಾಗೊಮ್ಮೆ ಇಡೀ ಗುಡ್ಡ ಕುಸಿದಿದ್ದರೆ ಬಸ್​ ಮಣ್ಣಿನಡಿ ಸಿಲುಕಿ, ಪ್ರಯಾಣಿಕರನ್ನು ಉಳಿಸುವುದೂ ದೊಡ್ಡ ಸಾಹಸವೇ ಆಗುತ್ತಿತ್ತು.

ಕಣ್ಣೆದುರೇ ಭೀಕರವಾಗಿ ಕುಸಿದ ಗುಡ್ಡ; ಸೆಕೆಂಡ್​ಗಳ ಅಂತರದಲ್ಲಿ ಸಾವಿನಿಂದ ಪಾರಾದ 14 ಮಂದಿ-ಭಯಾನಕ ವಿಡಿಯೋ ಇಲ್ಲಿದೆ
ನೋಡನೋಡುತ್ತಿದ್ದಂತೆ ಕುಸಿದ ಗುಡ್ಡ
TV9 Web
| Edited By: |

Updated on:Aug 21, 2021 | 3:12 PM

Share

ಒಂದೇ ಕ್ಷಣದಲ್ಲಿ ಸಾವು ಕಣ್ಣೆದುರು ಬಂದು ಹೋದರೆ..! ಇಂಥದ್ದೊಂದು ಅನುಭವವನ್ನು ಉತ್ತರಾಖಂಡ್​​ನಲ್ಲಿ ಸುಮಾರು 14ಕ್ಕೂ ಹೆಚ್ಚು ಮಂದಿ ಒಂದೇ ಸಲಕ್ಕೆ ಪಡೆದಿದ್ದಾರೆ. ಸ್ವಲ್ಪೇಸ್ವಲ್ಪದರಲ್ಲಿ ಬಹುದೊಡ್ಡ ದುರಂತದಿಂದ ಪಾರಾಗಿದ್ದಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದ್ದು, ನೋಡಿದರೆ ಭಯ ಹುಟ್ಟದೆ ಇರದು. ಉತ್ತರಾಖಂಡ್ ರಾಜ್ಯದ ನೈನಿತಾಲ್​ ಎಂಬಲ್ಲಿ ಬಹುದೊಡ್ಡ ಗುಡ್ಡದ ಬದಿಯಲ್ಲಿರುವ ಚಿಕ್ಕದಾದ ಡಾಂಬರು ರಸ್ತೆಯಲ್ಲಿ ಬಸ್​ ಹೋಗುತ್ತಿತ್ತು. ಇದರಲ್ಲಿ 14ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಅದು ಕಾಡು ಹೆಚ್ಚಾಗಿರುವ ಪ್ರದೇಶ..ನೋಡನೋಡುತ್ತಿದ್ದಂತೆ ಬಸ್​ನ ಎದುರೇ ಗುಡ್ಡೆ ಕುಸಿದು ಬಿದ್ದಿದೆ. ಬೆಟ್ಟದ ಮೇಲಿಂದ ಕಲ್ಲು, ಮರಗಳೆಲ್ಲ ಉದುರುದುರಿ ಬುಡಸಮೇತ ಕಿತ್ತು ರಸ್ತೆಗೆ ಉರುಳಿವೆ. ಬಸ್​ ಚೂರೇಚೂರು ಅಂತರ ಹಿಂದೆ ಇದ್ದಿದ್ದರಿಂದ ಬಚಾವ್ ಆಗಿದೆ. 

ಮೊದಲು ಸಣ್ಣ ಪ್ರಮಾಣದಲ್ಲಿ ಮಣ್ಣು ಉದುರಿ ರಸ್ತೆಗೆ ಬಿತ್ತು. ನೋಡನೋಡುತ್ತಿದ್ದಂತೆ ಇಡೀ ಗುಡ್ಡ ಕುಸಿತವಾಗಿದ್ದನ್ನು ನೀವು ಕೆಳಗಿನ ವಿಡಿಯೋದಲ್ಲಿ ನೋಡಬಹುದು. ಬಸ್​ ಚಾಲಕ ತಡಮಾಡದೆ ವಾಹವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಆದರೆ ಅದರಲ್ಲಿದ್ದ ಪ್ರಯಾಣಿಕರು ಚಲಿಸುತ್ತಿದ್ದ ಬಸ್​​ನಿಂದ ಕೆಳಗಿಳಿದು, ತಮ್ಮ ಬ್ಯಾಗ್​​ ಹಿಡಿದು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಕೆಲವರಂತೂ ಬಸ್​ ಕಿಟಿಕಿಯಿಂದಲೇ ಹಾರಿ, ಓಡಿದ್ದಾರೆ.

ನೈನಿತಾಲ್​​ನಲ್ಲಿ ಈ ಘಟನೆ ನಡೆದದ್ದು ಶುಕ್ರವಾರ ಎಂದು ಹೇಳಲಾಗಿದೆ. ಯಾರದ್ದೂ ಜೀವ ಹಾನಿಯಾಗಿಲ್ಲ. ಅದೃಷ್ಟವಶಾತ್​ ಯಾರಿಗೂ ಗಾಯವೂ ಆಗಿಲ್ಲ. ಆ ಗುಡ್ಡ ದೊಡ್ಡದಾಗಿದ್ದು, ಅದರ ಕೆಳಗೇ ಬಸ್​ ನಿಂತಿದೆ. ಒಂದು ಬದಿ ಮಾತ್ರ ಕುಸಿತವಾಗಿದೆ. ಹಾಗೊಮ್ಮೆ ಇಡೀ ಗುಡ್ಡ ಕುಸಿದಿದ್ದರೆ ಬಸ್​ ಮಣ್ಣಿನಡಿ ಸಿಲುಕಿ, ಪ್ರಯಾಣಿಕರನ್ನು ಉಳಿಸುವುದೂ ದೊಡ್ಡ ಸಾಹಸವೇ ಆಗುತ್ತಿತ್ತು ಎಂದು ಹೇಳಲಾಗಿದೆ. ಅತಿಯಾದ ಮಳೆಯಿಂದ ಇಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸದ್ಯ ಈ ರಸ್ತೆ ಬ್ಲಾಕ್​ ಆಗಿದೆ.

ಇಲ್ಲಿದೆ ನೋಡಿ ಭಯಾನಕ ವಿಡಿಯೋ:

ಅತಿಯಾದ ಮಳೆಯ ಎಚ್ಚರಿಕೆ ಉತ್ತರಾಖಂಡ್​ನಲ್ಲಿ ಎರಡು ದಿನಗಳ ಕಾಲ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ಶುಕ್ರವಾರ (ಆಗಸ್ಟ್​ 20) ನೀಡಿದೆ. ಇದರೊಂದಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಕೂಡ ಸಜ್ಜಾಗಿದ್ದು, ಎಲ್ಲ ರೀತಿಯ ರಕ್ಷಣಾ ವ್ಯವಸ್ಥೆಗೆ ಬೇಕದ ಸಿದ್ಧತೆ ಮಾಡಿಕೊಂಡಿದೆ.  ಇನ್ನು ಉತ್ತರಾಖಂಡ್​​ನ ಕೆಲವು ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಭರ್ಜರಿ ಮಳೆಯಾಗುವ ಎಚ್ಚರಿಕೆಯನ್ನೂ ಐಎಂಡಿ ನೀಡಿದೆ.   

ಇದನ್ನೂ ಓದಿ: Pro Kabaddi League: ಹರಾಜಿಗೂ ಮುನ್ನ ತಮ್ಮ ನಾಯಕರನ್ನು ಕೈಬಿಟ್ಟ 9 ತಂಡಗಳು! ಬೆಂಗಳೂರಿನಲ್ಲೇ ಉಳಿದ ಪವನ್ ಶೆರಾವತ್

Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

Published On - 3:11 pm, Sat, 21 August 21

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ